ಬ್ರಿಟನ್: ಕೊರೋನಾ ಹೊಸ ರೂಪಾಂತರ ಬ್ರಿಟನ್ ನಲ್ಲಿ ತನ್ನ ಆಟವನ್ನು ಶುರುಮಾಡಿದೆ. ಅತ್ಯಂತ ವೇಗವಾಗಿ ಹರಡುತ್ತಿರುವ ಸೋಂಕು ಇಡೀ ಬ್ರಿಟನ್ನಿನದ್ಯಂತ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ ಸುಮಾರು 25,000 ಕ್ಕೆ ತಲುಪಿದೆ.
ಒಮಿಕ್ರಾನ್ ಸೋಂಕಿಗೆ ಕಳೆದ ಕೆಲದಿನಗಳಿಂದ ಒಳಗಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಅಲ್ಲದೆ 7 ಜನರು ಈ ಸೋಂಕಿನಿಂದಾಗಿ ಸಾವನ್ನಪ್ಪಿದ್ದು, ಚಿಂತೆ ಹೆಚ್ಚುವಂತೆ ಮಾಡಿದೆ. ಪ್ರಸ್ತುತ ದೇಶದಲ್ಲಿ ಸೋಂಕಿಗೆ ಒಳಗಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಸಾಗಿದ್ದು, ಹಲವರು ಸೋಂಕಿಗೆ ತುತ್ತಾಗಿದ್ದರೂ ಲೆಕ್ಕಕ್ಕೆ ಸಿಗದೇ ಉಳಿದಿದ್ದಾರೆ. ಇದು ಆತಂಕಕ್ಕೆ ಕಾರಣವಾಗಿದೆ.
ಇದೆ ರೀತಿ ಪರಿಸ್ಥಿತಿ ಮುಂದುವರೆದರೆ ದೇಶದಲ್ಲಿ ಪ್ರತಿದಿನ 3,000 ಜನ ಆಸ್ಪತ್ರೆಗೆ ದಾಖಲಾಗುವ ಸಮಯ ದೂರವಿಲ್ಲ SAGE ಎಚ್ಚರಿಕೆಯನ್ನು ನೀಡಿದೆ.