ಬರೋಬ್ಬರಿ 12 ವರ್ಷಗಳ ಕಾಲ ಇಸ್ರೇಲ್ ಪ್ರಧಾನಿಯಾಗಿ ಆಡಳಿತ ನೀಡಿದ್ದ ಬೆಂಜಮಿನ್ ನೆತನ್ಯಾಹು ಕೊನೆಗೂ ಅಧಿಕಾರದಿಂದ ಇಳಿದಿದ್ದಾರೆ. ಇದೀಗ ಹೊಸದಾಗಿ ಪ್ರಧಾನ ಮಂತ್ರಿಯಾಗಿ ರಾಷ್ಟ್ರೀಯವಾದಿ ನಫ್ಟಾಲಿ ಬೆನೆಟ್ ಸಮ್ಮಿಶ್ರ ಸರ್ಕಾರದ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.
ನಫ್ಟಾಲಿ ಬೆನೆಟ್ ಈ ಹಿಂದೆ ಇಸ್ರೇಲ್ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಅವರು ಬಲಪಂಥೀಯ ಯಾಮಿನಾ ಪಕ್ಷದ ಮುಖಂಡರಾಗಿದ್ದಾರೆ. ವಿಭಿನ್ನ ಸಿದ್ದಾಂತಗಳನ್ನು ಹೊಂದಿರುವ ವಿವಿಧ ಪಕ್ಷಗಳ ಬೆಂಬಲದೊಂದಿಗೆ ಬೆನೆಟ್ ಪ್ರಧಾನಿಯಾಗಿ ಪಟ್ಟಕ್ಕೇರಿದ್ದಾರೆ. ಒಪ್ಪಂದದ ಪ್ರಕಾರ ಇನ್ನು 2 ವರ್ಷ ನಫ್ಟಾಲಿ ಬೆನೆಟ್ ಇಸ್ರೇಲ್ನ ಪ್ರಧಾನಿಯಾಗಿರಲಿದ್ದಾರೆ. ಬಳಿಕ ಯೆಶ್ ಅತಿಡ್ ಪಕ್ಷಯ ಯೇರ್ ಲ್ಯಾಪಿಡ್ ಇಸ್ರೇಲ್ನ ಪ್ರಧಾನಿಯಾಗಿ ಅಧಿಕಾರ ನಡೆಸಲಿದ್ದಾರೆ.
ಇದನ್ನೂ ಓದಿರಿ: Flipkart Big Savings Day Sale: ಸ್ಮಾರ್ಟ್ ಫೋನ್ ಖರೀದಿಸಲು ಬಯಸಿದ್ದರೆ ಇದು ರೈಟ್ ಟೈಮ್
ಅತ್ಯಲ್ಪ ಬಹುಮತ 60-59 ರಿಂದ ಸರ್ಕಾರ ರಚನೆ ಮಾಡಲಾಗಿದ್ದು, ಅಧಿಕಾರ ಹಂಚಿಕೆಯ ಸೂತ್ರದ ಭಾಗವಾಗಿ 2023 ರ ಸೆಪ್ಟೆಂಬರ್ ತಿಂಗಳವರೆಗೂ ನಫ್ತಾಲಿ ಬೆನ್ನೆಟ್ ಅವರು ಪ್ರಧಾನಿಯಾಗಿ ಕಾರ್ಯನಿರ್ವಹಣೆ ಮಾಡಲಿದ್ದಾರೆ.