ಅವಳಿ ನಗರದಲ್ಲಿ ರಾಷ್ಟ್ರೀಯ ಯುವಜನೋತ್ಸವ – ಅಡುಗೆ ತಯಾರಿ ಹೇಗಿದೆ

national-youth-festival-how-is-cooking-preparation

ಹುಬ್ಬಳ್ಳಿ: 26 ನೇಯ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಲು ದೇಶದ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗುವವರಿಗಾಗಿಯೇ 600 ಜನ ಬಾಣಸಿಗರು ವಿಶೇಷ ತಿಂಡಿ-ತಿನಿಸುಗಳನ್ನು ತಯಾರಿಸಲಿದ್ದಾರೆ.

ಯುವಜನೋತ್ಸವದಲ್ಲಿ ಭಾಗಿಯಾಗುವವರಿಗಾಗಿಯೇ ವಿಶೇಷ ತಿಂಡಿ, ಮಧ್ಯಾಹ್ನದ ಊಟ, ಸಂಜೆ ಲಘು ಆಹಾರ ಮತ್ತು ರಾತ್ರಿಗೆ ಊಟ ಸೇರಿದಂತೆ ಹಲವು ಭಕ್ಷ್ಯ ಭೋಜನಗಳನ್ನು ತಯಾರಿಸಲಾಗುತ್ತಿದೆ. ಸುಮಾರು 600 ಜನ ಬಾಣಸಿಗರು ಅಡುಗೆ ತಯಾರಿಯಲ್ಲಿ ನಿರತರಾಗಿದ್ದಾರೆ.

ಊಟ-ತಿಂಡಿ ವ್ಯವಸ್ಥೆಯನ್ನು ನಗರದ ಕೃಷಿ ವಿವಿ ಆವರಣದಲ್ಲಿ ಮಾಡಿಕೊಳ್ಳಲಾಗಿದ್ದು, ತಿಂಡಿ: ಮಲ್ಲಿಗೆ ಇಡ್ಲಿ, ಉದ್ದಿನ ವಡೆ, ಸಾಂಬಾರು-ಚಟ್ನಿ, ಶ್ಯಾವಿಗೆ ಉಪ್ಪಿಟ್ಟು, ಆಲೂ ಪರೋಟಾ, ಬ್ರೇಡ್-ಜಾಮ್, ಬೇಯಿಸಿದ ಮೊಟ್ಟೆ, ಆಮ್ಲೆಟ್, ಚಹಾ-ಕಾಫಿ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿರಿ: ರಾಮನಗರದಲ್ಲಿ ಸ್ಯಾಂಟ್ರೋ ರವಿ ಕಾರು ಚಾಲಕನನ್ನು ವಶಕ್ಕೆ ಪಡೆದ ಪೊಲೀಸರು

ಮಧ್ಯಾಹ್ನ: ಬೆಂಡಿ ಮಸಾಲ, ಪನ್ನೀರ್ ಮಟ್ಟರ್, ದಾಲ್ ಮಖಾನಿ, ಗೋಧಿ ರೋಟಿ/ತವಾ ರೋಟಿ, ಕುಲ್ಚಾ, ತಂದೂರಿ ರೋಟಿ, ಪಲಾವ್, ಅನ್ನ, ಕ್ಯಾರೇಟ್ ಹಲ್ವಾ.

ಸಂಜೆ: ತರಕಾರಿ ಮಿಶ್ರಣದ ಪಕೋಡ, ಕುಕೀಸ್, ಕಾಫಿ ಟೀ.

ರಾತ್ರಿ: ಮಟನ್, ಮೇಥಿಮಟರ್ ಮಲೈ, ಪನ್ನೀರ್ ಹರಿಯಾಲಿ, ಚಪಾತಿ, ಬೇಬಿ ನಾನ್, ತಂದೂರಿ ರೋಟಿ, ದೋಸೆ, ಸಾಲಡ್, ಪಾಸ್ತಾ, ಟೊಮೊಟೋ ರೈಸ್, ಜಿಲೇಬಿ ರಬ್ಡಿ.

ಇದನ್ನೂ ಓದಿರಿ: ಹುಬ್ಬಳ್ಳಿಗೆ ಪ್ರಧಾನಿ ಆಗಮನ ಹಿನ್ನೆಲೆ, ಹೆಚ್ಚುವರಿ ಪೊಲೀಸ್ ಬಂದೋಬಸ್ತ್​​​​​

LEAVE A REPLY

Please enter your comment!
Please enter your name here