PFI Ban: ಪಿಎಫ್ಐ ನಿಷೇಧವನ್ನು ಎತ್ತಿ ಹಿಡಿದ ಕರ್ನಾಟಕ ಹೈಕೋರ್ಟ್

pfi-ban-rit-application-dismissed-by-karnataka-high-court

ಬೆಂಗಳೂರು: ಕೇಂದ್ರ ಸರಕಾರ ಪಿಎಫ್ಐ ಸಂಘಟನೆ ನಿಷೇದಿಸಿದ್ದನ್ನು ಪ್ರಶ್ನಿಸಿ ನಾಸಿರ್ ಪಾಷಾ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಕರ್ನಾಟಕ ಹೈಕೋರ್ಟ ವಜಾಗೊಳಿಸಿದೆ.

ಪಿಎಫ್ಐ ಸಂಘಟನೆ ನಿಷೇದಿಸಿದ್ದನ್ನು ಪ್ರಶ್ನಿಸಿ ನಾಸಿರ್ ಪಾಷಾ ಎನ್ನುವವರು ರಿಟ್ ಅರ್ಜಿಯನ್ನು ಸಲ್ಲಿಸಿದ್ದರು. ಇದರ ವಿಚಾರಣೆಯನ್ನು (ನ.28) ನಡೆಸಿದ ಕರ್ನಾಟಕ ಹೈಕೋರ್ಟ ತೀರ್ಪನ್ನು ಇಂದು (ನ. 30) ಕಾಯ್ದಿರಿಸಿತ್ತು. ತೀರ್ಪನ್ನು ಪ್ರಕಟಿಸಿರುವ ಏಕಸದಸ್ಯ ಪೀಠ, ನಾಸಿರ್ ಪಾಷಾ ಅವರ ಅರ್ಜಿಯನ್ನು ವಜಾಗೊಳಿಸಿ ಕೇಂದ್ರ ಸರ್ಕಾರದ ನಿರ್ಧಾರವನ್ನು ಎತ್ತಿಹಿಡಿದಿದೆ.

ಅರ್ಜಿದಾರರ ಪರವಾಗಿ ವಾದ ಮಂಡಿಸಿದ ವಕೀಲ ಜಯಕುಮಾರ್ ಎಸ್.ಪಾಟೀಲ್ ಸೂಕ್ತ ಕಾರಣಗಳನ್ನು ನೀಡದೇ ತಕ್ಷಣ ಬ್ಯಾನ್ ಮಾಡಲಾಗಿದೆ. ಯುಎಪಿಎ ಕಾಯ್ದೆಗೆ ವಿರುದ್ಧವಾಗಿ ಆದೇಶ ಹೊರಡಿಸಿ ಅನ್ಯಾಯ ಮಾಡಲಾಗಿದೆ ಎಂದು ಹೇಳಿದರು.

ಇದಕ್ಕೆ ಸರಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪಿಎಫ್ಐ ಸಂಘಟನೆಯಿಂದ ದೇಶ ವಿರೋಧಿ ಚಟುವಟಿಕೆ ನಡೆಯುತ್ತಿದೆ. ದೇಶದಲ್ಲಿ ಹಿಂಸಾತ್ಮಕ ಕೃತ್ಯಗಳನ್ನು ಎಸಗುತ್ತಿದ್ದಾರೆ. ಸಂಘಟನೆಯ ಸದಸ್ಯರಿಂದ ಭೀತಿಯ ವಾತಾವರಣ ಸೃಷ್ಟಿಯಾಗಿದೆ. ಹೀಗಾಗಿ ಸಕಾರಣದಿಂದಲೇ ಪಿಎಫ್ಐ ಸಂಘಟನೆ ನಿರ್ಬಂಧಿಸಲಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದ್ದರು.

ಇದನ್ನೂ ಓದಿರಿ: Mangalore Bomb Blast: ಕುಕ್ಕರ್ ಹಿಡಿದು ನಿಂತ ಶಾರಿಕ್ ಫೋಟೋಗೆ ಹೊಸ ಟ್ವಿಸ್ಟ್

LEAVE A REPLY

Please enter your comment!
Please enter your name here