ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಪ್ರತೀ ವರ್ಷದಂತೆ ಈ ಬಾರಿಯೂ ಕೂಡಾ ದೇಶ ಕಾಯುವ ವೀರ ಯೋಧರೊಂದಿಗೆ ದೀಪಾವಳಿ ಆಚರಿಸಿಕೊಳ್ಳುತ್ತಿದ್ದು, ಜಮ್ಮು ಮತ್ತು ಕಾಶ್ಮೀರದ ನೌಶೇರಾ ಸೆಕ್ಟರ್ ಗೆ ಭೇಟಿ ನೀಡಿದ್ದಾರೆ.
ಇಂದು ಪ್ರಧಾನಿ ಮೋದಿಯವರು ರಜೌರಿಯ ನೌಶೇರಾದಲ್ಲಿರುವ ಎಲ್ಒಸಿಯ ಫಾರ್ವರ್ಡ್ ಪೋಸ್ಟ್ಗಳಲ್ಲಿ ಸೈನಿಕರ ನಡುವೆ ದೀಪಾವಳಿ ಆಚರಿಸಲಿದ್ದಾರೆ.
ಗಡಿ ಪ್ರದೇಶವಾಗಿರುವ ನೌಶೇರಾ ಸೆಕ್ಟರ್ನಲ್ಲಿ ಇತ್ತೀಚೆಗೆ ಸೇನೆ ಮತ್ತು ಭಯೋತ್ಪಾದಕರ ನಡುವೆ ಭಾರಿ ಗುಂಡಿನ ಕಾಳಗ ನಡೆದಿತ್ತು. ಸದ್ಯ ಉಗ್ರರ ವಿರುದ್ಧದ ಕಾರ್ಯಾಚರಣೆ ಚಾಲ್ತಿಯಲ್ಲಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಕಳೆದ ಐದು ವರ್ಷಗಳಿಂದ ನರೇಂದ್ರ ಮೋದಿಯವರು ದೇಶಕಾಯುವ ಸೈನಿಕರೊಂದಿಗೆ ದೀಪಾವಳಿಯನ್ನು ಆಚರಿಸಿಕೊಳ್ಳುತ್ತ ಬಂದಿದ್ದಾರೆ. ಅವರು ಇಂದು ಜಮ್ಮು ಮತ್ತು ಕಾಶ್ಮೀರದ ನೌಶೇರಾ ಸೆಕ್ಟರ್ ನಲ್ಲಿ ದೀಪಾವಳಿ ಹಬ್ಬ ಆಚರಿಸಲಿದ್ದು, ಅಧಿಕೃತ ಮೂಲಗಳು ನೌಶೇರಾದ ಸೇನಾ ಪೋಸ್ಟ್ನಲ್ಲಿ ಪ್ರಧಾನ ಮಂತ್ರಿಯವರು ಸೇನಾ ಪಡೆಗಳೊಂದಿಗೆ ಇರುವ ಫೋಟೋಗಳನ್ನು ಹಂಚಿಕೊಂಡಿವೆ.
ಇದನ್ನೂ ಓದಿರಿ: ದೇಶದ ಜನತೆಗೆ ದೀಪಾವಳಿ ಗಿಫ್ಟ್: ಪೆಟ್ರೋಲ್ ಮೇಲಿನ ಅಬಕಾರಿ ಸುಂಕ 5 ರೂ., ಡೀಸೆಲ್ ಮೇಲೆ 10 ರೂ. ಕಡಿತ