ಲಾಕ್ ಡೌನ್: ನಿಕ್ ಜೋನಾಸ್ ಪ್ರಿಯಾಂಕಾಗೆ ಪಿಯಾನೋ ಕಲಿಸುತ್ತಿದ್ದಾರಂತೆ

ಈ ಲಾಕ್ ಡೌನ್ ನಿಂದಾಗಿ ಸೇಲೆಬ್ರಿಟಿಗಳೆಲ್ಲಾ ಮನೆಯಲ್ಲಿಯೇ ಉಳಿಯುವಂತಾಗಿದೆ. ಹಲವರು ಈ ಸಮಯವನ್ನು ಉತ್ತಮವಾಗಿ ಬಳಸಿಕೊಳ್ಳುತ್ತಿದ್ದು, ಅದನ್ನು ತಮ್ಮ ಸಾಮಾಜಿಕ ತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ನಿಕ್ ಜೋನಾಸ್ ಮತ್ತು ಪ್ರಿಯಾಂಕಾ ಚೋಪ್ರಾ ಈಗ ಲಾಸ್ ಎಂಜಲಿಸ್ ನಲ್ಲಿ ತಂಗಿದ್ದು, ಈ ನಡುವೆ ಜೋನಾಸ್ ಪ್ರಿಯಾಂಕಾಗೆ ಪಿಯಾನೋ ನುಡಿಸಲು ಹೇಳಿಕೊಡುತ್ತೀದ್ದಾರೆ.

ಲಾಕ್ ಡೌನ್ ನಿಂದ ಬಂದಿಯಾಗಿರುವ ಈ ಜೋಡಿ 30 ರಿಂದ 45 ನಿಮಿಷ ಪ್ರತಿದಿನ ಸಂಗಿತಾಭ್ಯಾಸದಲ್ಲಿ ತೊಡಗಿಕೊಳ್ಳುತ್ತಾರೆ. ಅಲ್ಲದೇ ನಿಕ್ ಪ್ರಿಯಾಂಕಾ ಅವರಿಗೆ ಪಿಯಾನೋ ಹೇಳಿಕೊಡುತ್ತಿದ್ದಾರೆ. ಈ ಕುರಿತು ಮಾತನಾಡಿರುವ ನಿಕ್, ಪ್ರಿಯಾಂಕಾ ಸಂಗೀತದಲ್ಲಿ ತುಂಬಾ ಆಸಕ್ತಿಯನ್ನು ಹೊಂದಿದ್ದಾರೆ. ಆದರೆ ಅವರಿಗೆ ನಾನು ಉತ್ತಮ ಶಿಕ್ಷಕ ಅಲ್ಲ ಎಂದು ಹೇಳಿಕೊಂಡಿದ್ದಾರೆ. ಇದರೊಂದಿಗೆ ಪ್ರಿಯಾಂಕಾ ನನ್ನ ಸಂಗೀತ ಕಾರ್ಯಕ್ರಮಗಳಿಗೆ ಪ್ರೋತ್ಸಾಹವನ್ನು ನೀಡುತ್ತಾಳೆ ಜೊತೆಗೆ ಕಾರ್ಯಕ್ರಮವನ್ನು ಎಂಜಾಯ್ ಕೂಡಾ ಮಾಡುತ್ತಾರೆ ಎಂದು ಹೇಳಿದ್ದಾರೆ.
nick-jonas-on-priyanka-chopra-piano-lessons
ಇತ್ತೀಚಿಗೆ ಸಂದರ್ಶನವೊಂದರಲ್ಲಿ ನಿಕ್ ಅವರನ್ನು ಪತ್ನಿ ಪ್ರಿಯಾಂಕಾ ಅವರೊಂದಿಗಿನ ಕ್ವರೆಂಟೈನ್ ಹೇಗೆ ನಡೆಯುತ್ತಿದೆ ಎಂದು ಕೇಳಿದ ಪ್ರಶ್ನೆಗೆ, ನನ್ನ ಮತ್ತು ಪ್ರಿಯಾಂಕಾ ಮದುವೆಯಾಗಿ 1.5 ವರ್ಷ ಆಗುತ್ತಾ ಬಂತು ಇದುವರೆಗೂ ಕೆಲಸದ ಕಾರಣಗಳಿಂದ ನಾವಿಬ್ಬರೂ ಪರಸ್ಪರ ಹೆಚ್ಚಿನ ಸಮಯ ಕಳೆಯಲು ಸಾಧ್ಯವಾಗಿರಲಿಲ್ಲ, ಆದರೆ ಈಗ ಪರಸ್ಪರರಿಗೆ ಜೊತೆಯಲ್ಲಿ ಕಾಲ ಕಳೆಯಲು ಅವಕಾಶ ಒದಗಿಬಂದಿದೆ ಎಂದರು. 

ನಿಕ್ ಮುಂದುವರೆಸುತ್ತಾ, ನಾವು ಈ ಸಮಯವನ್ನು ಒಟ್ಟಿಗೆ ವ್ಯಾಯಾಮ ಮಾಡುತ್ತೇವೆ, ನಂತರ ನಮ್ಮ ನಮ್ಮ ಕೆಲಸಗಳಲ್ಲಿ ತೊಡಗಿಕೊಳ್ಳುತ್ತೇವೆ ಮತ್ತು ಈ ದಿನವನ್ನು ನಾವು ತುಂಬಾ ಎಂಜಾಯ್ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here