ಭಟ್ಕಳ: ಭಾರತಕ್ಕೆ ಅಕ್ರಮವಾಗಿ ಬಾಂಗ್ಲಾ, ಪಾಸಿಕ್ತಾನದಿಂದ ನುಸುಳುವ ವರದಿ ಆಗಾಗ ಬೆಳಕಿಗೆ ಬರುತ್ತಲೇ ಇರುತ್ತದೆ. ಬುಧವಾರ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಪಾಕಿಸ್ತಾನದಿಂದ ಅಕ್ರಮವಾಗಿ ಭಾರತಕ್ಕೆ ಬಂದು ನೆಲೆಸಿದ್ದ ಮಹಿಳೆಯನ್ನ ಪೊಲೀಸರು ಎಂಟು ವರ್ಷದ ನಂತರ ಬಂಧನ ಮಾಡಿದ್ದಾರೆ.
ಈ ಮಹಿಳೆ ಕಳೆದ ಎಂಟು ವರ್ಷದಿಂದ ನಕಲಿ ದಾಖಲೆಗಳನ್ನ ಸೃಷ್ಟಿಸಿ ಭಟ್ಕಳದಲ್ಲಿಯೇ ನೆಲೆಸಿರುವ ವಿಷಯ ತನಿಖೆ ವೇಳೆ ಬಹಿರಂಗವಾಗಿದೆ. ಪಾಕಿಸ್ತಾನ ಮೂಲದ ಖತೀಜಾ ಮಹರಿನ್ (33) ಎನ್ನುವ ಮಹಿಳೆ ಕಳೆದ ಎಂಟು ವರ್ಷದಿಂದ ಭಾರತದ ಭಟ್ಕಳಕ್ಕೆ ಅಕ್ರಮವಾಗಿ ಆಗಮಿಸಿ ನೆಲಸಿದ್ದು, ಖತೀಜಾ ಭಟ್ಕಳ ಮೂಲದ ಜಾವೀದ್ ಮೊಹಿದ್ದೀನ್ ಎನ್ನುವ ವ್ಯಕ್ತಿಯನ್ನ 2014ರಲ್ಲಿ ದುಬೈನಲ್ಲಿ ಪ್ರೀತಿಸಿ ಮದುವೆಯಾಗಿದ್ದಳು.
ಇದನ್ನೂ ಓದಿರಿ: Big News: ಖ್ಯಾತ ಕವಿ ಡಾ. ಸಿದ್ದಲಿಂಗಯ್ಯ ವಿಧಿವಶ
2014ರಲ್ಲಿಯೇ ಪ್ರವಾಸಿ ವಿಸಾ ಮೂಲಕ ಭಟ್ಕಳಕ್ಕೆ ಬಂದಿದ್ದ ಈಕೆ ನಂತರ ಪಾಕಿಸ್ತಾನಕ್ಕೆ ಮರಳಿದ್ದಳು. ನಂತರ ನೇಪಾಳದ ಮೂಲಕ ನುಸುಳಿ 2015ರಲ್ಲಿ ಅಕ್ರಮವಾಗಿ ಭಟ್ಕಳಕ್ಕೆ ಬಂದು ನೆಲಸಿದ್ದಳು.