ಕುಲಭೂಷಣ್ ಜಾಧವ್ ಪ್ರಕರಣದ ವಿಚಾರಣೆ ಅಕ್ಟೋಬರ್ 5ಕ್ಕೆ ಮುಂದೂಡಿದ ಪಾಕಿಸ್ತಾನ ಕೋರ್ಟ್

pakistan-court-adjourns-kulbhushan-jadhavs-case-till-october-5

ಇಸ್ಲಾಮಾಬಾದ್ : ಪಾಕಿಸ್ತಾನದಲ್ಲಿ ಗೂಢಚಾರಿಕೆ ಆರೋಪದ ಮೇಲೆ ಬಂಧಿತರಾಗಿರುವ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್‌ ಜಾಧವ್‌ ಅವರ ಪ್ರಕರಣದ ವಿಚಾರಣೆಯನ್ನು ಪಾಕಿಸ್ತಾನ ಹೈಕೋರ್ಟ್ ಅಕ್ಟೋಬರ್‌ 5 ಕ್ಕೆ ಮುಂದೂಡಿದೆ.

ಕುಲಭೂಷಣ್‌ ಜಾಧವ್‌ ಅವರ ಪರವಾಗಿ ವಾದವನ್ನು ಮಂಡಿಸಲು ವಕೀಲರನ್ನು ನೇಮಿಸುವಂತೆ ಅಟಾರ್ನಿ ಜನರಲ್‌ ಖಾಲೀದ್‌ ಜಾವೇದ್‌ ಖಾನ್‌ ಅರ್ಜಿಯನ್ನು ಸಲ್ಲಿಸಿದ್ದರು. ಈ ಕುರಿತು ವಿಚಾರಣೆಯನ್ನು ವಿಚಾರಣೆಯನ್ನು ಅಕ್ಟೋಬರ್‌ 5ಕ್ಕೆ ನಡೆಸುವುದಾಗಿ ಇಸ್ಲಾಮಾಬಾದ್ ಹೈಕೋರ್ಟ್ ಹೇಳಿದೆ.

ಇದನ್ನೂ ಓದಿರಿ: ಕೊಂಕಣ ರೈಲ್ವೆ ಇಲಾಖೆಯಿಂದ ಹೊಸ ನೇಮಕಾತಿ ಅಧಿಸೂಚನೆ ಬಿಡುಗಡೆ 2021

ನ್ಯಾಯಮೂರ್ತಿಗಳಾದ ಅಥರ್ ಮಿನಾಲಾ, ಅಮರ್‌ ಫಾರೂಕ್ ಮತ್ತು ಮಿಯಾಂಗುಲ್ ಹಸನ್ ಔರಂಗಜೇಬ್‌ ಅವರನ್ನೊಳಗೊಂಡ ಪೀಠವು ಮೇ 7 ರಂದು ವಿಚಾರಣೆಯ ವೇಳೆ ಜೂನ್‌ 15 ರೊಳಗೆ ವಾದ ಮಂಡಿಸಲು ವಕೀಲರನ್ನು ನೇಮಿಸುವಂತೆ ಸೂಚಿಸಿತ್ತು. ಇದಲ್ಲದೇ ಮುಂದಿನ ವಿಚಾರಣೆಯ ಸಮಯದಲ್ಲಿ ಭಾರತೀಯ ಹೈಕಮಿಷನ್ ನ ವಕೀಲರಿಗೆ ಹಾಜರಿರುವಂತೆ ನೋಟಿಸ್ ಸಹ ಜಾರಿ ಮಾಡಿದೆ.

LEAVE A REPLY

Please enter your comment!
Please enter your name here