ಪಿಒಕೆಯನ್ನು ಮರಳಿ ಪಡೆಯುವ ಗುರಿಯನ್ನು ಭಾರತ ಎಂದೂ ಸಾಧಿಸುವುದಿಲ್ಲ: ಪಾಕ್ ಸೇನಾ ಮುಖ್ಯಸ್ಥ

new-pakistan-army-chief-syed-says-india-will-never-achieve-its-aim-of-reclaiming-pok

ಪಾಕ್ ಆಕ್ರಮಿತ ಕಾಶ್ಮೀರವನ್ನು (POK) ಹಿಂಪಡೆಯುವ ಗುರಿಯನ್ನು ಭಾರತ ಎಂದಿಗೂ ಸಾಧಿಸುವುದಿಲ್ಲ ಮತ್ತು ದಾಳಿಯ ವೇಳೆ ತನ್ನ ದೇಶವನ್ನು ರಕ್ಷಿಸಲು ಪಾಕಿಸ್ತಾನಿ ಪಡೆಗಳು ಸಿದ್ಧವಾಗಿವೆ ಎಂದು ಪಾಕ್ ಸೇನಾ ಮುಖ್ಯಸ್ಥ ಜನರಲ್ ಸೈಯದ್ ಅಸಿಮ್ ಮುನೀರ್ ಹೇಳಿದ್ದಾರೆ.

ಸೇನಾ ಮುಖ್ಯಸ್ಥರಾಗಿದ್ದ ಜನರಲ್ ಕಮರ್ ಜಾವೇದ್ ಬಜ್ವಾ ಅಧಿಕಾರಾವಧಿ ಮುಗಿದ ಹಿನ್ನೆಲೆಯಲ್ಲಿ ನೂತನವಾಗಿ ನೇಮಕವಾದ ಜನರಲ್ ಸೈಯದ್ ಅಸಿಮ್ ಮುನೀರ್ ರಾಖ್‌ಚಿಕ್ರಿ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆಗೆ ಭೇಟಿ ನೀಡಿದ್ದರು. ಈ ಸಮಯದಲ್ಲಿ ಮಾತನಾಡುತ್ತ, ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತ ಇಂದಿಗೂ ಹಿಂಪಡೆಯಲು ಶಕ್ತವಾಗುವುದಿಲ್ಲ. ನಮ್ಮ ಸಶಸ್ತ್ರ ಪಡೆಗಳು ಮಾತೃಭೂಮಿಯ ರಕ್ಷಣೆ ಮಾಡುವುದಲ್ಲದೇ ಶತ್ರುಗಳ ವಿರುದ್ಧವೂ ಹೋರಾಡಲು ಸನ್ನದ್ಧವಾಗಿವೆ.

ನಾವು ಉಭಯ ರಾಷ್ಟ್ರಗಳ ನಡುವಿನ ಕದನ ವಿರಾಮ ಒಪ್ಪಂದವನ್ನು ಮುರಿಯುವುದಿಲ್ಲ. ಒಂದು ವೇಳೆ ಶತ್ರು ರಾಷ್ಟ್ರ ನಮ್ಮ ಮೇಲೆ ದಾಳಿ ಮಾಡಿದ್ದೆ ಆದಲ್ಲಿ ನಮ್ಮ ಸೇನೆ ಯುದ್ಧಕ್ಕೆ ಸಿದ್ಧವಾಗಿದೆ ಎಂದು ಹೇಳಿದರು.

ಪಾಕ್ ಆಕ್ರಮಿತ ಪ್ರದೇಶವನ್ನು ಮರಳಿ ಪಡೆಯುವ ಆದೇಶವನ್ನು ಕಾರ್ಯಗತಗೊಳಿಸುವ ಕುರಿತು ಭಾರತೀಯ ಸೇನಾ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ, ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗಳಿಗೆ ಈ ಹಿಂದೆ ಪ್ರತಿಕ್ರಿಯೆ ನೀಡಿದ್ದರು.

ಇದಲ್ಲದೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಹ ಪಾಕ್ ಆಕ್ರಮಿತ ಕಾಶ್ಮೀರವನ್ನು ಹಿಂಪಡೆಯುವ ನವದೆಹಲಿಯ ಸಂಕಲ್ಪವನ್ನು ಸಹ ಮಾಡಿದ್ದರು.

ಇದನ್ನೂ ಓದಿರಿ: ರಾಜ್ಯದ ಜನತೆಗೆ ಸಿಹಿ ಸುದ್ದಿ: ವಿದ್ಯುತ್ ದರ ಯುನಿಟ್ ಗೆ 70 ಪೈಸೆಯಿಂದ 2 ರೂ. ವರೆಗೆ ಕಡಿತ ಸಾಧ್ಯತೆ

LEAVE A REPLY

Please enter your comment!
Please enter your name here