ಜೈಲಿನಲ್ಲಿ ಸತ್ಯೇಂದ್ರ ಜೈನ್‍ಗೆ ಮಾಡಿದ್ದು ಮಸಾಜ್ ಅಲ್ಲ, ಫಿಸಿಯೋಥೆರಪಿ – ಕೇಜ್ರಿವಾಲ್ ತಿರುಗೇಟು

ಫಿಸಿಯೋಥೆರಪಿ । physiotherapy-not-massage-arvind-kejriwal-on-aap-leaders-jail-video

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಜೈಲು ಸೇರಿರುವ ಆಮ್ ಆದ್ಮಿ ಪಕ್ಷದ (Aam Aadmi Party) ಸಚಿವ ಸತ್ಯೇಂದ್ರ ಜೈನ್‍ಗೆ (Satyendar Jain) ಅವರಿಗೆ ತಿಹಾರ್ ಜೈಲಿನಲ್ಲಿ ವಿಐಪಿ ಟ್ರೀಟ್‍ಮೆಂಟ್ ನೀಡಲಾಗುತ್ತಿದೆ ಎಂದು ಇತ್ತೀಚೆಷ್ಟೇ ಬಿಜೆಪಿ ಆರೋಪಿಸಿತ್ತು. ಈ ಕುರಿತು ತಿರುಗೇಟು ನೀಡಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal), ಜೈಲಿನಲ್ಲಿ ಫಿಸಿಯೋಥೆರಪಿ ನಡೆಸಲಾಗಿತ್ತೆ ಹೊರತು ಬಿಜೆಪಿ ಆರೋಪಿಸಿರುವಂತೆ ಮಸಾಜ್ ಮಾಡುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಸೋಮವಾರ ಮಾಡೋದರಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್, ಸತ್ಯೇಂದ್ರ ಜೈನ್‍ಗೆ ಜೈಲಿನಲ್ಲಿ ಮಸಾಜ್ ಮತ್ತು ವಿಶೇಷ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ಬಿಜೆಪಿಯವರು ಆರೋಪಿಸುತ್ತಿದ್ದಾರೆ. ಆದರೆ ಅವರಿಗೆ ಫಿಸಿಯೋಥೆರಪಿ ಟ್ರೀಟ್ಮೆಂಟ್ ನೀಡಲಾಗಿತ್ತು ಎಂದು ಹೇಳಿದ್ದಾರೆ.

ಇದನ್ನೂ ಓದಿರಿ: Satyendar Jain: ಮಸಾಜ್ ಸೇವೆ ನೀಡಿದ್ದು ಫಿಸಿಯೋ ಅಲ್ಲ, ಕೈದಿ; ತಿಹಾರ್ ಜೈಲಿನ ಮೂಲಗಳ ಹೇಳಿಕೆ

ಕೇಜ್ರಿವಾಲ್ ಅವರು ಮಾತನಾಡುತ್ತಾ, ಗುಜರಾತ್ ಜೈಲಿನಲ್ಲಿದ್ದಾಗ ಸಚಿವರಾಗಿದ್ದ ಅಮಿತ್ ಷಾ (Amit Shah) ಅವರು ವಿಐಪಿ ಟ್ರೀಟ್ಮೆಂಟ್ ಪಡೆದಿದ್ದರು. ಆದರೆ ಜೈನ್‍ ಅವರಿಗೆ ಅಂತಹ ಯಾವುದೇ ಸೌಲಭ್ಯ ನೀಡಲಾಗುತ್ತಿಲ್ಲ ಎಂದು ಹೇಳಿದ್ದಾರೆ.

ಶನಿವಾರದಂದು, ತಿಹಾರ್ ಜೈಲಿನಲ್ಲಿ ಸತ್ಯೇಂದ್ರ ಜೈನ್ ಅವರು ಪೂರ್ಣ ದೇಹದ ಮಸಾಜ್ ಮಾಡಿಸಿಕೊಳ್ಳುತ್ತಿರುವ ಸಿಸಿಟಿವಿ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಆ ನಂತರದಲ್ಲಿ ಸಚಿವರನ್ನು ಜೈಲಿನಿಂದ ಸ್ಥಳಾಂತರಿಸುವ ಬೇಡಿಕೆಯನ್ನು ಬಿಜೆಪಿ ಎತ್ತಿತ್ತು.

ಇದನ್ನೂ ಓದಿರಿ: ಮುಂದಿನ ಚುನಾವಣೆಯಲ್ಲಿ ಜೆಡಿಎಸ್ 123 ಕ್ಷೇತ್ರಗಳಲ್ಲಿ ಗೆಲ್ಲಲಿದೆ – ಸಿ ಎಂ ಇಬ್ರಾಹಿಂ

LEAVE A REPLY

Please enter your comment!
Please enter your name here