ಶಾಂತಿ ಸೂತ್ರಕ್ಕೆ ಭಾರತದ ಬೆಂಬಲ ಅಗತ್ಯ; ಮೋದಿ ಜೊತೆ ಝೆಲೆನ್ಸ್ಕಿ ಸಂಭಾಷಣೆ

peace-formula-needs-indias-support-zelenskys-conversation-with-pm-modi-best-wishes-for-g20-presidents-post

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿಯಲ್ಲಿ ಸಂವಾದ ನಡೆಸಿದ್ದು, ಜಿ20 ಯಶಸ್ವಿ ಅಧ್ಯಕ್ಷರಾಗಲು ಭಾರತಕ್ಕೆ ಶುಭ ಕೋರಿದರು.

ಈ ಕುರಿತು ಟ್ವೀಟ್ ಮಾಡಿರುವ ಝೆಲೆನ್ಸ್ಕಿ, “ನಾನು ಪಿಎಂ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿ ಕರೆ ಮಾಡಿದ್ದೇನೆ ಮತ್ತು ಜಿ20 ಯಶಸ್ವಿ ಅಧ್ಯಕ್ಷ ಸ್ಥಾನವನ್ನ ಹಾರೈಸಿದ್ದೇನೆ. ಈ ವೇದಿಕೆಯಲ್ಲಿಯೇ ನಾನು ಶಾಂತಿ ಸೂತ್ರವನ್ನ ಘೋಷಿಸಿದೆ ಮತ್ತು ಈಗ ಅದರ ಅನುಷ್ಠಾನದಲ್ಲಿ ಭಾರತದ ಭಾಗವಹಿಸುವಿಕೆಯನ್ನ ನಾನು ನಂಬಿದ್ದೇನೆ. ವಿಶ್ವಸಂಸ್ಥೆಯಲ್ಲಿ ಮಾನವೀಯ ನೆರವು ಮತ್ತು ಬೆಂಬಲಕ್ಕಾಗಿ ನಾನು ಧನ್ಯವಾದಗಳನ್ನ ಅರ್ಪಿಸಿದ್ದೇನೆ” ಎಂದಿದ್ದಾರೆ.

ಇದನ್ನೂ ಓದಿರಿ: ಹೊಸ ವರ್ಷಾಚರಣೆಗೆ ಯಾವುದೇ ನಿರ್ಬಂಧ ಇಲ್ಲ, ಆದ್ರೆ ಮಾಸ್ಕ್ ಕಡ್ಡಾಯ: ಸಚಿವ ಸುಧಾಕರ್

LEAVE A REPLY

Please enter your comment!
Please enter your name here