ಕಾಂಗ್ರೆಸ್ ನಿಂದ ಮುಖ್ಯಮಂತ್ರಿ ರೆಸ್ ಗೆ ಮತ್ತೊಬ್ಬ ರಾಜಕಾರಣಿ ಎಂಟ್ರಿ..!

new-entry-in-karnataka-cm-race

ಸಿದ್ದಾಪುರ: ನಗರದಲ್ಲಿ ಪಶ್ಚಿಮ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್ ಎಂ ಕುಬೇರಪ್ಪ ಪರವಾಗಿ ಪ್ರಚಾರದಲ್ಲಿ ಬಾಗಿಯಾಗಿದ್ದ ಎಚ್ ಕೆ ಪಾಟೀಲ್ ಅವರು ದೇವರ ಆಶೀರ್ವಾದ ಇದ್ದರೆ ಮುಖ್ಯಮಂತ್ರಿಯಾಗುವ ಬಗ್ಗೆ ನೋಡೋಣ ಎಂದಿದ್ದಾರೆ. ಈ ಮೂಲಕ ಕಾಂಗ್ರೆಸ್ ನಿಂದ ಮುಖ್ಯಮಂತ್ರಿ ರೆಸ್ ಗೆ ಮತ್ತೊಬ್ಬ ರಾಜಕಾರಣಿ ಎಂಟ್ರಿಯಾಗಿದ್ದಾರೆ.

ಸಿದ್ದಾಪುರದಲ್ಲಿ ಮಾತನಾಡಿದ ಹೆಚ್ ಕೆ ಪಾಟೀಲ್ ಅವರು ಕೇಂದ್ರ ಸರಕಾರ ಜನರಿಗೆ ಸುಳ್ಳು ಹೇಳುವುದು, ಮೋಸ ಮಾಡುವುದು, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತುರುವುದು ಮಾಡುತ್ತಿದೆ. ಇಲ್ಲಿನ ಜನರು ಕಾಂಗ್ರೆಸ್ ಪಕ್ಷ ಮತ್ತು ಶಾಸಕರ ಬಗ್ಗೆ ಚೆನ್ನಾಗಿ ಬಲ್ಲವರಾಗಿದ್ದಾರೆ. ಈಗ ಮುಖ್ಯಮಂತ್ರಿ ಸ್ಥಾನದ ವಿಷಯ ಪ್ರಸ್ತುತವಲ್ಲ. ಚುನಾವಣಾ ಸಮಯ ಬಂದಾಗ ಪಕ್ಷದ ನಾಯಕರು ಮತ್ತು ವರಿಷ್ಠರು ಈ ಬಗ್ಗೆ ತೀರ್ಮಾನವನ್ನು ತೆಗೆದುಕೊಳ್ಳುತ್ತಾರೆ. ಈ ಕುರಿತು ಗೊಂದಲ ಉಂಟುಮಾಡುವುದು ಬೇಡ ಎಂದು ಹೇಳಿದ್ದಾರೆ.

 

LEAVE A REPLY

Please enter your comment!
Please enter your name here