ಭೋಪಾಲ್: ಸೋಮವಾರ ಇಲ್ಲಿ ನಡೆದ ಎಲೀಟ್ ರಾಷ್ಟ್ರೀಯ ಮಹಿಳಾ ಬಾಕ್ಸಿಂಗ್‌ನಲ್ಲಿ ವಿಶ್ವ ಚಾಂಪಿಯನ್ ನಿಖತ್ ಜರೀನ್ ಹಾಗೂ ಒಲಿಂಪಿಕ್ ಪದಕ ವಿಜೇತೆ ಲವ್ಲಿನಾ ಬೋರ್ಗೊಹೈನ್ ಚಿನ್ನದ ಪದಕ ಗೆದ್ದು ಬೀಗಿದರು.
12 ವಿಭಾಗಗಳಲ್ಲಿ 302 ಬಾಕ್ಸಿಂಗ್ ಪಟುಗಳು ಸ್ಪರ್ಧಿಸಿದ್ದ ಈ ಟೂರ್ನಿಯಲ್ಲಿ ಒಟ್ಟು 10 ಪದಕಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ ರೈಲ್ವೆ ಕ್ರೀಡಾ ಅಭಿವೃದ್ಧಿ ಮಂಡಳಿ (ಆರ್‌ಎಸ್‌ಪಿಬಿ) ತಂಡ ವಿಭಾಗದ ಚಾಂಪಿಯನ್ ಆಗಿ ಹೊರಹೊಮ್ಮಿತು.
50 ಕೆ.ಜಿ. ವಿಭಾಗದಲ್ಲಿ 26 ವರ್ಷದ ನಿಖತ್ ಹಾಲಿ ಮಹಿಳಾ ವಿಶ್ವ ಚಾಂಪಿಯನ್ ತೆಲಂಗಾಣದ ನಿಖತ್ ಜರೀನ್ ಆರ್‌ಎಸ್‌ಪಿಬಿಯ ಅನಾಮಿಕಾ ವಿರುದ್ಧ ಗೆದ್ದರು. 75 ಕೆ.ಜಿ. ಫೈನಲ್‌ನಲ್ಲಿ ಅಸ್ಸಾಂ ತಂಡದ ಲವ್ಲಿನಾ, ಸರ್ವಿಸಸ್‌ನ ಅರುಂಧತಿ ಚೌಧರಿ ವಿರುದ್ಧ 5–0ಯಿಂದ ಗೆದ್ದರು.
ವಿಶ್ವ ಚಾಂಪಿಯನ್‌ಷಿಪ್ ಬೆಳ್ಳಿ ಪದಕ ವಿಜೇತೆ ಮಂಜು ರಾಣಿ 48 ಕೆ.ಜಿ. ವಿಭಾಗದಲ್ಲಿ 5–0ಯಿಂದ ತಮಿಳುನಾಡಿನ ಎಸ್. ಕಲೈವಾಣಿ ವಿರುದ್ಧ ಜಯ ಸಾಧಿಸಿದರು.
ಶಿಕ್ಷಾ (54ಕೆ.ಜಿ), ಪೂನಂ (60 ಕೆ.ಜಿ), ಶಶಿ ಚೋಪ್ರಾ (63ಕೆ.ಜಿ) ಮತ್ತು ನೂಪುರ್ (+81 ಕೆಜಿ) ಅವರೂ ಚಿನ್ನದ ಪದಕಗಳನ್ನು ಜಯಿಸಿದರು. ಹರಿಯಾಣದ ಮನೀಷಾ (57ಕೆ.ಜಿ), ಸ್ವೀಟಿ (81 ಕೆ.ಜಿ), ಎಸ್‌ಎಸ್‌ಸಿಬಿಯ ಸಾಕ್ಷಿ (52ಕೆ.ಜಿ), ಮಧ್ಯಪ್ರದೇಶದ ಮಂಜು ಬೆಂಬೊರಿಯಾ (66 ಕೆ.ಜಿ) ಕೂಡ ಚಿನ್ನದ ಪದಕ ಪಡೆದರು.
ಇದನ್ನೂ ಓದಿರಿ: ಹೊಸ ವರ್ಷಾಚರಣೆಗೆ ಯಾವುದೇ ನಿರ್ಬಂಧ ಇಲ್ಲ, ಆದ್ರೆ ಮಾಸ್ಕ್ ಕಡ್ಡಾಯ: ಸಚಿವ ಸುಧಾಕರ್