padarayanapura-violence-case-karnataka-high-court-grants-bail-to-126-accused

ಬೆಂಗಳೂರು: ಕೊರೊನಾ ಸಂಕಷ್ಟದ ಸಮಯದಲ್ಲಿ ಲಾಕ್ ಡೌನ್ ಹೇರಿಕೆಯ ವಿರುದ್ಧ ಆರೋಗ್ಯ ಕಾರ್ಯಕರ್ತರ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಬಂದಿಸಿದ್ದ 126 ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ಷರತ್ತುಬದ್ದ ಜಾಮೀನು ಮಂಜೂರು ಮಾಡಿದೆ.

ಪಾದರಾಯಣಪುರದಲ್ಲಿ ಶಂಕಿತರನ್ನು ಸ್ಥಳಾಂತರಿಸುವ ಸಮಯದಲ್ಲಿ ಪೊಲೀಸರು, ವೈದ್ಯಕೀಯ ಸಿಬ್ಬಂದಿಗಳು ಮತ್ತು ಆಶಾಕಾರ್ಯಕರ್ತೆಯರ ಮೇಲಿನ ದಾಳಿಗೆ ಸಂಬಂಧಿಸಿ 126 ಆರೋಪಿಗಳನ್ನು ಬಂದಿಸಿ ಜೈಲಿಗಟ್ಟಲಾಗಿತ್ತು. ಸದ್ಯ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳಾದ ಮೈಖಲ್ ಕುನ್ಹಾ ಅವರು ಷರತ್ತುಬದ್ದ ಜಾಮೀನು ಮಂಜೂರಿ ಮಾಡಿದ್ದಾರೆ. ಷರತ್ತಿನಲ್ಲಿ ಆರೋಪಿಗಳು 1 ಲಕ್ಷ ರೂಪಾಯಿಯ ಬಾಂಡ್ ಸಲ್ಲಿಸಬೇಕು ಮತ್ತು ಕಡ್ಡಾಯವಾಗಿ ಕೊರೊನಾ ಪರೀಕ್ಷೆಗೆ ಗುರಿಯಾಗಬೇಕು ಎಂದು ತಿಳಿಸಿದ್ದಾರೆ. ಒಂದುವೇಳೆ ಕೊರೊನಾ ಪಾಸಿಟಿವ್ ಬಂದಲ್ಲಿ ಸರಕಾರದ ಮಾರ್ಗಸೂಚಿಯನ್ನು ಪಾಲಿಸಬೇಕಾಗುತ್ತದೆ. ಈ ಎಲ್ಲ ಷರತ್ತುಗಳನ್ನು ಪಾಲಿಸದಿದ್ದಲ್ಲಿ ಯಾವುದೇ ಕ್ಷಣದಲ್ಲಾದರೂ ಜಾಮೀನು ರದ್ಧು ಮಾಡಲಾಗುವುದು ಎಂದು ತಿಳಿಸಲಾಗಿದೆ.    

LEAVE A REPLY

Please enter your comment!
Please enter your name here