ಕೋಲಾರ: ಹೊಸ ವರ್ಷದ ದಿನವೇ ದುರಂತವೊಂದು ನಡೆದಿದ್ದು, ದೇವಸ್ಥಾನವೊಂದರಲ್ಲಿ ಪ್ರಸಾದ ಸೇವಿಸಿದ 19 ಮಕ್ಕಳು ಸೇರಿದಂತೆ 53 ಭಕ್ತರು ಅಸ್ವಸ್ಥಗೊಂಡಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ನಡೆದಿದೆ.
ಯಲ್ಲೂರು ಹೋಬಳಿಯ ಬೀರಗಾನಹಳ್ಳಿ ಗ್ರಾಮದ ಗಂಗಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಬಳಿಕ ಭಕ್ತಾಧಿಗಳಿಗೆ ಚಿತ್ರಾನ್ನ ಮತ್ತು ಕೇಸರಿಬಾತ್ ಪ್ರಸಾದ ವಿತರಿಸಲಾಗಿತ್ತು. ಇದನ್ನು ಸೇವಿಸಿದ ಬಳಿಕ ವಾಂತಿಯಾಗಿ ಹಲವರು ಅಸ್ವಸ್ಥಗೊಂಡಿದ್ದಾರೆ. ತಕ್ಷಣ ಗ್ರಾಮಸ್ಥರು ಆಯಂಬುಲೆನ್ಸ್ ಮತ್ತು ಇತರೆ ವಾಹನಗಳ ಮೂಲಕ ಅಸ್ವಸ್ಥರನ್ನು ರಾತ್ರಿ 10 ಗಂಟೆಗೆ ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಇದನ್ನೂ ಓದಿರಿ: 2.5 ಅಡಿ ಎತ್ತರವಿದ್ದ ಪ್ರಪಂಚದ ಮಾಜಿ ಕುಬ್ಜ ಮಹಿಳೆ ನಿಧನ !