paswans-mortal-remains-to-be-flown-to-patna-at-2-pm-cremation-on-saturday

ದೆಹಲಿ: ಗುರುವಾರ ಕೊನೆಯುಸಿರೆಳೆದ ಕೇಂದ್ರದ ಸಚಿವ, ಎಲ್ ಜೆ ಪಿ ಪಕ್ಷದ ಮುಖ್ಯಸ್ಥ ರಾಮ್ ವಿಲಾಸ್ ಪಾಸ್ವಾನ್ ಅವರ ಅಂತ್ಯಕ್ರೀಯೆ ಶನಿವಾರ ನಡೆಯಲಿದ್ದು, ಇಂದು ದೆಹಲಿಯ ಅವರ ನಿವಾಸದಲ್ಲಿ ಗಣ್ಯರ ದರ್ಶನಕ್ಕೆ ಇಡಲಾಗಿದೆ. ಈ ಸಮಯದಲ್ಲಿ ರಾಷ್ಟ್ರಪತಿ ರಾಮನಾಥ್ ಕೊವಿಂದ್ ಮತ್ತು ಪ್ರಧಾನಿ ನರೇಂದ್ರಮೋದಿ ಅವರು ಭೇಟಿನೀಡಿ ಅಂತಿಮ ದರ್ಶನ ಪಡೆದರು.

ಇಂದು ದೆಹಲಿಯ ಅವರ ನಿವಾಸದಲ್ಲಿ ಗಣ್ಯರ ದರ್ಶನಕ್ಕೆ ಪಾರ್ಥಿವ ಶರೀರವನ್ನು ಇಡಲಾಗಿದ್ದು, ನಾಳೆ ಪಾಟ್ನಾ ದ ಅವರ ಪಕ್ಷದ ಕಚೇರಿಯಲ್ಲಿ ಕೆಲಸಮಯ ಪ್ರದರ್ಶನಕ್ಕೆ ಇಡಲಾಗುವುದು. ನಂತರ ಸಕಲ ಸರಕಾರಿ ಗೌರವಗಳೊಂದಿಗೆ ಅಂತಿಮ ವಿಧಿ ವಿಧಾನ ನಡೆಸಲಾಗುವುದು ಎಂದು ಹೇಳಲಾಗುತ್ತಿದೆ.

ಎಲ್ ಜೆ ಪಿ ಪಕ್ಷದ ನಾಯಕ ರಾಮ್ ವಿಲಾಸ್ ಪಾಸ್ವಾನ್ ಅವರು ಇತ್ತೀಚಿಗೆ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಹಿನ್ನೆಲೆಯಲ್ಲಿ ಗುರುವಾರ ಕೊನೆಯುಸಿರೆಳೆದಿದ್ದಾರೆ.

LEAVE A REPLY

Please enter your comment!
Please enter your name here