pm-garib-kalyan-anna-yojna-extended-till-november-end-says-pm-narendra-modi

ನವದೆಹಲಿ: ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ನವೆಂಬರ್ ವರೆಗೆ ವಿಸ್ತರಿಸುವುದಾಗಿ ಘೋಷಿಸಿದ್ದಾರೆ. ಈ ಯೋಜನೆಯಡಿ 80 ಕೋಟಿ ಜನರಿಗೆ 5 ಕೆಜಿ ಗೋಧಿ ಅಥವಾ ಅಕ್ಕಿ ಉಚಿತವಾಗಿ ಸಿಗುತ್ತದೆ ಎಂದು ಹೇಳಿದರು.

ಪ್ರಪಂಚದಾದ್ಯಂತದ ಇತರ ದೇಶಗಳಿಗೆ ಹೋಲಿಸಿದರೆ ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಭಾರತ ಇನ್ನೂ ಸುರಕ್ಷಿತ ಸ್ಥಿತಿಯಲ್ಲಿದೆ. ಸಮಯೋಚಿತ ನಿರ್ಧಾರಗಳು ಮತ್ತು ಅಗತ್ಯ ಕ್ರಮಗಳು ಬಹು ದೊಡ್ಡ ಪಾತ್ರವನ್ನು ವಹಿಸಿವೆ ಎಂದು ಅವರು ಹೇಳಿದ್ದಾರೆ. ನಾವು ಅನ್ ಲಾಕ್-2 ಅನ್ನು ಪ್ರವೇಶಿಸುತ್ತಿದ್ದೇವೆ, ಇದಲ್ಲದೇ ಈ ಸಮಯದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳುವುದು ತುಂಬಾ ಅಗತ್ಯವಾಗಿದೆ ಎಂದು ಹೇಳಿದರು.

ಇದೇ ವೇಳೆ ಅವರು ಮಾತನಾಡುತ್ತ, ‌ಪ್ರಧಾನ ಮಂತ್ರಿ ಅನ್ನ ಯೋಜನೆಯನ್ನು ನವೆಂಬರ್‌ ತನಕ ವಿಸ್ತರಣೆ ಮಾಡಲಾಗುವುದು ಎಂದು ಹೇಳಿದರು. ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಯೋಜನೆಯ ಅಡಿಯಲ್ಲಿ ನಾವು ಎರಡು ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್ ನೀಡಿದ್ದೇವೆ. ಕಳೆದ 3 ತಿಂಗಳಲ್ಲಿ 31 ಕೋಟಿ ರೂಗಳನ್ನು ನೇರವಾಗಿ 20 ಕೋಟಿ ಬಡ ಕುಟುಂಬಗಳ ಜನಧನ್ ಖಾತೆಗಳಿಗೆ ಜಮಾ ಮಾಡಲಾಗಿದೆ. ಅಲ್ಲದೆ, 9 ಕೋಟಿಗೂ ಹೆಚ್ಚು ರೈತರ ಬ್ಯಾಂಕ್ ಖಾತೆಗಳಲ್ಲಿ 18 ಸಾವಿರ ಕೋಟಿ ರೂಪಾಯಿಗಳ ಠೇವಣಿ ಇಡಲಾಗಿದೆ ಎಂದು ಹೇಳಿದರು.

ಇದರೊಂದಿಗೆ, ಪ್ರಧಾನ ಮಂತ್ರಿ ಗರಿಬ್ ಆನ್ನ ಯೋಜನೆಯನ್ನು ನವೆಂಬರ್ ಅಂತ್ಯದವರೆಗೆ ವಿಸ್ತರಿಸಲು ನಾವು ನಿರ್ಧರಿಸಿದ್ದೇವೆ. 80 ಕೋಟಿ ಜನರಿಗೆ ಪ್ರಯೋಜನಗಳನ್ನು ನೀಡುವ ಈ ಯೋಜನೆ ನವೆಂಬರ್ ವರೆಗೆ ಮುಂದುವರಿಯುತ್ತದೆ ಎಂದು ಹೇಳಿದರು. ಈ ಯೋಜನೆಯಲ್ಲಿ ಬಡ ಕುಟುಂಬಗಳಿಗೆ ಅಕ್ಕಿ ಜೊತೆಗೆ ಬೇಳೆಕಾಳುಗಳನ್ನೂ ನೀಡಲಾಗಿದೆ. ಪಡಿತರದಲ್ಲಿ ಪ್ರತಿ ತಿಂಗಳು 5 ಕೆ.ಜಿ. ಅಕ್ಕಿ, 1 ಕೆ.ಜಿ. ಬೇಳೆ ನೀಡಲಾಗುವುದು. ಹೀಗಾಗಿ ಮುಂದಿನ ದಿನಗಳಲ್ಲೂ ಸಹ ಬಡಜನ ಆಹಾರಕ್ಕಾಗಿ ಪರಿತಪಿಸುವ ಸ್ಥಿತಿ ಉದ್ಭವಿಸುವುದಿಲ್ಲ” ಎಂದು ಪ್ರಧಾನಿ ನರೇಂದ್ರ ಮೋದಿ ಆಶ್ವಾಸನೆ ನೀಡಿದ್ದಾರೆ.

Writer Ad

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here