ಬೆಂಗಳೂರು (ಜೂ.29): ರಾಜ್ಯದಲ್ಲಿ ಕೊರೊನಾ ಹಾವಳಿ ಮಿತಿ ಮೀರಿದ್ದು, ರಾಜ್ಯದ ಜನರನ್ನು ಭಯಬೀತರನ್ನಾಗಿಸಿದೆ. ಇಂದು ಒಂದೇ ದಿನದಲ್ಲಿ 1105 ಮಂದಿಗೆ ಸೋಂಕು ಕಾಣಿಸಿಕೊಳ್ಳುವ ಮೂಲಕ ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 14,295 ಕ್ಕೆ ಏರಿಕೆಯಾದಂತಾಗಿದೆ.
ಇಂದು ಕೊರೊನಾ ಸೋಂಕಿನಿಂದ ರಾಜ್ಯದಲ್ಲಿ 19 ಜನರು ಮೃತಪಟ್ಟಿದ್ದು, ಇಲ್ಲಿಯವರೆಗೆ ಸಾವನ್ನಪ್ಪಿದವರ ಸಂಖ್ಯೆ 226 ಕ್ಕೆ ಏರಿಕೆಯಾಗಿದೆ. ಬಳ್ಳಾರಿ 12, ಬೆಂಗಳೂರು ನಗರ 4, ಬಾಗಲಕೋಟೆ 1, ದಕ್ಷಿಣ ಕನ್ನಡ 1, ಹಾಸನ 1 ರೋಗಿಗಳು ಕೊನೆಯುಸಿರು ಎಳೆದಿದ್ದಾರೆ.
ಇನ್ನು ಜಿಲ್ಲಾವಾರು ಸೋಂಕಿತರ ಸಂಖ್ಯೆ ನೋಡುವುದಾದರೆ ಬೆಂಗಳೂರು ನಗರ 738, ಬಳ್ಳಾರಿ 76, ದಕ್ಷಿಣ ಕನ್ನಡ 32, ಬೀದರ್ 28, ಉತ್ತರ ಕನ್ನಡ 24, ಕಲಬುರಗಿ 23, ಹಾಸನ 22, ವಿಜಯಪುರ 22, ತುಮಕೂರು 18, ಉಡುಪಿ 18, ಧಾರವಾಡ 17, ಚಿಕ್ಕಮಂಗಳೂರು 17, ಚಿಕ್ಕಬಳ್ಳಾಪುರ 15, ಯಾದಗಿರಿ 9, ಮಂಡ್ಯ 8, ಮೈಸೂರು 6, ಶಿವಮೊಗ್ಗ 5, ರಾಯಚೂರು 4, ಬಾಗಲಕೋಟೆ 4, ಕೋಲಾರ 4, ಗದಗ 4, ಬೆಂಗಳೂರು ಗ್ರಾಮಾಂತರ 3, ದಾವಣಗೆರೆ 2, ರಾಮನಗರ 2, ಚಿತ್ರದುರ್ಗ 2, ಹಾವೇರಿ 1, ಕೊಡಗು 1 ಪ್ರಕರಣಗಳು ದಾಖಲಾಗಿವೆ.
ಸಂಜೆಯ ಪತ್ರಿಕಾ ಪ್ರಕಟಣೆ 29/06/2020.
ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಕೆಳಗೆ ಈ ಲಿಂಕನ್ನು ಕ್ಲಿಕ್ ಮಾಡಿ.https://t.co/CSyTJPC0nO@BMTC_BENGALURU @NammaBESCOM @tv9kannada @publictvnews @suvarnanewstv @timesofindia @prajavani @udayavani_web @TV5kannada @Vijaykarnataka @VVani4U pic.twitter.com/icEwJvoeAe— K’taka Health Dept (@DHFWKA) June 29, 2020
ಇಂದು ಕೊರೊನಾ ಸೋಂಕಿನಿಂದ ಗುಣಮುಖರಾಗಿ 176 ಜನರು ತಮ್ಮ ಮನೆಗಳಿಗೆ ತೆರಳಿದ್ದಾರೆ. ಇದರೊಂದಿಗೆ ಇಲ್ಲಿಯವರೆಗೆ 7,683 ಜನರು ಗುಣಮುಕರಾದಂತಾಗಿದ್ದು, ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 6,382 ರೋಗಿಗಳು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇನ್ನು ಕಾರೋನಾ ಸೋಂಕಿನ ಪರಿಣಾಮಗಳು ಹೆಚ್ಚಾಗಿದ್ದು, 268 ಜನರು ಐಸಿಯು ಬೆಡ್ ಗಳನ್ನು ಬಳಸಿಕೊಳ್ಳುತ್ತಿದ್ದಾರೆ.