ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆ ಲಷ್ಕರ್ ಇ ತೊಯ್ಬಾದ ಉಪ ನಾಯಕ ಅಬ್ದುಲ್ ರೆಹಮಾನ್ ಮಕ್ಕಿಯನ್ನು ವಿಶ್ವಸಂಸ್ಥೆ ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿದೆ. ಆತನ ಆಸ್ತಿ-ಪಾಸ್ತಿ, ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯುವಂತೆ ಆದೇಶವನ್ನು ನೀಡಿದೆ.
ಭಾರತ ಮತ್ತು ಅಮೇರಿಕ ಆತನನ್ನು ಜಾಗತಿಕ ಭಯೋತ್ಪಾದಕ ಎಂದು ಗುರುತಿಸುವಂತೆ ಪ್ರಸ್ತಾವನೆಯನ್ನು ಸಲ್ಲಿಸಿದ್ದವು. ಈ ಪ್ರಸ್ತಾವನೆಗೆ ಮೊದಲಿಗೆ ಸಹಿ ಹಾಕಿದ್ದ ಚೀನಾ ನಂತರ ಪ್ರಸ್ತಾವನೆಯಿಂದ ಹಿಂದಕ್ಕೆ ಸರಿಯಿತು. ಈತ ಲಷ್ಕರ್ ಇ ತೊಯ್ಬಾದ ಸಂಘಟನೆಯ ಭಯೋತ್ಪಾದಕ ಕುಕೃತ್ಯಗಳಿಗೆ ಹಣ ಸಂಗ್ರಹಿಸುವುದು ಮತ್ತು ಯುವಕರನ್ನು ಕುಕೃತ್ಯಕ್ಕೆ ನೇಮಕ ಮಾಡಿಕೊಳ್ಳುವುದು ಮಾಡುತ್ತಿದ್ದ ಎಂದು ವಿಶ್ವಸಂಸ್ಥೆ ಹೇಳಿದೆ.
ಪಾಕಿಸ್ತಾನ ಸ್ನೇಹಿತ ಚೀನಾ, ಪಾಕಿಸ್ತಾನ ಮೂಲದ ಭಯೋತ್ಪಾದಕರನ್ನು ಪಟ್ಟಿ ಮಾಡಲು ಭಾರತ ಮತ್ತು ಅದರ ಮಿತ್ರರಾಷ್ಟ್ರಗಳ ಬಿಡ್‌ಗಳನ್ನು ಪದೇ ಪದೇ ತಡೆಹಿಡಿಯುತ್ತಿದೆ. ಕಳೆದ ವರ್ಷ ಜೂನ್‌ನಲ್ಲಿ, 1267 ಅಲ್-ಖೈದಾ ಅಡಿಯಲ್ಲಿ JUD/LeT ಮುಖ್ಯಸ್ಥ ಹಫೀಜ್ ಮುಹಮ್ಮದ್ ಸಯೀದ್‌ನ ಸಂಬಂಧಿ ಮಕ್ಕಿಯನ್ನು ಪಟ್ಟಿ ಮಾಡಲು ಭಾರತ ಮತ್ತು ಯುಎಸ್ ಜಂಟಿ ಪ್ರಸ್ತಾವನೆಯನ್ನು ಕೊನೆಯ ಕ್ಷಣದಲ್ಲಿ ಚೀನಾ ತಡೆಹಿಡಿದಿತ್ತು.
ಇದನ್ನೂ ಓದಿರಿ: ಯಡಿಯೂರಪ್ಪ ಜತೆ ಪ್ರಧಾನಿ ಮೋದಿ ಮಹತ್ವದ ಮಾತುಕತೆ: ಗರಿಗೆದರಿದ ಕುತೂಹಲ