ಪಿಓಕೆ ಮರಳಿ ಭಾರತದ ವಶಕ್ಕೆ: ಸುಳಿವು ನೀಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

on-shaurya-diwas-rajnath-singh-hints-at-retrieving-pakistan-occupied-kashmir

ಶ್ರೀನಗರ:ಶೌರ್ಯ ದಿನ‘ದ ವಿಶೇಷ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡುತ್ತ, ಕಾಶ್ಮೀರದ ಅಭಿವೃದ್ಧಿ ಮತ್ತು ಏಕೀಕರಣದ ಕುರಿತು ಮಾತನಾಡಿದರು. ಈ ಮೂಲಕ ಪಾಕ್ ಆಕ್ರಮಿತ ಕಾಶ್ಮೀರವನ್ನು ವಶಕ್ಕೆ ಪಡೆಯುವ ಕುರಿತು ಸುಳಿವು ನೀಡಿದರು.

ಗುರುವಾರ ಶೌರ್ಯ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡುತ್ತ ರಕ್ಷಣಾ ಸಚಿವ ರಾಜನಾಥ್ ಸಿಂಗ್, ‘ಪಾಕಿಸ್ತಾನವು ಅಕ್ರಮವಾಗಿ ತನ್ನ ವಶದಲ್ಲಿ ಇರಿಸಿಕೊಂಡಿರುವ ಕಾಶ್ಮೀರ, ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶವನ್ನು ಭಾರತವು ಮರುವಶ ಮಾಡಿಕೊಳ್ಳಬೇಕು ಎನ್ನುವ ನಿರ್ಣಯವನ್ನು 1994 ರಲ್ಲಿ ಸಂಸತ್ತಿನಲ್ಲಿ ಅವಿರೋಧವಾಗಿ ಅಂಗೀಕರಿಸಲಾಗಿತ್ತು. ಆ ನಿರ್ಣಯಕ್ಕೆ ನಮ್ಮ ಸರಕಾರ ಈಗಲೂ ಬದ್ಧವಾಗಿದೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿರಿ: “ನಿಮ್ಮನ್ನೆಲ್ಲ ನೋಡುವ ಕಾತುರದಲ್ಲಿ” ಪುನೀತ್ ರಾಜಕುಮಾರ್ ಟ್ವಿಟ್ಟರ್ ಖಾತೆಯಿಂದ ಹೊಸ ಪೋಸ್ಟ್ !

‘ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಾಗರೀಕರ ಮೇಲೆ ಪಾಕಿಸ್ತಾನದ ಕಿರುಕುಳ ಮತ್ತು ದೌರ್ಜನ್ಯ ಪ್ರತಿದಿನ ನಡೆಸುತ್ತಿದೆ. ಅಲ್ಲಿನ ಜನರ ನೋವು ನಮಗೆ ಅರ್ಥವಾಗುತ್ತದೆ. ಅಲ್ಲಿನ ಜನರಿಗೆ ಕನಿಷ್ಠ ಸೌಲಭ್ಯಗಳನ್ನೂ ನಿರಾಕರಿಸಲಾಗಿದೆ. ಪಾಕಿಸ್ತಾನವು ಅಲ್ಲಿ ದ್ವೇಷವನ್ನು ಹುಟ್ಟುಹಾಕುವ ಕಾರ್ಯದಲ್ಲಿ ತೊಡಗಿದೆ. ಅಲ್ಲಿನ ಜನ ಶೀಘ್ರದಲ್ಲಿಯೇ ಬಂಡಾಯ ಏಳಲಿದ್ದಾರೆ’ ಎಂದು ಹೇಳಿದರು.

‘ಕಾಶ್ಮೀರದಲ್ಲಿ ಭಾರತ ಸರಕಾರ ನಡೆಸುತ್ತಿರುವ ಭಯೋತ್ಪಾದಕ ನಿರ್ಮೂಲನಾ ಕಾರ್ಯಾಚರಣೆಯ ಕುರಿತು ಬುದ್ಧಿಜೀವಿಗಳು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಆರೋಪಿಸುತ್ತಾರೆ. ಆದರೆ ಸಾಮಾನ್ಯ ಜನರ ಮೇಲೆ ನಡೆಯುವ ನಿರ್ಧಯ ಭಯೋತ್ಪಾದಕ ದಾಳಿ ನಡೆಯುವಾಗ ಇವರೆಲ್ಲ ಎಲ್ಲಿ ಹೋಗುತ್ತಾರೆ’ ಎಂದು ರಾಜನಾಥ್ ಸಿಂಗ್ ಕೇಳಿದ್ದಾರೆ.

ಇದನ್ನೂ ಓದಿರಿ: ‘ಒಂದು ದೇಶ ಒಂದು ಸಮವಸ್ತ್ರ’ ಸಿದ್ಧಾಂತ ಪ್ರತಿಪಾಡಿಸಿದ ಪ್ರಧಾನಿ ಮೋದಿ

LEAVE A REPLY

Please enter your comment!
Please enter your name here