Road Accident: ಪ್ರವಾಸ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ಪಲ್ಟಿಯಾದ ಸ್ಕೂಲ್ ಬಸ್

mudigere-5-students-injured-as-college-bus-overturns

ಚಿಕ್ಕಮಂಗಳೂರು: ಮೂಡಿಗೆರೆ ತಾಲೂಕಿನ ಮುತ್ತಿಗೆಪುರದ ಹರೀಶ್ ಪಿ.ಯು. ಕಾಲೇಜಿನ ವಿದ್ಯಾರ್ಥಿಗಳು ದೇವರಮನೆ ಗುಡ್ಡದ ಪ್ರವಾಸಕ್ಕೆ ತೆರಳಿದ್ದರು. ಪ್ರವಾಸದಿಂದ ಹಿಂತಿರುಗುವಾಗ ರಸ್ತೆಯ ಪಕ್ಕದಲ್ಲಿದ್ದ ಕರೆಂಟ್ ಕಂಬಕ್ಕೆ ಡಿಕ್ಕಿಯಾಗಿ ಬಸ್ ಪಲ್ಟಿಯಾಗಿದೆ.

ಪ್ರವಾಸದಿಂದ ಹಿಂತಿರುಗಿ ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದ್ದು, ಐವರು ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ನೀಡಲಾಗಿದೆ.

ಪ್ರವಾಸಕ್ಕೆ ತೆರಳಿದ್ದ ಬಸಿಲಿನಲ್ಲಿ 10 ವಿದ್ಯಾರ್ಥಿಗಳಿದ್ದರು ಎಂಬ ಮಾಹಿತಿ ಬಂದಿದ್ದು, ಐವರಿಗೆ ಚಿಕ್ಕಪುಟ್ಟ ಗಾಯಗಳಾಗಿವೆ. ಘಟನೆ ನಡೆದ ಸ್ಥಳಕ್ಕೆ ಬಣಕಲ್ ಠಾಣೆ ಪೊಲೀಸರು ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿರಿ: ನೇಪಾಳದ ಘೋರ ದುರಂತ: ಐವರು ಭಾರತೀಯರ ಸಾವು

ನೇಪಾಳದ ಘೋರ ದುರಂತ: ಐವರು ಭಾರತೀಯರ ಸಾವು

Yeti airline crashed, 32 dead; 5 Indians

ಕಾಠ್ಮಂಡು: 68 ಪ್ರಯಾಣಿಕರಿದ್ದ ವಿಮಾನ ಪೋಖರಾ ವಿಮಾನ ನಿಲ್ದಾಣದ ಸಮೀಪದಲ್ಲಿ ಪತನಗೊಂಡಿತ್ತು. ಈ ದುರ್ಘಟನೆಯಲ್ಲಿ ಸುಮಾರು 68 ಜನ ಸಾವನ್ನಪ್ಪಿದ ಕುರಿತು ವರದಿಯಾಗಿತ್ತು. ಇದರಲ್ಲಿ ಹಲವರು ವಿದೇಶಿಯರು ಸೇರಿದ್ದರು.

ಕಠ್ಮಂಡುವಿನಿಂದ ಬೆಳಿಗ್ಗೆ 10.33 ಕ್ಕೆ ಹೊರಟಿದ್ದ ಯೇತಿ ಏರ್‌ಲೈನ್ಸ್‌ನ 9N-ANC ATR-72 ವಿಮಾನವು ಪೋಖರಾ ವಿಮಾನ ನಿಲ್ದಾಣದ ಸಮೀಪದಲ್ಲಿ ಪತನವಾಗಿತ್ತು. ಇದರಲ್ಲಿ 68 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿಗಳು ಇದ್ದರು ಎಂದು ಹೇಳಲಾಗಿದೆ. ಈ ದುರ್ಘಟನೆಯಲ್ಲಿ 10 ವಿದೇಶಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಅವರಲ್ಲಿ ಐವರು ಭಾರತೀಯರು ಎಂದು ಹೇಳಲಾಗುತ್ತಿದೆ.

ಇನ್ನೂ ಈ ಘಟನೆ ನಡೆದ ಸ್ಥಳದಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದು, ಈ ಘಟನೆ ಸಂಬಂಧ ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಾಹಲ್ ತುರ್ತು ಸಭೆ ಕರೆದು ಚರ್ಚೆ ನಡೆಸಿದ್ದಾರೆ.

ಇದನ್ನೂ ಓದಿರಿ: ನೇಪಾಳದಲ್ಲಿ ವಿಮಾನ ಪತನ: 32 ಪ್ರಯಾಣಿಕರ ದುರಂತ ಅಂತ್ಯ

ನೇಪಾಳದಲ್ಲಿ ವಿಮಾನ ಪತನ: 68 ಪ್ರಯಾಣಿಕರ ದುರಂತ ಅಂತ್ಯ

nepal-yeti-airlines-plane-crash-in-pokhara-32-death

ಕಾಠ್ಮಂಡು: 68 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂಧಿಗಳನ್ನು ಹೊತ್ತೊಯ್ಯುತ್ತಿದ್ದ ವಿಮಾನ ಪೋಖರಾ ವಿಮಾನ ನಿಲ್ದಾಣದ ಸಮೀಪದಲ್ಲಿ ಪತನಗೊಂಡಿದೆ. ಭಾರಿ ಪ್ರಮಾಣದಲ್ಲಿ ಬೆಂಕಿ ಹೊತ್ತುರಿದಿದ್ದು, 68 ಪ್ರಯಾಣಿಕರು ಅಸುನೀಗಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿರಿ: ನೇಪಾಳದ ಘೋರ ದುರಂತ: ಐವರು ಭಾರತೀಯರ ಸಾವು

ನೇಪಾಳದ ನಾಗರಿಕ ವಿಮಾನಯಾನ ಪ್ರಾಧಿಕಾರ (CAAN) ಪ್ರಕಾರ, ಯೇತಿ ಏರ್‌ಲೈನ್ಸ್‌ನ 9N-ANC ATR-72 ವಿಮಾನವು ಕಠ್ಮಂಡುವಿನಿಂದ ಬೆಳಿಗ್ಗೆ 10.33ಕ್ಕೆ ಹೊರಟಿತ್ತು. ಬಳಿಕ ಪೋಖರಾ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಸೇಟಿ ನದಿಯ ದಡದಲ್ಲಿ ಪತನಗೊಂಡಿದೆ.

ವಿಮಾನವು ಪತನಗೊಳ್ಳುತ್ತಿದ್ದಂತೆ ದೊಡ್ಡ ಪ್ರಮಾಣದಲ್ಲಿ ಬೆಂಕಿ ಹೊತ್ತಿ ಉರಿದಿದೆ. ಸ್ಥಳೀಯರು ಮತ್ತು ರಕ್ಷಣಾ ಪಡೆಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.

ಇದನ್ನೂ ಓದಿರಿ: Amazon Republic day sale: ಆಫರ್ ಮಿಸ್ ಮಾಡಿಕೊಳ್ಳಬೇಡಿ, ಮೊಬೈಲ್ ಗಳ ಮೇಲೆ ಬಾರಿ ಡಿಸ್ಕೌಂಟ್

Amazon Republic day sale: ಆಫರ್ ಮಿಸ್ ಮಾಡಿಕೊಳ್ಳಬೇಡಿ, ಮೊಬೈಲ್ ಗಳ ಮೇಲೆ ಬಾರಿ ಡಿಸ್ಕೌಂಟ್

amazon-republic-day-sale

ಅಮೆಜಾನ್ ರಿಪಬ್ಲಿಕ್ ಡೇ ಸೆಲ್ (Amazon Republic day sale) ಭಾರತದಲ್ಲಿ ಆರಂಭವಾಗಿದ್ದು, ಮೊಬೈಲ್ ಸೇರಿದಂತೆ ಹಲವು ವಸ್ತುಗಳ ಮೇಲೆ ಭಾರಿ ಡಿಸ್ಕೌಂಟ್ ಘೋಷಿಸಿದೆ. ಜನವರಿ 14 ರಿಂದ ಜನವರಿ 20 ರ ವರೆಗೆ ಲೈವ್ ಆಗಿದೆ. ಆದರೆ ಜನವರಿ 14 ರಂದು ಪ್ರೈಮ್ ಸದಸ್ಯರಿಗೆ ಮಾತ್ರ ಅವಕಾಶವಿರಲಿದೆ. ಸಾಮಾನ್ಯರು 15 ರಿಂದ 20 ರ ವರೆಗೆ ವಿವಿಧ ಇಲೆಕ್ಟ್ರಾನಿಕ್ ವಸ್ತುಗಳು ಸೇರಿದಂತೆ ಹಲವು ಸರಕುಗಳ ಮೇಲೆ ವಿಶೇಷ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ.

ಅಮೆಜಾನ್ ರಿಪಬ್ಲಿಕ್ ಡೇ ಸೆಲ್ ನಲ್ಲಿ ವಿಶೇಷವಾಗಿ ಮೊಬೈಲ್ ಫೋನುಗಳು (SmartPhones), ಮೊಬೈಲ್ ಇಯರ್ ಫೋನ್, ಚಾರ್ಜರ್, ಪವರ್ ಬ್ಯಾಂಕ್, ಸ್ಮಾರ್ಟ್ ವಾಚುಗಳು (Mobile Accessories), ಟಿವಿಗಳು (Smart TV’s), ಲ್ಯಾಪ್ ಟಾಪುಗಳು(Laptops), ಅಡುಗೆಮನೆ ವಸ್ತುಗಳು (Kitchen Accessories), ವಾಷಿಂಗ್ ಮೇಷಿನ್ಸ್ (Washing Machines), ಎಲೆಕ್ಟ್ರೋನಿಕ್ (Electronics)ಗಳು ಸೇರಿದಂತೆ ಹಲವು ವಸ್ತುಗಳ ಮೇಲೆ ಶೇಕಡಾ 10 ಕ್ಕಿಂತಲೂ ಹೆಚ್ಚಿನ ರಿಯಾಯಿತಿ ದೊರೆಯಲಿದೆ. ಇದರೊಂದಿಗೆ ಸ್ಟೇಟ್ ಬ್ಯಾಂಕ್ ಕಾರ್ಡುಗಳನ್ನು ಬಳಸಿ ಖರೀದಿಸಿದಲ್ಲಿ ಹೆಚ್ಚಿನ 10% ರಿಯಾಯಿತಿಯೂ ದೊರೆಯಲಿದೆ. ಈ ರಿಯಾಯಿತಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಸ್ಮಾರ್ಟ್ ಫೋನ್ ಮೇಲೆ ರಿಯಾಯಿತಿ

ಸ್ಮಾರ್ಟ್ ಫೋನ್ ಗಳ ಮೇಲೆ ವಿಶೇಷವಾಗಿ ರಿಯಾಯಿತಿಗಳು ಲಭ್ಯವಿದ್ದು, ಹೊಸ ಮೊಬೈಲ್ ಕೊಳ್ಳಬೇಕು ಎಂದು ಕಾಯುತ್ತಿರುವವರಿಗೆ ಇದು ಕೊಳ್ಳಲು ಸರಿಯಾದ ಸಮಯವಾಗಿದೆ. ಕೆಲವು ಫೋನುಗಳ ಮೇಲೆ ಬಿಗ್ ಬಿಲಿಯನ್ ಸೆಲ್ ನಲ್ಲಿ ನೀಡಿರದ ಆಫರ್ ಗಳು ಈಗ ಲಭ್ಯವಿದೆ. ಐ ಫೋನ್, ರೆಡ್ಮಿ, ಸ್ಯಾಮ್ ಸಂಗ್, ಒನ್ ಪ್ಲಸ್, ಫೋಕೋ, ಐ ಕೂ, ರಿಯಲ್ ಮಿ  ಸೇರಿದಂತೆ ಹಲವು ಪ್ರಮುಖ ಬ್ರಾಂಡ್ ಗಳ  ಸ್ಮಾರ್ಟ್ ಫೋನ್ಗಳು ರಿಯಾಯಿತಿಯಲ್ಲಿ ಲಭ್ಯವಿದೆ. ವಿಶೇಷ ರಿಯಾಯಿತಿಯೊಂದಿಗೆ ಸ್ಮಾರ್ಟ್ ಫೋನ್ ಖರೀದಿಸಲು ಕ್ಲಿಕ್ ಮಾಡಿ. 

amazon-republic-day-sale

ಸ್ಮಾರ್ಟ್ ಟಿವಿಗಳು

ಈ ಬಾರಿಯ ಅಮೆಜಾನ್ ರಿಪಬ್ಲಿಕ್ ಡೇ ಸೆಲ್ ನಲ್ಲಿ (Amazon Republic day sale) ರೆಡ್ಮಿ, ಸ್ಯಾಮ್ ಸಂಗ್, ಏಸರ್, ತೊಷಿಬಾ ಸೇರಿದಂತೆ ಹಲವು ಬ್ರಾಂಡ್ ಗಳ ಸ್ಮಾರ್ಟ್ ಟಿವಿಗಳು ವಿಶೇಷ ಡಿಸ್ ಕೌಂಟ್ ನೊಂದಿಗೆ ಲಾಭಯವಿದೆ. ಸ್ಮಾರ್ಟ್ ಟಿವಿಗಳನ್ನು ವಿಶೇಷ ರಿಯಾಯಿತಿಯೊಂದಿಗೆ ಖರೀದಿಸಲು ಕ್ಲಿಕ್ ಮಾಡಿ. 

ಗ್ರಹೋಪಯೋಗಿ ಸಾಮಗ್ರಿಗಳು

ಈ ಬಾರಿ ಗ್ರಹೋಪಯೋಗಿ ಸಾಮಗ್ರಿಗಳ ಮೇಲೆಯೂ ರಿಯಾಯಿತಿ ಲಭ್ಯವಿದ್ದು, ಕೊಳ್ಳಲು ಕಾಯುತ್ತಿರುವವರಿಗೆ ಇದು ಉತ್ತಮ ಸಮಯವಾಗಿದೆ. ವಿವಿಧ ಗ್ರಹಬಳಕೆ ವಸ್ತುಗಳು, ವಾಷಿಂಗ್ ಮಷಿನ್, ಫ್ರಿಜ್ ಹೀಗೆ ಅಗತ್ಯ ಮನೆಬಳಕೆ ವಸ್ತುಗಳಿಗೆ ವಿಶೇಷ ಹಣ ಖಡಿತ ದೊರೆಯುತ್ತದೆ.

ಪ್ಯಾಷನ್ ಗಳ ಮೇಲೆ ವಿಶೇಷ ಕೊಡುಗೆ

ಬಟ್ಟೆಗಳು, ಪಾದರಕ್ಷೆಗಳು, ಸೌಂದರ್ಯ ವರ್ಧಕ ಪ್ರಾಡಕ್ಟ್ ಗಳು ಸೇರಿದಂತೆ ಇತರ ಪ್ಯಾಷನ್ ವಸ್ತುಗಳ ಮೇಲೆ ಶೇಕಡಾ 50 ರಿಂದ ಶೇಕಡಾ 80 ರ ವರೆಗೆ ರಿಯಾಯಿತಿ ನೀಡಲಾಗುತ್ತಿದೆ. 2023 ರ ಈ ವಿಶೇಷ ಸೆಲ್ ನೊಂದಿಗೆ ಅಮೆಜಾನ್ ಭಾರಿ ರಿಯಾಯತಿಯನ್ನು ತನ್ನ ಗ್ರಾಹಕರಿಗೆ ಒದಗಿಸಿ ಕೊಡುತ್ತಿದೆ.

ಇದನ್ನೂ ಓದಿರಿ: ಜನವರಿ 19 ರಂದು ಕಲಬುರಗಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ

ಜನವರಿ 19 ರಂದು ಕಲಬುರಗಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ

prime-minister-narendra-modi-is-scheduled-to-arrive-at-isro-headquarters-in-bangalore

ಕಲಬುರಗಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತವರು ನೆಲಕ್ಕೆ ಜನವರಿ 19 ರಂದು ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಕಲಬುರಗಿ ಸೇರಿದಂತೆ ವಿವಿಧ ಜಿಲ್ಲೆಗಳ 51,900 ತಾಂಡಾ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಲಿದ್ದಾರೆ.

ಕಲಬುರಗಿಯ ಸೇಡಂ ತಾಲೂಕಿನ ಮಳಖೇಡ ಬಳಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಂತೆ ಸುಮಾರು 60 ಎಕರೆ ವಿಶಾಲ ಪ್ರದೇಶದಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಪ್ರಧಾನಮಂತ್ರಿಗಳು ಅಂದು ಕಲಬುರಗಿ ಸೇರಿದಂತೆ ಯಾದಗಿರಿ, ಬೀದರ, ರಾಯಚೂರು ಹಾಗೂ ವಿಜಯಪುರ ಜಿಲ್ಲೆಗಳ ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ ಮತ್ತು ಜಿಲ್ಲೆಯ ಜಲ್ ಜೀವನ್ ಮಿಷನ್ ಯೋಜನೆಯ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.

ಕಾರ್ಯಕ್ರಮಕ್ಕೆ ಅಗತ್ಯವಿರುವ ಸಕಲ ತಯಾರಿಯನ್ನೂ ಮಾಡಿಕೊಳ್ಳಲಾಗುತ್ತಿದ್ದು, ಚುನಾವಣಾ ಸನಿಹದಲ್ಲಿ ಮಲ್ಲಿಕಾರ್ಜುನ್ ಖರ್ಗೆ ತವರಿನಲ್ಲಿ ದೊಡ್ಡ ಕಾರ್ಯಕ್ರಮ ಆಯೋಜಿಸಿರುವುದು ರಾಜ್ಯದಲ್ಲಿ ಸಂಚಲನ ಮೂಡಿಸಿದೆ.

ಇದನ್ನೂ ಓದಿರಿ: ಭಾರತೀಯ ಟೆನಿಸ್ ತಂಡಕ್ಕೆ ಸಾನಿಯಾ ಮಿರ್ಜಾ ವಿದಾಯ!

ಭಾರತೀಯ ಟೆನಿಸ್ ತಂಡಕ್ಕೆ ಸಾನಿಯಾ ಮಿರ್ಜಾ ವಿದಾಯ!

sania-mirza-announces-retirement

ನವದೆಹಲಿ: ಟೆನಿಸ್ ಲೋಕದ ತಾರೆ ಸಾನಿಯಾ ಮಿರ್ಜಾ ತಮ್ಮ ವೃತ್ತಿ ಜೀವನಕ್ಕೆ ವಿದಾಯ ಹೇಳಲಿದ್ದಾರೆ. ಈ ಕುರಿತು ಅವರು ಮಾಹಿತಿ ಹಂಚಿಕೊಂಡಿದ್ದು, ಜನವರಿ 16 ರಿಂದ ನಡೆಯಲಿರುವ ಆಸ್ಟ್ರೇಲಿಯಾ ಓಪನ್ ಟೆನಿಸ್ ಪಂದ್ಯಾವಳಿಯೇ ಅಂತಿಮ ಟೂರ್ನಿಯಾಗಿರಲಿದೆ.

ಫೆಬ್ರವರಿಯಲ್ಲಿ ವಿದಾಯ ಘೋಷಿಸುವ ಸಾಧ್ಯತೆಯಿದೆ ಎಂದು ಈ ಮೊದಲು ಹೇಳಿದ್ದರು, ಆದರೆ ಅದಕ್ಕೂ ಮುನ್ನ ಅಂದರೆ ಜನವರಿ 16 ರಿಂದ ನಡೆಯಲಿರುವ ಆಸ್ಟ್ರೇಲಿಯಾ ಓಪನ್ ಟೆನಿಸ್ ಪಂದ್ಯಾವಳಿಯೇ ಅಂತಿಮ ಟೂರ್ನಿ ಎಂದು ಸಾಮಾಜಿಕ ತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

2005ರ ಗ್ರಾಂಡ್ ಸ್ಲಾಮ್ ಪಂದ್ಯಾವಳಿಯ ಮೂಲಕ ತಮ್ಮ ಪ್ರಯಾಣವನ್ನು ಆರಂಭಿಸಿದ್ದರು. ಟೆನಿಸ್ ಲೋಕದಲ್ಲಿ ಮರೆಯಲಾಗದ ಆಟಗಾರ್ತಿಯಾಗಿ ಮಿಂಚಿ, ಹಲವು ಪ್ರಶಸ್ತಿಗಳನ್ನು ಭಾರತಕ್ಕೆ ತಂದುಕೊಟ್ಟಿದ್ದರು.

“ನನ್ನ ವೃತ್ತಿಪರ ವೃತ್ತಿಜೀವನದ ಕಳೆದ 20 ವರ್ಷಗಳಲ್ಲಿ ಸಾಧಿಸಲು ಸಹಾಯ ಮಾಡಿದ ಪ್ರಯೊಬ್ಬರಿಗೂ ಧನ್ಯವಾದ” ಹೇಳಿ ಬಾವುಕ ಪಾತ್ರವನ್ನು ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಅಭಿಮಾನಿಗಳೊಂದಿಗೆ ತಮ್ಮ ವಿದಾಯದ ವಿಚಾರವನ್ನು ಸಾನಿಯಾ ಬಹಿರಂಗ ಮಾಡಿದ್ದಾರೆ.

ಇದನ್ನೂ ಓದಿರಿ: ಸದ್ದಿಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ

ಚೆಕ್ ಬೌನ್ಸ್ ಪ್ರಕರಣ: ಮಠ ನಿರ್ದೇಶಕ ಗುರುಪ್ರಸಾದ್ ಗೆ ಜಾಮೀನು

director-and-actor-matha-guru-prasad-arrested-in-check-bounce-case

ಬೆಂಗಳೂರು: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಮಠ’ ಸಿನೆಮಾ ನಿರ್ದೇಶಕ ಗುರುಪ್ರಸಾದ್ ಅವರನ್ನು ಗಿರಿನಗರ ಪೊಲೀಸರು ಇಂದು ಬಂಧಿಸಿದ್ದರು.

ಶ್ರೀನಿವಾಸ್ ಎನ್ನುವವರಿಂದ 30 ಲಕ್ಷ ರೂಪಾಯಿಗಳನ್ನು 2016 ರಲ್ಲಿ ಪಡೆದುಕೊಂಡು ಹಿಂದಿರುಗಿಸದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಗಿರಿನಗರ ಪೊಲೀಸರು ಗುರುಪ್ರಸಾದ್ ಅವರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ಈ ಪ್ರಕರಣ ಕುರಿತಂತೆ 21 ನೇ ಎಸಿಎಂಎಂ ನ್ಯಾಯಾಲಯ ವಿಚಾರಣೆ ನಡೆಸಿ, ಜಾಮೀನು ಮಂಜೂರು ಮಾಡಿದೆ. ಅಲ್ಲದೇ ಈ ಪ್ರಕರಣದ ವಿಚಾರಣೆಯನ್ನು ಫೆಬ್ರವರಿ 7 ಕ್ಕೆ ಮುಂದೂಡಿ ಆದೇಶ ಹೊರಡಿಸಿದೆ.

ಇದನ್ನೂ ಓದಿರಿ: ಮಠ ಖ್ಯಾತಿಯ ಗುರುಪ್ರಸಾದ್ ಚೆಕ್ ಬೌನ್ಸ್ ಪ್ರಕರಣದಲ್ಲಿ ಅರೆಸ್ಟ್

ಸದ್ದಿಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ

indian-cricketer-veda-krishnamurthy-gets-married-to-cricketer-arjun-hoysala

ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಕರ್ನಾಟಕದ ಪ್ರಥಮ ದರ್ಜೆ ಕ್ರಿಕೆಟರ್​ ಅರ್ಜುನ್​ ಹೊಯ್ಸಳರೊಂದಿಗೆ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕಳೆದ ವರ್ಷ ಕೋವಿಡ್ ಸೋಂಕಿನಿಂದಾಗಿ ಅನಾರೋಗ್ಯಕ್ಕೆ ಒಳಗಾಗಿದ್ದ ಸಹೋದರಿ ಮತ್ತು ತಾಯಿಯನ್ನು ಕಳೆದುಕೊಂಡಿದ್ದರು. ಇದೀಗ ತಾಯಿಯ ಹುಟ್ಟು ಹಬ್ಬದ ದಿನವೇ ಅಂದರೆ ಜನವರಿ 12 ರಂದು ಸರಳವಾಗಿ ನ್ಯಾಯಾಲಯದಲ್ಲಿ ಇಬ್ಬರೂ ವೈವಾಹಿಕ ನೋಂದಣಿಗೆ ಸಹಿ ಹಾಕುವ ಮೂಲಕ ವಿವಾಹವಾಗಿದ್ದಾರೆ.

ಈ ವಿಷಯವನ್ನು ತಮ್ಮ ಸಾಮಾಜಿಕ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ “ಮಿಸ್ಟರ್ ಅಂಡ್ ಮಿಸಸ್​!!!” ಎಂದು ಬರೆದುಕೊಂಡಿದ್ದಾರೆ. ಈ ಸಮಯದಲ್ಲಿ ತಮ್ಮ ತಾಯಿ ಮತ್ತು ಅಕ್ಕನನ್ನು ನೆನಪಿಸಿಕೊಳ್ಳಲು ಮರೆಯಲಿಲ್ಲ.

ಇದನ್ನೂ ಓದಿರಿ: ವೇಷ ಬದಲಾಯಿಸಿ ಗುಜರಾತಿನಲ್ಲಿ ತಲೆಮರೆಸಿಕೊಂಡಿದ್ದ ‘ಸ್ಯಾಂಟ್ರೋ ರವಿ’ ಸೇರಿ ನಾಲ್ವರ ಸೆರೆ

ವೇಷ ಬದಲಾಯಿಸಿ ಗುಜರಾತಿನಲ್ಲಿ ತಲೆಮರೆಸಿಕೊಂಡಿದ್ದ ‘ಸ್ಯಾಂಟ್ರೋ ರವಿ’ ಸೇರಿ ನಾಲ್ವರ ಸೆರೆ

santro-ravi-has-been-arrested-in-gujarat-by-ktaka-police-says-adgp-alok-kumar

ಬೆಂಗಳೂರು: ಅನೈತಿಕ ವ್ಯವಹಾರ ಮತ್ತು ಅತ್ಯಾಚಾರ ಪ್ರಕರಣದ ಆರೋಪಿ ಸ್ಯಾಂಟ್ರೋ ರವಿಯನ್ನು ಗುಜರಾತಿನ ಅಹಮದಾಬಾದ್ ನಲ್ಲಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜನವರಿ 1 ರಂದು ಮೈಸೂರಿನಲ್ಲಿ ಪ್ರಕರಣ ದಾಖಲಾದ ನಂತರ ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿ, ರಾಜ್ಯದ ಹಲವೆಡೆ ಕಾರಿನಲ್ಲಿ ಸುತ್ತಾಡಿದ್ದ, ನಂತರ ಗುಜರಾತ್ ಗೆ ತೆರಳಿ ವೇಷ ಬದಲಿಸಿಕೊಂಡಿದ್ದ. ನಿತ್ಯ ಜಾಗ ಹಾಗೂ ಮೊಬೈಲ್ ಸೀಮ್ ಬದಲಾಯಿಸುತ್ತಿದ್ದರಿಂದ ಆತನ ಬಂಧನ ವಿಳಂಬವಾಗಿತ್ತು. ಆತನ ಬಂಧನಕ್ಕಾಗಿ ಮಂಡ್ಯ, ಮೈಸೂರು, ರಾಮನಗರ ಎಸ್ ಪಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡ ಗುಜರಾತ್ ಪೊಲೀಸರ ನೆರವಿನಿಂದ ಇಂದು ಮಧ್ಯಾಹ್ನ ಆರೋಪಿಯನ್ನು ಬಂಧಿಸಿದೆ ಎಂದು ಎಡಿಜಿಪಿ ವಿವರಿಸಿದರು.

ಇದನ್ನೂ ಓದಿರಿ: ಸದ್ದಿಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ

ಇಂದು ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿ ಹಾಗೂ ಅವನ ಜೊತೆ ಮೂವರನ್ನು ಬಂಧಿಸಲಾಗಿದೆ. ಸ್ಯಾಂಟ್ರೋ ರವಿ ಜೊತೆಗೆ ರಾಮ್ ಜಿ, ಸತೀಶ್, ಮಧುಸೂದನ್ ಎಂದು ಗುರುತಿಸಲಾಗಿದೆ. ನಿನ್ನೆ ದಿನ ಮಂತ್ರಾಲಯದಲ್ಲಿ ಸ್ಯಾಂಟ್ರೋ ರವಿ ಆಪ್ತನನ್ನು ಬಂಧಿಸಲಾಗಿತ್ತು. ನಂತರ ದೊರೆತ ಖಚಿತ ಮಾಹಿತಿ ಮೇರೆಗೆ ಗುಜರಾತ್ ಗೆ ತೆರಳಿದ ವಿಶೇಷ ತಂಡದಿಂದ ಸ್ಯಾಂಟ್ರೋ ರವಿಯನ್ನು ಬಂಧಿಸಲಾಗಿದೆ. ಟ್ರಾನ್ಸಿಟ್ ವಾರೆಂಟ್ ಪಡೆದು ಮೈಸೂರಿಗೆ ಕರೆತರುತ್ತೇವೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.

ಇದನ್ನೂ ಓದಿರಿ: ವಿಶ್ವದ ಅತೀ ಉದ್ದದ ರಿವರ್ ಕ್ರೂಸ್ ‘ಗಂಗಾ ವಿಲಾಸ್‌’ ಗೆ ಪ್ರಧಾನಿ ಮೋದಿ ಚಾಲನೆ

ವಿಶ್ವದ ಅತೀ ಉದ್ದದ ರಿವರ್ ಕ್ರೂಸ್ ‘ಗಂಗಾ ವಿಲಾಸ್‌’ ಗೆ ಪ್ರಧಾನಿ ಮೋದಿ ಚಾಲನೆ

pm-modi-flags-off-worlds-longest-river-cruise

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಉತ್ತರ ಪ್ರದೇಶದ ವಾರಣಾಸಿಯಲ್ಲಿ ವಿಶ್ವದ ಅತಿ ಉದ್ದದ ನದಿ ಕ್ರೂಸ್ “ಗಂಗಾ ವಿಲಾಸ್‌”ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು.

ಗಂಗಾ ವಿಲಾಸ್ ಹಡಗು ಭಾರತದಲ್ಲಿ ತಯಾರಾದ ಮೊದಲ ವಿಹಾರ ನೌಕೆಯಾಗಿದ್ದು, ಇದು 51 ದಿನಗಳಲ್ಲಿ 3,200 ಕಿ.ಮೀ ಸಂಚಾರವನ್ನು ಮಾಡಲಿದೆ. ಈ ಪಂಚತಾರಾ ಗಂಗಾ ವಿಲಾಸ್ ಹಡಗು 36 ಪ್ರವಾಸಿಗರ ಸಾಮರ್ಥ್ಯದೊಂದಿಗೆ 18 ಸೂಟ್‌ಗಳನ್ನು ಮತ್ತು 40 ಸಿಬ್ಬಂದಿಗೆ ವಸತಿ ವ್ಯವಸ್ಥೆಯನ್ನು ಹೊಂದಿದೆ.

ಇಂದು ಆರಂಭವಾದ ಈ ಪ್ರವಾಸಿ ಹಡಗಿನಲ್ಲಿ 32 ಸ್ವಿಸ್ ಪ್ರವಾಸಿಗರು ಬಾಂಗ್ಲಾದೇಶದ ಮೂಲಕ ಅಸ್ಸಾಂನ ದಿಬ್ರುಗಢವನ್ನು ತಲುಪಲು ಮೊದಲ ಪ್ರಯಾಣವನ್ನು ಇದರ ಮೂಲಕ ಕೈಗೊಂಡಿದ್ದಾರೆ. ಮೊದಲಬಾರಿಗೆ ಪ್ರಯಾಣಿಸುತ್ತಿರುವ ಪ್ರವಾಸಿಗರನ್ನು ವಾರಣಾಸಿ ಬಂದರಿನಲ್ಲಿ ಹೂಮಾಲೆ ಮತ್ತು ಶೆಹನಾಯಿ ನಾದದೊಂದಿಗೆ ಸ್ವಾಗತಿಸಲಾಯಿತು.

ಈ ಆಧುನಿಕ ಹಡಗು 62 ಮೀಟರ್ ಉದ್ದ ಮತ್ತು 12 ಮೀಟರ್ ಅಗಲವಿದೆ. ಇದು 27 ನದಿಗಳ ಮೂಲಕ ಪ್ರವಾಸಿಗರನ್ನು ಕರೆದೊಯ್ಯುತ್ತದೆ. ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ನರೇಂದ್ರ ಮೋದಿ ಸರಕಾರ ಈ ಒಳನಾಡು ಹಡಗಿನ ಯೋಜನೆಯನ್ನು ಆರಂಭಿಸಿದೆ. ಅಲ್ಲದೇ ಒಳನಾಡು ಜಲಮಾರ್ಗ ಅಭಿವೃದ್ಧಿಗಾಗಿ ಕೇಂದ್ರ ಸರಕಾರ 1000 ಕೋಟಿ ರೂಪಾಯಿಗಳನ್ನು ವ್ಯಯಿಸಿದೆ.

ಇದನ್ನೂ ಓದಿರಿ: ಕುಖ್ಯಾತ ವಂಚಕ, ಹೈಟೆಕ್ ವೇಶ್ಯಾವಾಟಿಕೆ ಆರೋಪಿ ಸ್ಯಾಂಟ್ರೋ ರವಿ ಅರೆಸ್ಟ್ !