ವಾಷಿಂಗ್ಟನ್: ಅಮೇರಿಕಾದಲ್ಲಿ ಕೊರೊನಾ ತನ್ನ ಮರಣ ಮೃದಂಗವನ್ನು ಮುಂದುವರೆಸಿದ್ದು, ಈ ಸಮಯದಲ್ಲಿ ಕೊರೊನಾ ವಾರಿಯರ್ ಆಗಿ ಹಗಲಿರುಳು ಶ್ರಮಿಸಿದ ಮೈಸೂರು ಮೂಲದ ವೈದ್ಯೆಗೆ ಅಲ್ಲಿನ ಜನತೆ ಮತ್ತು ಸರಕಾರ ವಿಶೇಷ “ಡ್ರೈವ್ ಆಪ್ಫ್ ಹಾನರ್” ಗೌರವವನ್ನು ಸಲ್ಲಿಸಿವೆ.
ಭಾರತೀಯರಾದ ಡಾ|| ಉಮಾ ಮಧುಸೂದನ್ ಅವರು ಸೌತ್ ವಿಂಡ್ಸರ್ ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆಯನ್ನು ನೀಡುತ್ತಿದ್ದರು. ಅವರು ತಮ್ಮ ಕರ್ತವ್ಯವನ್ನು ಮುಗಿಸಿ ಮನೆಯ ಬಳಿಯಲ್ಲಿ ಇರುವಾಗ ಸಾರ್ವಜನಿಕರು ಮತ್ತು ಅಲ್ಲಿನ ಸ್ಥಳೀಯ ಆಡಳಿತ ಮಂಡಳಿ ಸೇರಿ ವಾಹನಗಳಲ್ಲಿ ಬಂದು ಗೌರವವನ್ನು ಸಲ್ಲಿಸಿದ್ದಾರೆ.
ಇದನ್ನೂಓದಿರಿ: ಮದುವೆಗಿಂತ ಕರ್ತವ್ಯವೇ ಮುಖ್ಯ ಎಂದ ಡಿ.ವೈ.ಎಸ್.ಪಿ. ಪ್ರಥ್ವಿ..!
ಈ ದೃಶ್ಯವನ್ನು ನೋಡಿದಾಗ ಅಲ್ಲಿನ ಜನತೆ ಚಿಕಿತ್ಸೆಯನ್ನು ನೀಡುವ ವೈದ್ಯರನ್ನು ಎಷ್ಟು ಗೌರವದಿಂದ ಕಾಣುತ್ತಾರೆ ಎನ್ನುವುದು ಗೊತ್ತಾಗುತ್ತದೆ. ಇದೇ ಸಮಯದಲ್ಲಿ ನಮ್ಮ ದೇಶದಲ್ಲಿ ಆರೋಗ್ಯ ಕಾರ್ಯಕರ್ತರ ಮತ್ತು ಪೋಲಿಸರ ಮೇಲಿನ ದೌರ್ಜನ್ಯವನ್ನು ನೆನೆದು ಬೇಸರ ಮೂಡುವುದಂತು ಸುಳ್ಳಲ್ಲ.
As I head to Mysuru, happy to share a video of Uma Madhusudhan, Mysuru origin Doctor in US being honoured in front of her house by grateful patients. It’s a beautiful sight of cars, police vehicles, fire trucks lining up in gratitude, waving & honking to say Thank you Dr Uma! pic.twitter.com/42ayy6hEUd
— Dr Sudhakar K (@mla_sudhakar) April 21, 2020