ಹುಬ್ಬಳ್ಳಿ: ಇಂದು ಹುಬ್ಬಳ್ಳಿಗೆ ಆಗಮಿಸಿದ ನರೇಂದ್ರ ಮೋದಿಯವರು ಐಐಟಿ, ಐಐಐಟಿ ಕಾಲೇಜು ಕಟ್ಟಡ ನಿರ್ಮಾಣ ಸೇರಿದಂತೆ ಇನ್ನೂ ಅನೇಕ ಸರ್ಕಾರಿ ಕಾರ್ಯಕ್ರಮಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ನಂತರ ಆಯೋಜಿಸಲಾಗಿದ್ದ “ಕರ್ನಾಟಕ ವಿಜಯ ಯಾತ್ರೆ” ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ಕನ್ನಡದಲ್ಲಿ ಭಾಷಣ ಪ್ರಾರಂಭಿಸಿದ ನರೇಂದ್ರ ಮೋದಿಯವರು, ಧೈರ್ಯ, ಸಾಹಸ, ತ್ಯಾಗ ಮತ್ತು ಸಂಸ್ಕೃತಿಗೆ ಹೆಸರುವಾಸಿಯಾದ ಇಂತಹ ಪುಣ್ಯ ಭೂಮಿಗೆ ಬಂದಿರುವುದಕ್ಕೆ ರೋಮಾಂಚನವಾಗಿದೆ ಎಂದು ಹೇಳಿದರು. ಈ ಭೂಮಿಯು ವೀರ ಸ್ವಾತಂತ್ರ್ಯ ಹೋರಾಟಗಾರರಾದ ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣನಂತವರನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದೆ. ಅಲ್ಲದೇ ಕನ್ನಡ ಮೇರು ಲೇಖಕ ದ.ರಾ. ಬೇಂದ್ರೆ, ಸಂಗೀತ ಕ್ಷೇತ್ರದ ಸಾಧಕರಾದ ಗಂಗೂಬಾಯಿ ಹಾನಗಲ್, ಭೀಮಸೇನ್ ಜೋಷಿ, ನಮ್ಮನ್ನಗಲಿದ ರಾಜಕಾರಣಿ ಅನಂತ್ ಕುಮಾರ್ ಮತ್ತು ತ್ರಿವಿಧ ದಾಸೋಹಿ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳನ್ನು ನೆನಪಿಸಿಕೊಂಡರು.

ಇಂದು 5000 ಕೋಟಿಗಳ ಯೋಜನೆಗಳಿಗೆ ಶಿಲಾನ್ಯಾಸ ಮಾಡಲಾಗಿದೆ ಎಂದು ತಿಳಿಸಿದರು. ಹಿಂದಿನ ಸರಕಾರ 10 ವರ್ಷಗಳಲ್ಲಿ 13 ಲಕ್ಷ ಮನೆಗಳಲ್ಲಿ 8 ಲಕ್ಷ ಮನೆ ನಿರ್ಮಾಣ ಮಾಡಿದ್ದರೆ, ನಮ್ಮ ಸರಕಾರ 73 ಲಕ್ಷ ಲಕ್ಷ ಮನೆ ನಿರ್ಮಾಣಕ್ಕೆ ಪಣತೊತ್ತಿದ್ದೆವು. ಅವುಗಳಲ್ಲಿ 15 ಲಕ್ಷ ಮನೆಗಳು ಈಗಾಗಲೇ ಹಸ್ತಾಂತರವಾಗಿದ್ದರೆ, 13 ಲಕ್ಷ ಮನೆಗಳು ನಿರ್ಮಾಣ ಹಂತದಲ್ಲಿವೆ ಎಂದು ತಿಳಿಸಿದರು. ನಾವು ಬಡವರು, ಮಧ್ಯಮ ವರ್ಗದವರ ಏಳಿಗೆಗಾಗಿ ಕೆಲಸ ಮಾಡಿದ್ದೇವೆ. ಹುಬ್ಬಳ್ಳಿ-ಧಾರವಾಡ ನಗರವನ್ನು ಸ್ಮಾರ್ಟ್ ಸಿಟಿಯಾಗಿ ನಿರ್ಮಾಣ ಮಾಡಲು ಶ್ರಮ ವಹಿಸಿದ್ದೇವೆ. ಅಲ್ಲದೇ ಐಐಟಿ ಕಾಲೇಜುಗಳನ್ನು ಸ್ಥಾಪನೆ ಮಾಡಿ ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿ ಮಾಡಲು ಬದ್ದರಾಗಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿರಿ: ಪ್ರಧಾನಿ ಮೋದಿಯವರ ಭಾಷಣಕ್ಕೆ ವಿರೋಧಿಗಳ ಜಂಗಾಬಲವೇ ಕುಸಿದುಹೋಯಿತು..!

ನರೇಂದ್ರ ಮೋದಿಯವರು ಮಾತನಾಡುತ್ತ ಕರ್ನಾಟಕದ ಸರ್ಕಾರವನ್ನು ಸರಕಾರದ ಪರಿಸ್ತಿತಿಯನ್ನು ಉದಾಹರಣೆಯಾಗಿಸುತ್ತ ಮಹಾಘಟಬಂಧನ್ ನ ಸರಕಾರವೂ ಇದೇ ರೀಯಾಗಿ ಇರಲಿದೆ ಎಂದು ಹೇಳಿದರು. ಇಲ್ಲಿನ ಮುಖ್ಯಮಂತ್ರಿಗಳು ಹಗಲು ರಾತ್ರಿಯೆಲ್ಲ ತನ್ನ ಕುರ್ಚಿಯನ್ನು ಉಳಿಸಿಕೊಳ್ಳಲು ಹೋರಾಡುತ್ತಿರುವಂತೆ ಪರಿಸ್ಥಿತಿ ಬರುವುದನ್ನು ತಡೆಯಲು ನಮ್ಮ ಸರಕಾರವನ್ನೇ ಆಯ್ಕೆ ಮಾಡಬೇಕೆಂದು ಕೇಳಿಕೊಂಡರು. ಅಲ್ಲದೇ ಕುಮಾರಸ್ವಾಮಿಯವರು ತಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದರು ಆದರೆ ಇಲ್ಲಿಯವರೆಗೂ ಸಾಲ ಮನ್ನಾ ಆಗಿಲ್ಲಾ ಎಂದು ಟೀಕಿಸಿದರು. ಇವರು ಸಾಲಮನ್ನಾದಂತಹ ಘೋಷಣೆಗಳನ್ನು ಜನರಿಗೆ ಹೇಳುತ್ತಾ ಹತ್ತು ವರ್ಷಗಳ ಯೋಜನೆಗಳನ್ನು ನಿಮ್ಮ ಮುಂದೆ ತರುತ್ತಾರೆ. ಆದರೆ ನಾವು ಹಾಗಲ್ಲ ಪ್ರತಿ ವರ್ಷ ರೈತನಿಗೆ 6000 ದಂತೆ ಖಾತೆಗೆ ನೇರವಾಗಿ ಹಾಕುವ ಯೋಜನೆಯನ್ನು ಜಾರಿಗೊಳಿಸಿದ್ದೇವೆ. ಇಂತಹ ಅಭಿವೃದ್ಧಿ ಪರವಾದ ಸರಕಾರಕ್ಕೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದ ಅರ್ಪಿಸಿ ಭಾಷಣ ಮುಗಿಸಿದರು.

ಪ್ರಧಾನಿಯವರ ಭಾಷಣದ ಝಲಕ್ ಒಮ್ಮೆ ನೋಡಿ….

ಇದನ್ನೂ ಓದಿರಿ : ಪ್ರಧಾನಿ ಮೋದಿಯವರ ಭಾಷಣಕ್ಕೆ ವಿರೋಧಿಗಳ ಜಂಗಾಬಲವೇ ಕುಸಿದುಹೋಯಿತು..!

Image Copyright : google.com

LEAVE A REPLY

Please enter your comment!
Please enter your name here