ಪಾಕಿಸ್ತಾನ ತನ್ನ ಹದಗೆಟ್ಟ ಆರ್ಥಿಕ ಸ್ಥಿತಿಯ ಕುರಿತಾಗಿ ಮತ್ತೊಮ್ಮೆ ದಿಗ್ಭ್ರಮೆ ಮೂಡಿಸುವಂತಹ ಸುದ್ದಿಯೊಂದು ಹೊರಬಿದ್ದಿದೆ. ಅದರ ಅರ್ಥಿಕ ಮುಗ್ಗಟ್ಟು ಯಾವ ಸ್ಥಿತಿಯಲ್ಲಿದೆ ಎಂದರೆ ಏಷ್ಯಾದಲ್ಲಿಯೇ ಇಂತಹ ಇನ್ನೊಂದು ದರಿದ್ರ ರಾಷ್ಟ್ರ ಉಳಿದಿಲ್ಲ. ಹೌದು ಸ್ನೇಹಿತರೆ, ನೀವು ಕೇಳುತ್ತಿರುವುದು ಅಕ್ಷರಶಃ ಸತ್ಯ..! ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಆಯೋಗ ಒಂದು ವರಧಿಯನ್ನು ಸಿದ್ದ ಪಡಿಸಿದ್ದು, ಅದು ಬಹಿರಂಗಗೊಂಡಿದೆ. ಇದರ ಪ್ರಕಾರ ಪಾಕಿಸ್ತಾನ 2019ರಲ್ಲಿ 4.2 ರಷ್ಟು ಜಿಡಿಪಿ ಬೆಳವಣಿಗೆ ಹೊಂದಿದ್ದು, 2020 ರಲ್ಲಿ ಶೇ.4ರಷ್ಟು ಹೊಂದಲಿದೆ ಎಂದು ಅಂದಾಜಿಸಿದೆ. ಇದರಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಜಿಡಿಪಿ ಬೆಳವಣಿಗೆಯಲ್ಲಿ ನೇಪಾಳ, ಬಾಂಗ್ಲಾದೇಶ ಮತ್ತು ಮಾಲ್ಡಿವ್ಸ್ ಸಹ ಪಾಕಿಸ್ತಾನವನ್ನು ಹಿಂದಿಕ್ಕಿವೆ.
ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಏಷಿಯಾ ಮತ್ತು ಫೆಸಿಫಿಕ್ ಆಯೋಗ (Nations Economic and Social Commission for Asia and Pacific [ESCAP] ) ನೀಡಿದ ವರದಿಯಿಂದ ಈ ಮಹತ್ತರ ವಿಷಯ ಬೆಳಕಿಗೆ ಬಂದಿದೆ. ಅದು ತನ್ನ ವರಧಿಯನ್ನು ಬಹಿರಂಗ ಪಡಿಸಿದ್ದು, ಪಾಕಿಸ್ತಾನ ಏಷಿಯಾ ಮತ್ತು ಫೆಸಿಫಿಕ್ ಭಾಗದಲ್ಲಿಯೇ ಅತೀ ಕಡಿಮೆ ಆರ್ಥಿಕ ಅಭಿವೃದ್ಧಿ ಹೊಂದಿದ ದೇಶವಾಗಿದೆ. ಆ ವರಧಿಯ ಪ್ರಕಾರ  ಪಾಕಿಸ್ತಾನದ 2019 ರ ಜಿಡಿಪಿ ಶೇ. 4.2 ರಷ್ಟು ಇರಲಿದ್ದು, 2020 ರ ವೇಳೆಗೆ ಅದು ಶೇ.4 ಕ್ಕೆ ಕುಸಿಯುವ ಸಾಧ್ಯತೆಗಳಿವೆ ಎಂದು ಹೇಳಿದೆ. ಇನ್ನುಳಿದಂತೆ ಭಾರತ 7.5% , ಬಾಂಗ್ಲಾದೇಶ 7.3 % , ಮಾಲ್ಡಿವ್ಸ್ ಮತ್ತು ನೇಪಾಳ 6.5% ಹೊಂದಿವೆ ಎಂದು ತಿಳಿಸಿದೆ.
ಪ್ರಮುಖ ಹಣಕಾಸಿನ ಮತ್ತು ಪ್ರಸಕ್ತ ವಿತ್ತೀಯ ಕೊರತೆಯನ್ನು ಅನುಭವಿಸುತ್ತಿರುವುದರಿಂದಾಗಿ ಕರೆನ್ಸಿಯ ಮೇಲೆ ಒತ್ತಡ ಹೆಚ್ಚಿದೆ. ಪಾವತಿ ತೊಂದರೆಗಳ ಗಂಭೀರ ಅಸಮತೋಲನವನ್ನು ಎದುರಿಸುತ್ತಿರುವುದರಿಂದ ಪಾಕಿಸ್ತಾನಕ್ಕೆ ಈ ಸ್ಥಿತಿ ಬಂದಿದೆ.
ಏಷಿಯನ್ ಡೆವಲಪ್ ಮೆಂಟ್ ಬ್ಯಾಂಕ್ ಪ್ರಕಾರ ಪಾಕಿಸ್ತಾನದ ಬೆಳವಣಿಗೆ ದರವು 2018ರಲ್ಲಿ 5.2 ಪ್ರತಿಶತದಿಂದ 2019ರಲ್ಲಿ 3.9 ರಷ್ಟು ಇಳಿಕೆಯಾಗಿದೆ. ಅಲ್ಲದೇ ದೇಶವು ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ ಎಂದು ಹೇಳಿಕೆ ನೀಡಿದೆ. ಮತ್ತೊಂದೆಡೆ ಭಾರತವು 7.2% ಬೆಳವಣಿಗೆಯ ದರದೊಂದಿಗೆ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಹೊರಹೊಮ್ಮಿದೆ.  

ಇದನ್ನೂ ಓದಿರಿ: ಲಾಡೆನ್ ಪುತ್ರ ಹಮ್ಜಾಬಿನ್ ನ್ನು ಹೊಡೆದುರುಳಿಸಿದ ಅಮೇರಿಕಾ ಸೇನೆ

SPONSORED CONTENT

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here