paytm-is-back-on-play-store-hours-after-google-removes-the-app

ನವದೆಹಲಿ: ಡಿಜಿಟಲ್ ಪೇಮೆಂಟ್ ಅಪ್ಲಿಕೇಷನ್ PAYTM ನ್ನು ಜೂಜಾಟ ನೀತಿಯ ಉಲ್ಲಂಗನೆ ಕಾರಣದಿಂದಾಗಿ ಇಂದು ಗೂಗಲ್ ಪ್ಲೇಯ್ ಸ್ಟೋರ್ ನಿಂದ ನ  ತೆಗೆದುಹಾಕಲಾಗಿತ್ತು. ಆದರೆ ತೆಗೆದು ಹಾಕಲಾದ ಕೆಲವೇ ಗಂಟೆಗಳಲ್ಲಿ ಮತ್ತೆ ಬಂದಿದ್ದು, ಗ್ರಾಹಕರ ಕಳವಳವನ್ನು ಕಡಿಮೆ ಮಾಡಿದೆ.

ಇಂದು ಇದ್ದಕ್ಕಿದ್ದಂತೆ ಗೂಗಲ್ ಪ್ಲೇ ಸ್ಟೋರ್ ನಿಂದ paytm ಅಪ್ಲಿಕೇಷನ್ ನಾಪತ್ತೆಯಾಗಿದ್ದು, ನಂತರ ಗೂಗಲ್ ಪ್ಲೇ ಸ್ಟೋರಿನ ನೀತಿಯನ್ನು ಮೀರಿದೆ ಎನ್ನುವುದು ತಿಳಿದು ಬಂದಿತು. ಇದರಿಂದ ಆತಂಕಕ್ಕೆ ಒಳಗಾದ ಬಳಕೆದಾದರು ಸರಕಾರದಿಂದ ಬ್ಯಾನ್ ಗೆ ಒಳಗಾಯಿತೆ ಎನ್ನುವ ಯೋಚನೆಗೆ ತಿರುಗಿದರು. ಆದರೆ ಒನ್ 97 ಕಮ್ಯುನಿಕೇಶನ್ ಲಿಮಿಟೆಡ್ ಸ್ಪಷ್ಟನೆ ನೀಡಿ, ಯಾವುದೇ ಗ್ರಾಹಕರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ನಿಮ್ಮ ಹಣ ಸೇಪ್ ಆಗಿದೆ. ಶೀಗ್ರವೇ ನಾವು ಮತ್ತೆ ಬರುತ್ತೇವೆ. ಎಂದು ತಿಳಿಸಿದರು.

ಜೂಜಾಟ ನೀತಿಯನ್ನು ಉಲ್ಲಂಘಿಸಿದ ಕಾರಣದ ಮೇಲೆ paytm ಅಪ್ಲಿಕೇಷನ್ ನ್ನು ತೆಗೆದುಹಾಕಲಾಗಿತ್ತು. ತನ್ನ ತಪ್ಪನ್ನು ಕೆಲವೇ ಗಂಟೆಗಳಲ್ಲಿ ತಿದ್ದಿಕೊಂಡು ಈಗ ಮತ್ತೆ ಪ್ಲೇ ಸ್ಟೋರಿಗೆ ಬಂದಿದೆ. ಈ ಕುರಿತಂತೆ ಪೆಟಿಎಂ ಟ್ವೀಟ್ ಮಾಡಿದ್ದು, Update: And we’re back! ಎಂದು ಬರೆದುಕೊಂಡಿದೆ.

LEAVE A REPLY

Please enter your comment!
Please enter your name here