ನವದೆಹಲಿ: 20 ಲಕ್ಷ ಕೋಟಿ ರೂಪಾಯಿಗಳ ಪ್ರೋತ್ಸಾಹಕ ಪ್ಯಾಕೇಜ್ ವಿವರಗಳನ್ನು ನೀಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಸಣ್ಣ ಕೈಗಾರಿಕೆಗೆ ಖಾತರಿ ಇಲ್ಲದೆ 3 ಲಕ್ಷ ಕೋಟಿ ರೂ.ಗಳ ಸಾಲ ನೀಡಲಾಗುವುದು ಎಂದು ಹೇಳಿದರು.
ಭಾರತ ಸ್ವಾವಲಂಬಿ ದೇಶವಾಗಿ ಬೆಳೆಯಬೇಕು ಎನ್ನುವ ದೃಷ್ಟಿಯಿಂದ ಸಮಾಜದ ವಿವಿಧ ವರ್ಗಗಳೊಂದಿಗೆ ವ್ಯಾಪಕವಾಗಿ ಚರ್ಚೆಯನ್ನು ನಡೆಸಿದ ನಂತರವೇ ಈ ಪ್ಯಾಕೇಜ್ ಘೋಷಿಸಲಾಗಿದೆ. ಈ ಮೂಲಕ ದೇಶದ ಬೆಳವಣಿಗೆ ಹೆಚ್ಚಿಸಬೇಕು ಎಂದು ಆತ್ಮ ನಿರ್ಭರ ಭಾರತ ಅಭಿಯಾನವನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದರು.
ಕೋವಿಡ್-19 ಸೋಂಕು ಹರಡುತ್ತಿದ್ದಂತೆ ಮೊದಲ ಹೆಜ್ಜೆಯಾಗಿ ನರೇಂದ್ರ ಮೋದಿಯವರ ಸರಕಾರ ಬಡವರ ರಕ್ಷಣೆಗೆ ದಾವಿಸಿತ್ತು. ದೇಶದ ಬಡವರು ಹಸಿವಿನಿಂದ ಸಾಯಬಾರದು ಎನ್ನುವ ದೃಷ್ಟಿಯಿಂದ 1,70,000 ಕೋಟಿ ರೂಪಾಯಿಗಳ ಪ್ಯಾಕೇಜನ್ನು ಹಣಕಾಸು ಸಚಿವರು ನಿಮ್ಮ ಮುಂದೆ ಇಟ್ಟಿದ್ದರು ಎಂದು ಹಣಕಾಸು ರಾಜ್ಯ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ. .
ಪ್ರಧಾನಿ ನರೇಂದ್ರ ಮೋದಿಯವರು ನಿನ್ನೆ 20 ಲಕ್ಷ ಕೋಟಿ ರೂಪಾಯಿಗಳ ಐತಿಹಾಸಿಕ ಪ್ಯಾಕೇಜನ್ನು ಘೋಷಿಸಿದ್ದರು. ಪ್ರತಿದಿನ ವಿವಿಧ ವಲಯಗಳ ಆಧಾರದ ಮೇಲೆ ಜನರಿಗೆ ಪ್ಯಾಕೇಜ್ ಕುರಿತಾಗಿ ವಿವರಣೆಯನ್ನು ನಾವು ನೀಡಲಿದ್ದೇವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
ಇದನ್ನೂ ಓದಿರಿ: ಯುದ್ಧವನ್ನೇ ಮಾಡದೆ ಪಾಕಿಸ್ತಾನವನ್ನು ಸೋಲಿಸಿದ ಭಾರತ..!
20 ಲಕ್ಷ ಕೋಟಿ ರೂ.ಗಳ ಆರ್ಥಿಕ ಪ್ಯಾಕೇಜ್ನಲ್ಲಿ ಇಂದು ನಿರ್ಮಲಾ ಸೀತಾರಾಮನ್ ನೀಡಿದ್ದೇನು ?
- ಸರಕಾರಿ ಗುತ್ತಿಗೆದಾರರಿಗೆ ಉಳಿಸಿಕೊಂಡ ಕಾಮಗಾರಿಗಳಿಗೆ ಪೂರ್ಣಗೊಳಿಸಲು ಆರು ತಿಂಗಳ ಹೆಚ್ಚುವರಿ ಕಾಲಾವಕಾಶ.
- ಮಾರ್ಚ್ 2021 ರವರೆಗೆ ಟಿಡಿಎಸ್/ಟಿಸಿಎಸ್ ಗಳಿಗೆ ಶೇ 25 ರಷ್ಟು ಕಡಿತ.
- ಐಟಿ ರಿಟರ್ನ್ ಸಲ್ಲಿಕೆಗೆ ನವೆಂಬರ್ 30ರ ವರೆಗೆ ಗಡುವು.
- ಜನಧನ್ ಖಾತೆ ಹೊಂದಿರುವ 20 ಲಕ್ಷ ಮಹಿಳೆಯರಿಗೆ ಮೂರು ತಿಂಗಳುಗಳ ಕಾಲ 500 ಖಾತೆಗೆ.
- ಪಿಎಂ ಕಿಸಾನ್ ಯೋಜನೆಯಡಿ 3 ತಿಂಗಳು 2000 ಸಾವಿರ ರೂಪಾಯಿಗಳು ಸಿಗಲಿವೆ
- ಮುಂದಿನ ಮೂರು ತಿಂಗಳು ಬಡ ಕುಟುಂಬಗಳಿಗೆ ಉಜ್ವಲಾ ಯೋಜನೆಯಡಿಯಲ್ಲಿ ಉಚಿತ ಗ್ಯಾಸ್ ಸಿಲಿಂಡರ್ ನೀಡಲಾಗುವುದು.
- ವಿದ್ಯುತ್ ವಿತರಣಾ ಕಂಪನಿಗಳ ಗಂಭೀರ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ 90,000 ಕೋಟಿ ರೂ.ಗಳ ತುರ್ತು ನಗದು ನೀಡಲಾಗಿದೆ.
- ಪಾರ್ಶಲ್ ಕ್ರೆಡಿಟ್ ಗ್ಯಾರಂಟಿ ಯೋಜನೆಯ ಮೂಲಕ ಏನ್.ಬಿ.ಎಪ್.ಸಿ.ಗಳಿಗೆ 45,000 ಕೋಟಿ ರೂ.ಗಳ ನಗದು ನೀಡಲಾಗುವುದು.
- ಬ್ಯಾಂಕೇತರ ಹಣಕಾಸು ಕಂಪನಿಗಳು, ವಸತಿ ಹಣಕಾಸು ಕಂಪನಿಗಳು, ಮೈಕ್ರೋ ಪೈನಾನ್ಸ್ ಸಂಸ್ಥೆಗಳಿಗೆ 30,000 ಕೋಟಿರೂ.ಗಳನ್ನು ನೀಡಲಾಗಿದೆ.
- ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳಿಗೆ ಸಂಬಂಧಿಸಿದಂತೆ ಪ್ರಮುಖ 6 ಘೋಷಣೆಗಳನ್ನು ಮಾಡಲಾಗಿದೆ.
- ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳಿಗೆ (ಎಮ್.ಎಸ್.ಎಮ್.ಇ.) 3 ಲಕ್ಷ ಕೋಟಿ ರೂ.ಗಳ ಸಾಲ ನೀಡಲಾಗುವುದು. ಇದರಿಂದ 4.5 ಮಿಲಿಯನ್ ಎಮ್.ಎಸ್.ಎಮ್.ಇ.ಗಳಿಗೆ ಲಾಭವಾಗಲಿದೆ.
- ಆಯ್ದ ಎಮ್.ಎಸ್.ಎಮ್.ಇ.ಗಳಿಗೆ 20,000 ಕೋಟಿರೂಗಳ ಸಹಾಯಕ ಸಾಲ ನೀಡಲಾಗುವುದು. ಇದರಿಂದ 2 ಲಕ್ಷ ಎಮ್.ಎಸ್.ಎಮ್.ಇ.ಗಳಿಗೆ ಸಹಾಯವಾಗಳಿವೆ.
- ಎಮ್.ಎಸ್.ಎಮ್.ಇ. ಗಳಿಗೆ ಯಾವುದೇ ಅಡಮಾನವಿಲ್ಲದೆ ಸಾಲವನ್ನು ನೀಡಲಾಗುವುದು.
- ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಎಮ್.ಎಸ್.ಎಮ್.ಇ.ಗಳಿಗೆ ತಕ್ಷಣವೇ ಸಾಲ ಮಂಜೂರು ಮಾಡಲಾಗುವುದು.
- ಸಾಲ ಮರುಪಾವತಿಗೆ ಎಮ್.ಎಸ್.ಎಮ್.ಇ.ಗಳಿಗೆ ಒಂದು ವರ್ಷಗಳ ಮುಂದೂಡಿಕೆ ನೀಡಲಾಗುವುದು. ಅಲ್ಲದೇ ಮರುಪಾವತಿಗೆ 4 ವರ್ಷಗಳ ಕಾಲಾವಕಾಶ ನೀಡಲಾಗುವುದು.
- 200 ಕೋಟಿ ರೂಪಾಯಿಗಳ ವರೆಗಿನ ಟೆಂಡರ್ ಗಳಿಗೆ ವಿದೇಶಿ ಕಂಪನಿಗಳಿಗೆ ಅವಕಾಶವಿಲ್ಲ.
ಇದನ್ನೂ ಓದಿರಿ: ಕೊರೊನಾ ಸಂಕಷ್ಟ: 20 ಲಕ್ಷ ಕೋಟಿಯ ಪ್ಯಾಕೇಜ್ ಘೋಷಿಸಿದ ಪ್ರಧಾನಿ ಮೋದಿ
ಇದನ್ನೂ ಓದಿರಿ: ಭಾರತೀಯ ಯೋಧರನ್ನು ಕೆಣಕಿದ ಚೀನಾ: ಗುಂಡೇಟು ತಿಂದ 9 ಚೀನಿ ಯೋಧರು..!