pm-kisan-samman-nidhi-yojana-pm-modi-transfers-rs-116292-crore-to-the-beneficiary-farmers-account

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಕಿಸಾನ್ ಸಮ್ಮಾನ್ ನಿಧಿಯ 9 ನೇ ಕಂತಿನ ಹಣವನ್ನು ಮಧ್ಯಾಹ್ನ 12.35 ಕ್ಕೆ ರೈತರ ಖಾತೆಗೆ ನೇರವಾಗಿ ಜಮೆ ಮಾಡಿದ್ದಾರೆ. ಪಿಎಂ ಕಿಸಾನ್ (PM Kisan) ಯೋಜನೆಯಡಿ ನೋಂದಾಯಿಸಲಾದ ರೈತರ ಬ್ಯಾಂಕ್ ಖಾತೆಗಳಿಗೆ 2000 ರೂಗಳ ಕಂತನ್ನು ನೇರವಾಗಿ ವರ್ಗಾಯಿಸಲಾಗಿದೆ.

ರೈತರ ಏಳಿಗೆಗಾಗಿ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯನ್ನು ಜಾರಿಗೆ ತಂದಿದ್ದು, ಇಂದಿಗೆ 9 ನೆಯ ಕಂತು ಬಿಡುಗಡೆಯಾಗಿದೆ. ಈ ಯೋಜನೆಯಡಿ ಇಲ್ಲಿಯವರೆಗೆ ಒಟ್ಟು 1,16,292.88 ಕೋಟಿ ರೂ ನೇರವಾಗಿ ರೈತರ ಖಾತೆಗೆ ವರ್ಗಾವಣೆಯಾಗಿದೆ.

ಈ ರೀತಿ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಿ
1. ನಿಮ್ಮ ಖಾತೆಗೆ ಈ ಕಂತಿನ ಹಣ ಬರುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು https://pmkisan.gov.in ವೆಬ್‌ಸೈಟ್‌ಗೆ ಭೇಟಿ ನೀಡಿ.
2. ನಂತರ ಬಲಭಾಗದಲ್ಲಿರುವ ಫಾರ್ಮರ್ಸ್ ಕಾರ್ನರ್  (Farmers Corner) ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
3. ಇದಾದ ನಂತರ ಫಲಾನುಭವಿ ಸ್ಟೇಟಸ್ (Beneficiary Status) ಆಯ್ಕೆಯನ್ನು ಆರಿಸಿ.
4. ಬಳಿಕ ನಿಮ್ಮ ಮುಂದೆ ಹೊಸ ಪುಟ ತೆರೆಯುತ್ತದೆ.
5. ಈ ಪುಟದಲ್ಲಿ ನೀವು ನಿಮ್ಮ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
6. ಇದರ ನಂತರ ನೀವು ನಿಮ್ಮ ಖಾತೆಗೆ ಹಣ ಬರುತ್ತದೆಯೋ? ಇಲ್ಲವೋ? ಅಥವಾ ಎಲ್ಲಿ ಅಡಚಣೆ ಉಂಟಾಗಿದೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯುತ್ತೀರಿ.

LEAVE A REPLY

Please enter your comment!
Please enter your name here