ಹಾಲಿನ ದರ ಹೆಚ್ಚಳ । nandini-milk-price-hike-kmf-to-increase-nandini-milk-price-by-3-rupees-says-balachandra-jarkiholi

ಬೆಂಗಳೂರು: ನಂದಿನಿ ಹಾಲು ಮತ್ತು ಮೊಸರಿನ ದರ ಹೆಚ್ಚಳ ಕುರಿತಂತೆ ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟ (ಕೆಎಂಎಫ್) ಹೊರಡಿಸಿರುವ ಆದೇಶಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಡೆ ನೀಡಿದ್ದಾರೆ. ಈ ಕುರಿತಂತೆ ಹಾಲು ಒಕ್ಕೂಟದ ಅಧ್ಯಕ್ಷರ ಜೊತೆಯಲ್ಲಿ ನವೆಂಬರ್ 20 ರ ನಂತರ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಹಲವು ತಿಂಗಳಿನಿಂದ ಹಾಲಿನ ದರ ಹೆಚ್ಚಿಸುವಂತೆ ಜಿಲ್ಲಾ ಹಾಲು ಒಕ್ಕೂಟಗಳು ಕೆಎಂಎಫ್ ಗೆ ಬೇಡಿಕೆ ಸಲ್ಲಿಸಿದ್ದವು. ಅಲ್ಲದೇ ಚರ್ಮ ಗಂಟು ರೋಗ, ಮೇವಿನ ದರ ಹೆಚ್ಚಳ, ಅಕಾಲಿಕ ಮಳೆ ಸೇರಿದಂತೆ ಹಲವು ಕಾರಣಗಳಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ನೆರವು ನೀಡುವ ಸಲುವಾಗಿ ಹಾಲಿನ ದರವನ್ನು 3 ರೂ. ಹೆಚ್ಚಿಸುವ ತೀರ್ಮಾನಕ್ಕೆ ಬರಲಾಗಿತ್ತು. 2020 ರಲ್ಲಿ ಪ್ರತಿ ಲೀಟರ್ ಹಾಲಿನ ದರ 2 ರೂ. ಹೆಚ್ಚಿಸಿದ ನಂತರ ಇದುವರೆಗೂ ಹೆಚ್ಚಿಸಿರಲಿಲ್ಲ. ಇದಲ್ಲದೇ ಅಸಮರ್ಪಕ ದರ ಸೇರಿದಂತೆ ಅನೇಕ ಕಾರಣಗಳಿಂದ 94.20 ಲಕ್ಷ ಲೀಟರ್ ಇದ್ದ ಹಾಲಿನ ಪೂರೈಕೆ ಇದೀಗ 78.80 ಲಕ್ಷ ಲೀಟರ್ ಗೆ ಇಳಿಕೆ ಕಂಡಿತ್ತು. ಇದರೊಂದಿಗೆ ಸಾಗಾಣಿಕೆ, ಪ್ಯಾಕಿಂಗ್, ವಿದ್ಯುತ್ ದರ ಹೆಚ್ಚಳಗಳಿಂದಾಗಿ ಕೆಎಂಎಫ್ ಹಾಲಿನ ದರ ಹೆಚ್ಚಳ ಮಾಡುವುದು ಅನಿವಾರ್ಯವಾಗಿತ್ತು.

ಹಾಲಿನ ದರ ಏರಿಕೆ ಕುರಿತಂತೆ ಕೆಎಂಎಫ್ ಕಳೆದ ಸೆಪ್ಟೆಂಬರ್ ನಲ್ಲಿಯೇ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಇದೀಗ ಸರಕಾರದ ಅನುಮತಿ ಸಿಕ್ಕಿರುವುದರಿಂದ ಪ್ರತಿ ಲೀಟರ್ ಹಾಲಿಗೆ 3 ರೂ ಹೆಚ್ಚಿಸುವ ತೀರ್ಮಾನಕ್ಕೆ ಬರಲಾಗಿತ್ತು. ದರ ಹೆಚ್ಚಳ ಕುರಿತಂತೆ ವ್ಯಾಪಕ ವಿರೋಧ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ದರ ಹೆಚ್ಚಳ ಆದೇಶಕ್ಕೆ ತಡೆ ನೀಡಿದ್ದಾರೆ.

ತಡೆ ನೀಡಲಾದ ಕೆಎಂಎಫ್ ನ ಆದೇಶದಂತೆ ಒಂದು ಲೀಟರ್ ಟೋನ್ಡ್ ಹಾಲಿನ ದರ ರೂ. 37 ರಿಂದ 40 ರೂಪಾಯಿಗೆ ಹೆಚ್ಚಿಸಲು ನಿರ್ಧರಿಸಿತ್ತು. ಇದೇ ರೀತಿ ಒಂದು ಕೆಜಿ ಮೊಸರಿನ ದರ ರೂ.45 ರಿಂದ 48 ರೂಪಾಯಿಗೆ ಏರಿಸಲು ನಿರ್ಧರಿಸಿತ್ತು. ಇನ್ನು ನಂದಿನಿ ಹಾಲಿನ ದರ ಹೊರತುಪಡಿಸಿ ದೊಡ್ಲ – 40, ಹೆರಿಟೇಜ್ – 48, ಆರೋಗ್ಯ- 50 ಗೋವರ್ಧನ- 46 ರೂಗಳನ್ನು ಹೊಂದಿದ್ದರೆ ನಂದಿನಿ ಹಾಲಿನ ದರ 37 ರೂಪಾಯಿ ಆಗಿದೆ.

ವೈರಲ್ ಸುದ್ದಿಗಳು 

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here