ಎಸ್​ಬಿಐ ಎಟಿಎಂನಿಂದ ಹಣ ಡ್ರಾ ಮಾಡುವ ನಿಯಮಗಳಲ್ಲಿ ಬದಲಾವಣೆ

ನವದೆಹಲಿ: ನೀವು ಸ್ಟೇಟ್ ಬ್ಯಾಂಕ್ ಗ್ರಾಹಕರಾಗಿದ್ದರೆ ಗಮನಿಸಿ.. ಸ್ಟೇಟ್ ಬ್ಯಾಂಕ್ ತನ್ನ ಎಟಿಎಂ ಹಣ ಡ್ರಾ ಮಾಡುವ ಕೆಲ ನಿಯಮಗಳನ್ನು ಬದಲಾಯಿಸಿದೆ. ಈ ಮೂಲಕ ತನ್ನ ಗ್ರಾಹಕರಿಗೆ ಹೊಸ ನಿಯಮ ಪಾಲನೆ ಮಾಡುವಂತೆ ತಿಳಿಸಿದೆ. ಈ ನಿಯಮ ಜುಲೈ 1 ರಿಂದ ಲಾಗುವಾಗುವಂತೆ ಜಾರಿಗೆ ತಂದಿದೆ.

ಹೊಸ ನಿಯಮದ ಪ್ರಕಾರ ಬ್ಯಾಂಕ್ ಖಾತೆಯಲ್ಲಿ ಸಮಪರ್ಕ ಹಣವಿಲ್ಲದಿದ್ದರೆ ಡ್ರಾ ಮಾಡಲು ಹೋಗಿ ವಿಫಲವಾದರೆ ಅದಕ್ಕೆ ಜಿಎಸ್ಟಿ ಸೇರಿ 20 ರೂಪಾಯಿ ದಂಡವನ್ನು ಗ್ರಾಹಕರಿಗೆ ವಿಧಿಸಲಿದೇ. SBI ನ ನಿಯಮದ ಪ್ರಕಾರ 5 ಎಸ್ಬಿಐ ಮತ್ತು3 ಇತರೆ ಬ್ಯಾಕ್ ಸೇರಿ ಒಟ್ಟು 8 ಬಾರಿ ಉಚಿತವಾಗಿ ಹಣ ಡ್ರಾ ಮಾಡುವ ಅವಕಾಶವನ್ನು ಕಲ್ಪಿಸಿದೆ. ಇದರ ನಂತರದ ವಹಿವಾಟಿಗೆ ಹೆಚ್ಚುವರಿ ಹಣ ಕೊಡಬೇಕಾಗಿದೆ.
ಇದರಂತೆ ನಗರ ಪ್ರದೇಶ ಹೊರತುಪಡುಸಿದವರಿಗೆ ಹತ್ತು ಬಾರಿ ಯಾವುದೇ ಶುಲ್ಕ ಇಲ್ಲದೆ ಡ್ರಾ ಮಾಡಲು ಅವಕಾಶವನ್ನು ಕೊಡಲಾಗಿದೆ.

ತಿಂಗಳಿಗೆ ಸರಾಸರಿ 1 ಲಕ್ಷಕ್ಕಿಂತ ಹೆಚ್ಚಿನ ಬಾಕಿ ಕಾಯ್ದುಕೊಳ್ಳುವ ಗ್ರಾಹಕರಿಗೆ ಸ್ಟೇಟ್ ಬ್ಯಾಂಕ್ ಗ್ರೂಪ್ ಮತ್ತು ಇತರ ಬ್ಯಾಂಕುಗಳ ಎಟಿಎಂಗಳಲ್ಲಿ ಅನಿಯಮಿತ ವಹಿವಾಟು ನಡೆಸಲು ಅವಕಾಶವಿದೆ.

ಇನ್ನು ವಹಿವಾಟು ವಿಫಲವಾದರೆ ಅಥವಾ ಖಾತೆಯಲ್ಲಿ ಹಣ ಇಲ್ಲದೆ ಡ್ರಾ ಮಾಡಲು ಹೋದರೆ ಅದಕ್ಕೆ ಗ್ರಾಹಕರ ಮೇಲೆ 20 ರೂಪಾಯಿ ಹಾಗೂ ಜೊತೆಗೆ GST ಹಾಕಲಾಗುತ್ತದೆ.

ಗ್ರಾಹಕರು ರಾತ್ರಿ 8 ರಿಂದ ಬೆಳಿಗ್ಗೆ 8 ರ ವರೆಗೆ ಹತ್ತು ಸಾವಿರಕ್ಕಿಂತ ಅಧಿಕ ಹಣ ಡ್ರಾ ಮಾಡಲು ಓಟಿಪಿ ನೀಡುವುದು ಕಡ್ಡಾಯವಾಗಿದೇ. ಒಟಿಪಿ ಕೇವಲ SBI ATM ಗೆ ಮಾತ್ರ ಅನ್ವಯ ಆಗಲಿದೆ. ಇತರ ATM ಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತದೆ.

ಇದನ್ನೂ ಓದಿರಿ: ಆರೋಗ್ಯ ಸಚಿವ ಬಿ ಶ್ರೀರಾಮಲು ಕೊರೋನಾದಿಂದ ಗುಣಮುಖ

LEAVE A REPLY

Please enter your comment!
Please enter your name here