petroleum-companies-have-increased-the-price-of-domestic-lpg-cylinders-by-rs-15

ನವದೆಹಲಿ: ಪೆಟ್ರೋಲಿಯಂ ಕಂಪನಿಗಳು ಅಕ್ಟೋಬರ್ ಮೊದಲ ವಾರದಲ್ಲಿ ವಾಣಿಜ್ಯ ಬಳಕೆಯ ಸಿಲೆಂಡರ್ ಗಳ ಬೆಲೆಯನ್ನು 43.5 ರೂಪಾಯಿಗಳಷ್ಟು ಹೆಚ್ಚಿಸಿ ಗ್ರಾಹಕರಿಗೆ ಬರೆಯನ್ನು ನೀಡಿದ್ದವು. ಇದಾದ ಬಳಿಕ ಈಗ ಅಡುಗೆ ಸಿಲಿಂಡರ್ ಬೆಲೆಯನ್ನು ರೂಪಾಯಿ 15 ನ್ನು ಹೆಚ್ಚಿಸಿ ಶಾಕ್ ನೀಡಿವೆ.

ಡೊಮೆಸ್ಟಿಕ್ ಸಿಲಿಂಡರ್ ಬೆಳೆಯನ್ನು ಹೆಚ್ಚಿಸಿರುವ ಪೆಟ್ರೋಲಿಯಂ ಕಂಪನಿಗಳು, ಹೊಸ ದರ ಇಂದಿನಿಂದಲೇ ಜಾರಿಯಾಗಲಿವೆ ಎಂದು ಹೇಳಿವೆ. ಈ ಮೂಲಕ ದೆಹಲಿಯಲ್ಲಿ 899.5 ಆಗಲಿದ್ದು, ಕರ್ನಾಟಕದಲ್ಲಿ ಅಡುಗೆ ಸಿಲಿಂಡರ್ ಬೆಲೆ 902.5 ರೂಪಾಯಿಗೆ ಏರಿಕೆಯಾದಂತಾಗಿದೆ.

ಭಾರತ ಪೆಟ್ರೋಲಿಯಂ ಉತ್ಪನ್ನಗಳಂತೆ ಎಲ್  ಗ್ಯಾಸನ್ನು ಸಹ ಆಮದು ಮಾಡಿಕೊಳ್ಳುತ್ತದೆ. ಮೂಲ ಗ್ಯಾಸನ ಬೆಲೆ, ಸಾಗಾಣಿಕೆ, ವಿಮೆ ಕಸ್ಟಮ್ ಸುಂಕ ಸೇರಿದಂತೆ ಹಲವು ವೆಚ್ಚಗಳು ಇದರಲ್ಲಿ ಸೇರುತ್ತವೆ. ನಂತರ ವೆಚ್ಚವನ್ನು ಭಾರತೀಯ ರೂಪಾಯಿಗೆ ಪರಿವರ್ತನೆ ಮಾಡಲಾಗುತ್ತದೆ. ಅದರ ಮೇಲೆ ವಿವಿಧ ಸುಂಕಗಳನ್ನು ಹಾಕಿ ರಾಜ್ಯಗಳಿಗೆ ಪೂರೈಸಲಾಗುತ್ತದೆ. ಇದರೊಂದಿಗೆ ರಾಜ್ಯದ ಹಲವು ಸುಂಕಗಳೂ ಸೇರಿಕೊಳ್ಳುತ್ತವೆ. ಒಟ್ಟಿನಲ್ಲಿ ಬೆಲೆ ಹೆಚ್ಚಳದಿಂದಾಗಿ ಸಂಕಷ್ಟಕ್ಕೆ ಸಿಲುಕುವವ ಮಾತ್ರ ಗ್ರಾಹಕನೇ ಆಗಿದ್ದಾನೆಂಬುದು ಬೇಸರದ ವಿಚಾರ.

ಇದನ್ನೂ ಓದಿರಿ: ಸಾಧಾರಣ ಶೀತ, ಕಫ ಸಮಸ್ಯೆಯಿಂದ ಬಳಲುತ್ತಿದ್ದರೆ ಇಲ್ಲಿದೆ ಸರಳ ಪರಿಹಾರ !

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here