one-lakh-compensation-to-the-blp-family-of-who-died-in-covid

ಬೆಂಗಳೂರು: ಕೋವಿಡ್ -19 ಸೋಂಕಿನಿಂದ ಕುಟುಂಬದ ವಯಸ್ಕ ಮೃತಪಟ್ಟು ಬಿಪಿಎಲ್ ಕಾರ್ಡ್ ಹೊಂದಿದ್ದರೆ 1 ಲಕ್ಷ ಪರಿಹಾರ ನೀಡುವುದಾಗಿ ಸರಕಾರ ಘೋಷಣೆ ಮಾಡಿದೆ.

ಇಂದು ಮುಖ್ಯಮಂತ್ರಿ ಯಡಿಯೂರಪ್ಪನವರು ಮಾಧ್ಯಮದವರೊಂದಿಗೆ ಮಾತನಾಡುತ್ತ,  ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದ ವಯಸ್ಕರು ಕೋವಿಡ್ -19 ಸೋಂಕಿನಿಂದ ಮೃತರಾದರೆ ಅವರ ಕುಟುಂಬದವರಿಗೆ ಒಂದು ಲಕ್ಷ ರೂಪಾಯಿ ಪರಿಹಾರವನ್ನು ನೀಡುವ ನಿರ್ಧಾರಕ್ಕೆ ಬರಲಾಗಿದೆ. ಈ ಯೋಜನೆಗಾಗಿ ಸರಕಾರ 250 ರಿಂದ 300 ಕೋಟಿ ರೂಪಾಯಿ ತೆಗೆದಿರಿಸಿದೆ ಎಂದು ಹೇಳಿದರು.

ಈ ಕುರಿತು ಮಾತನಾಡುತ್ತ ಬಿಪಿಎಲ್ ಕುಟುಂಬದಿಂದ ಮೃತಪಟ್ಟ ಒಬ್ಬರಿಗೆ ಮಾತ್ರ ಈ ಪರಿಹಾರ ದೊರೆಯಲಿದೆ. ಈಗಾಗಲೇ ಸುಮಾರು 25 ರಿಂದ 30 ಸಾವಿರ ಬಿಪಿಎಲ್ ಕುಟುಂಬದ ಕೆಲವರು ಸಾವನ್ನಪ್ಪಿದ್ದಾರೆ ಎಂದು ಹೇಳಿದರು. ಹಲವು ಕುಟುಂಬಗಳ ಸ್ಥಿತಿ ಚಿಂತಾಜನಕವಾಗಿದೆ. ಬಡವರ ಜೀವನ ಬೀದಿಪಾಲಾಗಳು ಸರಕಾರ ಬಿಡುವುದಿಲ್ಲ ಎಂದು ಇದೇ ಸಮಯದಲ್ಲಿ ಹೇಳಿದರು.

ಇದನ್ನೂ ಓದಿರಿ: Flipkart Big Savings Day Sale: ಸ್ಮಾರ್ಟ್ ಫೋನ್ ಖರೀದಿಸಲು ಬಯಸಿದ್ದರೆ ಇದು ರೈಟ್ ಟೈಮ್

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here