ಬೆಂಗಳೂರು: ವಂಚನೆ, ಹೈಟೆಕ್ ವೇಶ್ಯಾವಾಟಿಕೆ, ಪತ್ನಿ ಪೀಡಕ ಸ್ಯಾಂಟ್ರೋ ರವಿಯನ್ನು ಪೊಲೀಸರು ವಿಶೇಷ ತಂಡ ರಚಿಸಿ ಕಳೆದ 11 ದಿನಗಳಿಂದ ಹುಡುಕುತ್ತಿದ್ದು, ಇದೀಗ ಆತನನ್ನು ಬಂಧಿಸಲಾಗಿದೆ ಎಂದು ಮಾಹಿತಿ ಬಂದಿದೆ.
ವಿವಿಧ ಅಪರಾಧ ಪ್ರಕರಣಗಳಲ್ಲಿ ಬೇಕಾಗಿದ್ದ ಸ್ಯಾಂಟ್ರೋ ರವಿ ಪತ್ತೆಗೆ ವಿಶೇಷ ಪೋಲೀಸರ ತಂಡ ರಚಿಸಲಾಗಿತ್ತು. ಆದರೆ ತಲೆಮರೆಸಿಕೊಂಡಿರುವ ಆತ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವಲಸೆ ಹೋಗುತ್ತಾ ಕಳೆದ 11 ದಿನಗಳಿಂದ ಪೊಲೀಸರಿಗೆ ಸಿಗದೇ ಚಳ್ಳೆಹಣ್ಣು ತಿನ್ನಿಸಿದ್ದ.
ಮೈಸೂರಿನಲ್ಲಿ ರವಿಯ ಎರಡನೆಯ ಪತ್ನಿ ನೀಡಿದ ದೂರಿನ ಆದಾರದ ಮೇಲೆ ರಾಜ್ಯ, ನೆರೆ ರಾಜ್ಯಗಳಲ್ಲಿಯೂ ಪೊಲೀಸರು ಹುಡುಕಾಟ ನಡೆಸಿದ್ದರು. ಗುಜರಾತಿನಲ್ಲಿ ತಲೆಮರೆಸಿಕೊಂಡಿರುವ ಖಚಿತ ಮಾಹಿತಿಯ ಮೇರೆಗೆ ಇಂದು ಮದ್ಯಾಹ್ನ ಪೊಲೀಸರು ದಾಳಿ ನಡೆಸಿ ಸ್ಯಾಂಟ್ರೋ ರವಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿರಿ: ಮಠ ಖ್ಯಾತಿಯ ಗುರುಪ್ರಸಾದ್ ಚೆಕ್ ಬೌನ್ಸ್ ಪ್ರಕರಣದಲ್ಲಿ ಅರೆಸ್ಟ್