new symptoms of covid-19

ಕೊವಿಡ್-19 ಕುರಿತು ಇಡೀ ಜಗತ್ತೇ ತಲೆಕೆಡಿಸಿಕೊಂಡು ಅದರ ಕುರಿತು ಸಂಶೋಧನೆಯಲ್ಲಿ ತೊಡಗಿಕೊಂಡಿವೆ. ಇದರ ಕುರಿತು ಅನೇಕ ಸಂಶೋಧನಾ ವರದಿಗಳು ಹೊರಬಂದಿದ್ದು, ಹೆಚ್ಚಿನ ಜಾಗ್ರತಿಯನ್ನು ಮೂಡಿಸುತ್ತಿವೆ. ಅಲ್ಲದೇ ಇದಕ್ಕೆ ಔಷಧ ತಯಾರಿಕೆಯಲ್ಲಿಯೂ ಪ್ರಯತ್ನಗಳು ಮುಂದುವರೆದಿವೆ. ಈ ಸಂಶೋಧನೆಯ ಫಲವಾಗಿಯೇ ನಮ್ಮ ಕರ್ನಾಟಕದಲ್ಲಿ ಪ್ಲಾಸ್ಮಾ ತೆರಪಿಯೂ ಪ್ರಾರಂಭವಾಗಿದೆ.

 

ಇದನ್ನೂ ಓದಿರಿ: ಕರೊನಾ ಕುರಿತಾದ ಮಹತ್ವದ ಸುದ್ದಿಗಳು ಮತ್ತು ಮಾಹಿತಿಗಳಿಗಾಗಿ ಕ್ಲಿಕ್ ಮಾಡಿ

ಇಷ್ಟು ದಿನಗಳವರೆಗೆ ಕೇವಲ ಕೆಮ್ಮು,, ಜ್ವರ, ತಲೆನೋವು,ಉಸಿರಾಟದ ಸಮಸ್ಯೆ, ಗಂಟಲ ನೋವು, ಒಂದೇ ಸಮನೆ ಬೇಧಿಯಾಗುವುದು ಇವುಗಳು ಮಾತ್ರ ಕೊರೊನಾ ಲಕ್ಷಣಗಳು ಎಂದು ತಿಳಿಯಲಾಗಿತ್ತು. ಆದರೆ ಈ ಕುರಿತು ಹೊಸ ಹೊಸ ವರಧಿಗಳು ಬರುತ್ತಿದ್ದು, ಇವುಗಳಲ್ಲದೆ ಇನ್ನೂ ಕೆಲವು ಲಕ್ಷಣಗಳು ಕಂಡು ಬರಬಹುದೆಂದು ಹೇಳಲಾಗುತ್ತಿದೆ. ಈಗಾಗಲೆ ಈ ಸೋಂಕಿಗೆ ಒಳಗಾದ ಹಲವರನ್ನು ಪರೀಕ್ಷೆಗೆ ಒಳಪಡಿಸಿದಾಗ ಈ ಮಾಹಿತಿ ಹೊರಬಿದ್ದಿದೆ.

new symptoms of covid-19

ಕೊರೊನಾ ಸೋಂಕು ದೃಡಪಟ್ಟು ಆಸ್ಪತ್ರೆ ಸೇರಿರುವ ಹಲವರಲ್ಲಿ ಕೈಗಳು ನಡುಗುವುದು, ಒಣಕೆಮ್ಮು, ಗಂಟಲು ಕೆರೆತ, ರುಚಿಯನ್ನು ಗ್ರಹಿಸುವ ಶಕ್ತಿ ಇಲ್ಲದಿರುವಿಕೆ, ಮಾಂಸಖಂಡಗಳಲ್ಲಿ ತೀವ್ರವಾದ ನೋವು, ಉಸಿರಾಟದ ಸಮಸ್ಯೆ, ತುಟಿಗಳು ಮತ್ತು ಮುಖ ನೀಲಿ ಬಣ್ಣಕ್ಕೆ ತಿರುಗಿರುವ ಲಕ್ಷಣಗಳು ಮತ್ತು ಗೊಂದಲ ಉಂಟಾಗುವುದು ಕಂಡುಬಂದಿವೆ. ಈ ಲಕ್ಷಣಗಳನ್ನು ಅಧಿಕೃತವಾಗಿ  ಕೊವಿಡ್-19 ನ  ಲಕ್ಷಣಗಳು ಎಂದು ಸೇರಿಸಲಾಗಿದೆ. 

ಇದನ್ನೂ ಓದಿರಿ: ಕೊರೊನಾ ವೈರಸ್: ನಿಮ್ಮ ಜಿಲ್ಲೆ ಯಾವ ಝೋನ್ ನಲ್ಲಿ ಬರುತ್ತದೆ ಗೊತ್ತೇ ?

 

LEAVE A REPLY

Please enter your comment!
Please enter your name here