Breaking: ಕರಾಚಿ ವಿಮಾನ ನಿಲ್ದಾಣದ ಬಳಿ ಅಪಘಾತಕ್ಕೀಡಾದ 107 ಜನರಿದ್ದ ವಿಮಾನ

pakistan-international-airlines-pia-flight-from-lahore-to-karachi-crashes-near-karachi-airport

ಕರಾಚಿ: ಪಾಕಿಸ್ತಾನದ ಕರಾಚಿಯ ವಸತಿ ಪ್ರದೇಶದಲ್ಲಿ ಪಾಕಿಸ್ತಾನ್ ಇಂಟರ್ನ್ಯಾಷನಲ್ ಏರ್ಲೈನ್ಸ್ ವಿಮಾನ ಅಪಘಾತಕ್ಕಿಡಾಗಿದೆ. ಈ ವಿಮಾನದಲ್ಲಿ ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿ 107 ಜನರು ಇದ್ದರು ಎಂದು ಹೇಳಲಾಗುತ್ತಿದೆ. ಅಪಘಾತವಾದ ಸ್ಥಳದಲ್ಲಿ ಗಾಡವಾದ ಹೊಗೆ ತುಂಬಿಕೊಂಡಿದೆ ಎಂದು ತಿಳಿದು ಬಂದಿದೆ.

ಪಾಕಿಸ್ತಾನದ ಮಾಧ್ಯಮಗಳ ಪ್ರಕಾರ, ಲಾಹೋರ್ ನಿಂದ ಹೊರಟಿದ್ದ ವಿಮಾನ ಜಿನ್ನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಲ್ಯಾಂಡ್ ಆಗುವ ಮುನ್ನ ಅಪಘಾತ ಉಂಟಾಗಿದೆ. ಪಿಐಎಯ ಎ-320 ವಿಮಾನದ ಎರಡೂ ಎಂಜಿನ್ ಗಳು ವಿಫಲಗೊಂಡಿದ್ದವು. ವಿಮಾನವು ಲ್ಯಾಂಡಿಂಗ್ ಗೆ 4 ಕಿ.ಲೋ. ಮೀ. ದೂರವಿದ್ದಾಗ ಪತನಗೊಂಡಿತು. ಅಂಬುಲನ್ಸ್ ಮತ್ತು ರಕ್ಷಣಾ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿರಿ: ಮಾಜಿಪ್ರಧಾನಿ ರಾಜೀವ್ ಗಾಂಧಿ ಪುಣ್ಯ ತಿಥಿ ನಿಮಿತ್ತ ಗೌರವ ವಂದನೆ ಸಲ್ಲಿಸಿದ ನರೇಂದ್ರ ಮೋದಿ

LEAVE A REPLY

Please enter your comment!
Please enter your name here