ಗುಜರಾತ್: ಮೊರ್ಬಿಯಲ್ಲಿ ಮಚ್ಚು ನದಿಗೆ ನಿರ್ಮಿಸಲಾಗಿದ್ದ ಕೇಬಲ್ ಸೇತುವೆ ಕುಸಿದು ನೂರಾರು ಜನರು ನದಿಗೆ ಬಿದ್ದ ದುರ್ಘಟನೆ ವರದಿಯಾಗಿದೆ. ಸದ್ಯ ರಕ್ಷಣಾ ಕಾರ್ಯಾಚರಣೆ ಆರಂಭವಾಗಿದ್ದು, ಪ್ರಾಣಾಪಾಯದ ಕುರಿತು ಇನ್ನೂ ನಿಖರ ಮಾಹಿತಿ ತಿಳಿದುಬಂದಿಲ್ಲ.
ಈ ಸೇತುವೆಯು ಸ್ಥಳೀಯವಾಗಿ ಪ್ರವಾಸಿ ತಾಣವಾಗಿದ್ದು, ರಜಾದಿನಗಳಲ್ಲಿ ಜನಸಂದಣಿ ಹೆಚ್ಚಿರುತ್ತಿತ್ತು. ಇಂದೂ ಸಹ ಪ್ರತಿ ವೀಕೆಂಡ್ ನಂತೆ ಹಲವಾರು ಜನ ಸೇರಿದ್ದರು ಎನ್ನಲಾಗಿದೆ. ಈ ಘಟನೆ ನಡೆಯುವ ಸಮಯದಲ್ಲಿ ಸುಮಾರು 400 ಕ್ಕೂ ಅಧಿಕ ಜನರು ಇದ್ದರು ಎಂದು ಹೇಳಲಾಗುತ್ತಿದೆ.
ಈ ಘಟನೆ ಕುರಿತಂತೆ ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರೊಂದಿಗೆ ಮಾತನಾಡಿ ಹೆಚ್ಚಿನ ಮಾಹಿತಿ ಪಡೆದಿದ್ದಾರೆ. ಅಲ್ಲದೇ ಶೀಘ್ರವೇ ಅಗತ್ಯ ನೆರವಿಗೆ ಧಾವಿಸುವಂತೆ ಆದೇಶ ನೀಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವ ಕುರಿತು ಮಾಹಿತಿ ಪಡೆದ ಅವರು, ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ 2 ಲಕ್ಷ ಹಾಗೂ ಗಾಯಗೊಂಡವರಿಗೆ 50 ಸಾವಿರ ರೂಪಾಯಿ ನೆರವನ್ನು ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿರಿ: T-20 World Cup: ಭಾರತದ ಬ್ಯಾಟಿಂಗ್ ವೈಫಲ್ಯ, ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡಕ್ಕೆ5 ವಿಕೆಟ್ ಸೋಲು