neeraj-chopra-won-historic-gold-medal-in-tokyo-olympics

ಟೋಕಿಯೋ: ಭಾರತ ಅಥ್ಲೆಟಿಕ್ ವಿಭಾಗದಲ್ಲಿ 120 ವರ್ಷಗಳ ಬಳಿಕ ಮೊದಲ ಚಿನ್ನದ ಪದಕ ಗಳಿಸಿ, ಹೆಗ್ಗಳಿಕೆಗೆ ಪಾತ್ರವಾಗಿದೆ. ಜಾವಲಿನ್ ಥ್ರೋನಲ್ಲಿ ಭಾರತದ ನೀರಜ್ ಚೋಪ್ರಾ ಚಿನ್ನದ ಪದಕ ಗೆಲ್ಲುವ ಮೂಲಕ ಈ ಸಾಧನೆ ಮಾಡಿದ್ದಾರೆ.

120 ವರ್ಷಗಳ ಬಳಿಕ ಅಥ್ಲೆಟಿಕ್ ವಿಭಾಗದಲ್ಲಿ ಚಿನ್ನ ಗೆಲ್ಲುವ ಮೂಲಕ ನೀರಜ್ ಚೋಪ್ರಾ ಸಾಧನೆ ಮಾಡಿದ್ದು, ಭಾರತದ ಚಿನ್ನದ ಪದಕ ಗೆಲ್ಲುವ ದಶಕಗಳ ಕನಸು ನನಸಾಗಿದೆ. ಈ ಬಾರಿಯ ಒಲಂಪಿಕ್ ನಲ್ಲಿ ಭಾರತದ ಏಳನೆಯ ಪದಕವನ್ನು ಭಾರತ ಈ ಮೂಲಕ ಗಳಿಸಿದೆ.

23 ವರ್ಷದ ನೀರಜ್ ಚೋಪ್ರಾ ಜಾವಲಿನ್ ಥ್ರೋನಲ್ಲಿ ಮೊದಲ ಎಸೆತವನ್ನು 87.03 ಮೀಟರ್ ದೂರಕ್ಕೆ ಎಸೆದರೆ ಎರಡನೆಯ ಪ್ರಯತ್ನದಲ್ಲಿ 87.58 ಮೀಟರ್ ದೂರಕ್ಕೆ ಎಸೆಯುವಲ್ಲಿ ಯಶಸ್ವಿಯಾದರು. ಇನ್ನು ಮೂರನೆಯ ಎಸೆತದಲ್ಲಿ 76.79 ಮೀಟರ್ ದೂರಕ್ಕೆ ಬಿದ್ದರೂ ಎರಡನೆಯ ಪ್ರಯತ್ನದಲ್ಲಿ ಉತ್ತಮ ಆಟವಾಡಿದ್ದರಿಂದ ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾದರು.

ನೀರಜ್ ಚೋಪ್ರಾ ಅವರು ಒಲಂಪಿಕ್ ನಲ್ಲಿ ಈ ಸಾಧನೆಯನ್ನು ಮಾಡುತ್ತಿದ್ದಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ ಟ್ವಿಟ್ ಮಾಡಿ ಅಭಿನಂದಿಸಿದ್ದು, “ನೀರಜ್ ಚೋಪ್ರಾ ಅವರು ಟೋಕಿಯೋದಲ್ಲಿ ಇತಿಹಾಸವನ್ನು ನಿರ್ಮಿಸಿದ್ದಾರೆ. ಈ ಸಾಧನೆ ಎಂದೆಂದಿಗೂ ನೆನಪಿನಲ್ಲಿ ಇರುವಂತಹದ್ದು, ಈ ಅಪ್ರತಿಮ ಸಾಧನೆಯನ್ನು ಮಾಡಿರುವ ಅವರಿಗೆ ಅಭಿನಂದನೆಗಳು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here