our-jawans-are-being-sent-in-non-bullet-proof-trucks-says-rahul-gandhi-targets-centre-over-vvip

ನವದೆಹಲಿ: ನಮ್ಮ ದೇಶದಲ್ಲಿ ಸೈನಿಕರನ್ನು ಬುಲೆಟ್ ಫ್ರೂಪ್ ಅಲ್ಲದ ಸಾಮಾನ್ಯ ವಾಹನದಲ್ಲಿ ಕಳುಹಿಸಲಾಗುತ್ತದೆ, ಆದರೆ ಸರಕಾರ ಪ್ರಧಾನಿಯ ಓಡಾಟಕ್ಕೆ ವಿಶೇಷ ವಿಮಾನವನ್ನು ಖರೀದಿಸಿದೆ ಎಂದು ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.

ಕೇಂದ್ರ ಸರಕಾರ ಎರಡು ವಿವಿಐಪಿ ವಿಮಾನಗಳನ್ನು ಖರೀದಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ನಮ್ಮ ದೇಶದ ಸೈನಿಕರನ್ನು ಬುಲೆಟ್ ಫ್ರೂಪ್ ಅಲ್ಲದ ಸಾಮಾನ್ಯ ವಾಹನದಲ್ಲಿ ಗಡಿ ಪ್ರದೇಶಗಳಿಗೆ ಕಳುಹಿಸಿಕೊಟ್ಟರೆ ನಮ್ಮ ಪ್ರಧಾನಿಗಳಿಗಾಗಿ ಸರಕಾರ 8400 ಕೋಟಿ ರೂಪಾಯಿಗಳನ್ನು ವ್ಯಯಿಸಿದೆ ಎಂದು ಹೇಳಿದ್ದಾರೆ.

ನಮ್ಮ ಅಧಿಕಾರಿಯು ಇಂತಹ ಸಾಮಾನ್ಯ ವಾಹನದಲ್ಲಿ ನಮ್ಮನ್ನು ಕಳುಹಿಸಿ ನಮ್ಮ ಜೀವದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಮಾತನಾಡಿಕೊಳ್ಳುತ್ತ ಸಾಗುತ್ತಿರುವ ಸೈನಿಕರ ವಿಡಿಯೋವೊಂದನ್ನು ಶೇರ್ ಮಾಡಿ ಸರಕಾರದ ಈ ನೀತಿಯು ನ್ಯಾಯಯುತವಾದದ್ದೇ ಎಂದು ಪ್ರಶ್ನಿಸಿದ್ದಾರೆ.

LEAVE A REPLY

Please enter your comment!
Please enter your name here