ಸಂಸತ್ತಿನಲ್ಲಿ ವಿಶ್ವಾಸ ಕಳೆದುಕೊಂಡ ʼನೇಪಾಳ ಪ್ರಧಾನಿʼ ಕೆಪಿ ಶರ್ಮಾ ಓಲಿ

nepal-pm-oli-has-lost-vote-of-confidence-in-the-parliamen

ಕಠ್ಮಂಡು: ನೇಪಾಳದ ಪ್ರಧಾನಿ ಕೆಪಿ ಶರ್ಮ ಒಲಿ ಸಂಸತ್ತಿನಲ್ಲಿ ವಿಶ್ವಾಸ ಮತ ಕಳೆದುಕೊಂಡು ಸೋಲನ್ನು ಅನುಭವಿಸಿದ್ದಾರೆ. ಕೇವಲ 93 ಮತಗಳನ್ನು ಪಡೆಯುವ ಮೂಲಕ, ಅಗತ್ಯವಿರುವ 136 ಮತಗಳನ್ನು ಪಡೆದುಕೊಳ್ಳುವಲ್ಲಿ ವಿಫಲರಾದರು.

ನೇಪಾಳದ ಸಂಸತ್ತಿನ ಕೆಳಮನೆಯಲ್ಲಿ 275 ಸದಸ್ಯರು ಇದ್ದು, ಇವರಲ್ಲಿ ನಾಲ್ವರು ಅಮಾನತುಗೊಂಡಿದ್ದರು. ಈ ಕಾರಣದಿಂದಾಗಿ ಒಲಿ ಅವರಿಗೆ ವಿಶ್ವಾಸ ಮತ ಯಾಚನೆಮಾಡುವುದು ಅನಿವಾರ್ಯವಾಗಿತ್ತು. ಅಲ್ಲದೇ  ನೇಪಾಳದಲ್ಲಿ ಕೊರೋನಾ ಅಲೆಯು ಜೋರಾಗಿಯೇ ಸಾಗಿದ್ದು, ದೇಶದಲ್ಲಿ ಸರಿಯಾಗಿ ಚಿಕಿತ್ಸೆ ದೊರೆಯುತ್ತಿಲ್ಲ. ಈ ಕಾರಣಗಳಿಂದಾಗಿ ದೇಶದಲ್ಲಿನ ಕೊರೋನಾ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ ಎಂದು ವಿರೋಧವನ್ನು ಪಡೆದಿದ್ದರು.

ವಿಶ್ವಾಸ ಮತಯಾಚನೆಯಲ್ಲಿ ಜಯಗಳಿಸಲು ಒಲಿಯವರಿಗೆ 136 ಮತಗಳ ಅವಶ್ಯಕತೆಯಿತ್ತು. ಆದರೆ ಸಂಸತ್ತಿನಲ್ಲಿ ಕೇವಲ 93 ಮತಗಳನ್ನು ಪಡೆಯುವ ಮೂಲಕ ಹೀನಾಯ ಸೋಲನ್ನು ಅನುಭವಿಸಿದರು. ಇದಲ್ಲದೆ ಇವರ ವಿರುದ್ಧ 124 ಮತಗಳು  ಬಂದಿರುವುದು ವಿಶೇಷವಾಗಿತ್ತು. ಇವೆಲ್ಲವುಗಳ ನಡುವೆ 15 ಸದಸ್ಯರು ತಟಸ್ಥರಾಗಿದ್ದುದು ಕಂಡುಬಂದಿತು.

LEAVE A REPLY

Please enter your comment!
Please enter your name here