ಬೆಂಗಳೂರು: ಇತ್ತೀಚಿಗೆ ಮಹಿಳಾ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಲೇ ಇದೆ. ಅಲ್ಲದೇ ಬಾಲ್ಯವಿವಾಹ ತಡೆಗೆ ನಿಷೇಧ ಕಾನೂನು ಇದ್ದರೂ ಅಲ್ಲಲ್ಲಿ ಸಣ್ಣ ವಯಸ್ಸಿನಲ್ಲಿಯೇ ಹೆಣ್ಣುಮಕ್ಕಳ ಮದುವೆ ಮಾಡುವ ಪ್ರಯತ್ನಗಳು ಇಂದಿಗೂ ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಮಹತ್ವದ ಕ್ರಮ ಕೈಗೊಂಡಿದ್ದು, ಮದುವೆಯ ಕಡ್ಡಾಯ ನೋಂದಣಿ ಅಧಿಕಾರವನ್ನು ಗ್ರಾಮ ಪಂಚಾಯತಿಗಳಿಗೆ ವಹಿಸುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.
ಶಿಕ್ಷಣ ಪಡೆಯಬೇಕಿದ್ದ ಅದೆಷ್ಟೋ ಹೆಣ್ಣು ಮಕ್ಕಳು ಮದುವೆ ಎಂಬ ಸಂಕೋಲೆಗೆ ಸಿಲುಕಿ ನಲುಗುತ್ತಿದ್ದಾರೆ. ಈ ಕಾರಣದಿಂದ ಬಾಲ್ಯವಿವಾಹ ತಡೆಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಮದುವೆಯ ನೋಂದಣಿಯನ್ನು ಗ್ರಾಮಪಂಚಾಯತಿ ಅಧಿಕಾರದ ವ್ಯಾಪ್ತಿಗೆ ತರುವಂತೆ ಸರಕಾರಕ್ಕೆ ಶಿಫಾರಸ್ಸು ಮಾಡಿದೆ.
ಗ್ರಾಮ ಪಂಚಾಯತಗಳಲ್ಲಿ ನೋಂದಣಿಗೆ ಅವಕಾಶ ನೀಡುವುದರಿಂದ ಗ್ರಾಮೀಣ ಜನರಿಗೆ ಅನುಕೂಲವಾಗಲಿದೆ. ಇದರಿಂದಾಗಿ ಬಾಲ್ಯವಿವಾಹವನ್ನು ತಡೆಗಟ್ಟಲು ಸಾಧ್ಯವಾಗಲಿದೆ. ಇದರಿಂದಾಗಿ ಗ್ರಾಮಪಂಚಾಯತಿ ಅಭಿವೃದ್ಧಿ ಅಧಿಕಾರಿ ನೋಂದಣಿ ಕಾರ್ಯ ನಿರ್ವಹಿಸುವಂತಾಗಲಿದೆ.
ಇದನ್ನೂ ಓದಿರಿ: ನೋಟು ಅಮಾನ್ಯೀಕರಣ ಸಿಂಧುತ್ವ ತೀರ್ಪು ಎತ್ತಿ ಹಿಡಿದ ಸುಪ್ರೀಂಕೋರ್ಟ್
ವಿವಾಹ ನೋಂದಣಿಗೆ ರೂ. 250 ಒಳಗೆ ಶುಲ್ಕವನ್ನು ಪಾವತಿಸುವಂತೆ ಮಾಡಿ ನೋಂದಣಿಯನ್ನು ಕಡ್ಡಾಯಗೊಳಿಸಬೇಕು ಎಂದು ಆಯೋಗವು ಸರಕಾರಕ್ಕೆ ಹೇಳಿದೆ ಎಂದು ತಿಳಿದು ಬಂದಿದೆ.