narendra-modi-to-undertake-aerial-survey-of-cyclone-affected-areas-in-west-bengal-and-odisha-on-friday

ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಅಂಫಾನ್ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ವೈಮಾನಿಕ ಸಮೀಕ್ಷೆಯ ನಂತರ, ಪ್ರಧಾನಿ ಮೋದಿ ಅವರು ಪರಿಶೀಲನಾ ಸಭೆಯಲ್ಲಿ ಭಾಗವಹಿಸಲಿದ್ದು, ಇದರಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ ಎಂದು ತಿಳಿದುಬಂದಿದೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಬೇಟಿ ನೀಡುವಂತೆ ವಿನಂತಿಸಿಕೊಂಡಿದ್ದರು. ಸಧ್ಯ ಅಂಫಾನ್ ಚಂಡಮಾರುತ ದುರ್ಭಲಗೊಂದಿದ್ದು, ಇದರಿಂದಾಗಿ ಸುಮಾರು 72 ಜನರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಎರಡು ಜಿಲ್ಲೆಗಳು  ಚಂಡಮಾರುತದಿಂದ ತೀವ್ರ ಹಾನಿಗೊಳಗಾಗಿದ್ದು, ಮನೆ, ರಸ್ತೆ, ಸೇತುವೆಗಳು ಸಂಪೂರ್ಣ ನಾಶವಾಗಿವೆ. ಸಾವಿರಾರು ಜನರು ತಮ್ಮ ಮನೆ ಮಠ ಕೆದುಕೊಂಡು ನಿರಾಶ್ರಿತರಾಗಿದ್ದಾರೆ.

ಚಂಡಮಾರುತದಿಂದ ಹಾನಿಗೊಳಗಾದವರಿಗೆ ಎಲ್ಲ ರೀತಿಯಿಂದ ಸಹಾಯಮಾಡಲು ಪ್ರಯತ್ನಿಸಲಾಗುತ್ತದೆ. ಅಂಫಾನ್ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳ ದೃಶ್ಯಗಳನ್ನು ನಾನು ನೋಡಿದ್ದೇನೆ. ಇದು ನಮ್ಮೆಲ್ಲರಿಗೂ ಸವಾಲಿನ ಸಮಯವಾಗಿದೆ. ಇಡಿ ದೇಶ ನಿಮ್ಮೊಂದಿಗೆ ಒಗ್ಗೂಡಿ ನಿಂತಿದೆ ಎಂದು ಹೇಳಿದ್ದಾರೆ.

ಉನ್ನತ ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಪಶ್ಚಿಮ ಬಂಗಾಳ ಸರಕಾರದೊಂದಿಗೆ ನಿಕಟ ಸಂಪರ್ಕದಲ್ಲಿದ್ದಾರೆ. ಸಮಸ್ಯೆಗೆ ಗುರಿಯಾದ ಜನರಿಗೆ ಎಲ್ಲರೀತಿಯಿಂದ ಸಹಾಯ ಮಾಡಲು ಸರಕಾರ ಸಜ್ಜಾಗಿದೆ ಎಂದು ಮೋದಿಯವರು ಹೇಳಿದ್ದಾರೆ.

ಏತನ್ಮಧ್ಯೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗೆ ಮಾತನಾಡಿ, ಪರಿಸ್ಥಿತಿಯನ್ನು ಎದುರಿಸಲು ಕೇಂದ್ರದಿಂದ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುವುದಾಗಿ ಭರವಸೆ ನೀಡಿದರು. ಪಶ್ಚಿಮ ಬಂಗಾಳದಲ್ಲಿ, ನೂರು ವರ್ಷಗಳ ಅವಧಿಯಲ್ಲಿ ಬಂದಿರುವ ಈ ತೀವ್ರವಾದ ಚಂಡಮಾರುತವು ಮಣ್ಣಿನ ಮನೆಗಳನ್ನು ನಾಶಪಡಿಸಿದೆ. ಬೆಳೆಗಳು ಸಂಪೂರ್ಣ  ನಾಶವಾಗಿವೆ ಮತ್ತು ಮರಗಳು ವಿದ್ಯುತ್ ಕಂಬಗಳಮೇಲೆ ಬಿದ್ದಿವೆ.  ಕರಾವಳಿ ಜಿಲ್ಲೆಗಳಲ್ಲಿನ ವಿದ್ಯುತ್ ಮತ್ತು ದೂರಸಂಪರ್ಕ, ಮೂಲಸೌಕರ್ಯಗಳು ನಾಶವಾಗಿದೆ. ಒಡಿಶಾ ಅಧಿಕಾರಿಗಳ ಮೌಲ್ಯಮಾಪನದ ಪ್ರಕಾರ, ಸುಮಾರು 44.8 ಲಕ್ಷ ಜನರು ಚಂಡಮಾರುತದಿಂದ ಬಳಲುತ್ತಿದ್ದಾರೆ.

ಇದನ್ನೂ ಓದಿರಿ: ಮಾಜಿಪ್ರಧಾನಿ ರಾಜೀವ್ ಗಾಂಧಿ ಪುಣ್ಯ ತಿಥಿ ನಿಮಿತ್ತ ಗೌರವ ವಂದನೆ ಸಲ್ಲಿಸಿದ ನರೇಂದ್ರ ಮೋದಿ

narendra-modi-to-undertake-aerial-survey-of-cyclone-affected-areas-in-west-bengal-and-odisha-on-friday

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಧಿಕಾರಿಗಳೊಂದಿಗೆ ನಡೆಸಿದ ಪರಿಶೀಲನಾ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ, “ಇದುವರೆಗೆ ನಮಗೆ ದೊರೆತ ವರದಿಗಳ ಪ್ರಕಾರ, ಅಂಫಾನ್ ಚಂಡಮಾರುತದಿಂದ 72 ಜನರು ಸಾವನ್ನಪ್ಪಿದ್ದಾರೆ. ಎರಡು ಜಿಲ್ಲೆಗಳು ಸಂಪೂರ್ಣವಾಗಿ ನಾಶವಾಗಿದ್ದು, ನಾವು ಆ ಜಿಲ್ಲೆಗಳನ್ನು ಪುನರ್ನಿರ್ಮಿಸಬೇಕು. ರಾಜ್ಯಕ್ಕೆ ಎಲ್ಲ ನೆರವು ನೀಡುವಂತೆ ಕೇಂದ್ರ ಸರ್ಕಾರವನ್ನು ಕೋರುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿರಿ: ಈ ರಜೆಯಲ್ಲಿ ನಿಮ್ಮ ಮಕ್ಕಳನ್ನು ನೋಡಿಕೊಳ್ಳಲು ಇಲ್ಲಿದೆ ಕೆಲವು ಅದ್ಭುತ ಸಲಹೆಗಳು..!

LEAVE A REPLY

Please enter your comment!
Please enter your name here