
ಪ್ರಧಾನಿ ಮೋದಿಯವರನ್ನು ವಿರೋಧಿಗಳು ಎಷ್ಟೇ ದ್ವೇಶಿಸಿದರು ಅವರ ಅಭಿಮಾನಿಗಳಿಗೆ ಅವರು ದೇವರಂತೆಯೇ ಸರಿ..ಪ್ರಧಾನಿಯಾದಾಗಿನಿಂದಲೂ ದೇಶ-ವಿದೇಶಗಳಲ್ಲಿ ಅವರನ್ನು ಕಂಡೊಡನೆ ಎಲ್ಲೇಲ್ಲೂ ಹರ್ಷೋದ್ಗಾರ.. ಜೊತೆಗೆ ಮೋದಿ…ಮೋದಿ… ಎಂಬ ಕೂಗು..!
ಇದನ್ನೂ ಓದಿರಿ : ಒಬ್ಬ ಕುಲಭೂಷಣ್ ಗೆ ಪ್ರತಿಯಾಗಿ ಪಾಕ್ ನ ಹತ್ತು ಕೈದಿಗಳ ತಲೆ ಉರುಳುತ್ತವೆ-ಯೋಗಿ ಆದಿತ್ಯನಾಥ್..!
ಈ ಹಿಂದೆ ಯಾವ ನಾಯಕನೂ ಗಳಿಸದ ಗೌರವವನ್ನು ಪಡೆದಿರುವ ಮೋದಿ ಹೋದಲ್ಲೆಲ್ಲ ನಡೆಯುವುದು ವಿಸ್ಮಯವೇ…!
ಅಂತೆಯೇ ಟೋಕಿಯೋ ಪ್ರವಾಸದಲ್ಲಿರುವ ಮೋದಿ ಅನಿವಾಸಿ ಭಾರತೀಯರ ಜೊತೆಯಲ್ಲಿ ಸಂವಾದ ಕಾರ್ಯಕ್ರಮವನ್ನು ಇಟ್ಟುಕೊಂಡಿದ್ದರು. ಎಲ್ಲ ಕಡೆಗಳಲ್ಲಿಯೂ ಸ್ವಾಗತಿಸುವಂತೆ ಪ್ರಧಾನಿಯವರನ್ನು ವೇದಿಕೆಗೆ ಆಮಂತ್ರಿಸಲಾಯಿತು. ಎಲ್ಲೇಲ್ಲೂ ಹರ್ಷೋದ್ಗಾರ…! ಮೋದಿ…ಮೋದಿ…ಕೂಗು ..!ಆದರೆ ಅಲ್ಲಿನ ಅನಿವಾಸಿ ಕನ್ನಡಿಗರು ತಮ್ಮ ಕನ್ನಡಾಭಿಮಾನವನ್ನು ಮೆರೆದರು. ಎಲ್ಲ ಕನ್ನಡಿಗರೂ ಒಕ್ಕೋರಲಿನಿಂದ ಮೋದಿ ಅವರಿಗೆ ಜಯವಾಗಲಿ ಎಂದು ಕನ್ನಡದಲ್ಲಿ ಘೋಷಣೆ ಕೂಗುವ ಮೂಲಕ ತಮ್ಮ ಕನ್ನಡ ಅಭಿಮಾನವನ್ನು ಮೆರೆದಿದ್ದಾರೆ.