ಭಾರತದ ಮುಸ್ಲಿಮರು ಭಯಪಡುವ ಅಗತ್ಯ ಇಲ್ಲ; ಆದರೆ ಒಂದು ಸಲಹೆ-ಮೋಹನ್‌ ಭಾಗವತ್‌

muslims-of-india-need-not-fear-but-has-a-suggestion-said-rss-chief-mohan-bhagwat

ಭಾರತದ ಮುಸ್ಲಿಮರು ಭಯಪಡುವ ಅಗತ್ಯವಿಲ್ಲ, ಆದರೆ ಒಂದು ಸಲಹೆಯನ್ನು ನೀಡಲು ಬಯಸುತ್ತೇನೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘಚಾಲಕ ಮೋಹನ್ ಭಗವತ್ (Mohan Bhagwat) ಅವರು ಹೇಳಿದ್ದಾರೆ.

ಭಾರತದ ಮುಸ್ಲಿಮರು ಭಯಪಡುವ ಅಗತ್ಯವೇ ಇಲ್ಲ ಆದರೆ ಅವರು ಪರಮಾಧಿಕಾರದ ಹೇಳಿಕೆಗಳನ್ನು ಕೈಬಿಡಬೇಕು. ಹಿಂದೂ ಎಂಬುದು ನಮ್ಮ ಅಸ್ಮಿತೆಯಾಗಿದೆ. ಪ್ರತಿಯೊಬ್ಬರನ್ನೂ ನಮ್ಮವರು ಎಂದು ಕರೆದೊಯ್ಯುವ ಸಂಸ್ಕೃತಿ ನಮ್ಮದು ಎಂದು ಮೋಹನ್ ಭಗವತ್ ಹೇಳಿದ್ದಾರೆ.

ಇದನ್ನೂ ಓದಿರಿ: ಭಾರತೀಯ ಸೇನೆ ವಿರುದ್ಧ ಟ್ವೀಟ್​: ಶೆಹ್ಲಾ ರಶೀದ್ ವಿರುದ್ಧ ಕಾನೂನು ಕ್ರಮಕ್ಕೆ ಅನುಮತಿ

ದೇಶದಲ್ಲಿ ಇಸ್ಲಾಂ ಧರ್ಮಕ್ಕೆ ಯಾವುದೇ ಬೆದರಿಕೆಯಿಲ್ಲ ಆದರೆ ಮುಸ್ಲಿಮರು ನಾವು ದೊಡ್ಡವರು ಎಂಬ ಭಾವನೆಯನ್ನು ಕೈಬಿಡಬೇಕಾಗುತ್ತದೆ. ಹಿಂದುಸ್ತಾನವು ಹಿಂದುಸ್ತಾನವಾಗಿಯೇ ಇರಬೇಕು. ಭಾರತದಲ್ಲಿ ನೆಲೆಸಿರುವ ಮುಸ್ಲಿಮರಿಗೆ ಯಾವುದೇ ತೊಂದರೆಯಿಲ್ಲ, ಅವರು ಇದ್ದಾರೆ ಮತ್ತು ಇರಲು ಬಯಸುತ್ತಾರೆ. ಆದರೆ ಒಂದಾನೊಂದು ಕಾಲದಲ್ಲಿ ರಾಜರಾಗಿದ್ದೆವು, ನಾವು ದೊಡ್ಡವರು, ಮತ್ತೆ ರಾಜರಾಗುತ್ತೇವೆ ಎಂಬ ಭಾವನೆಯನ್ನು ತೊರೆಯಬೇಕು. ಅದು ಹಿಂದುವಾಗಿದ್ದರೂ, ಕಮ್ಯುನಿಸ್ಟ್ ಆಗಿದ್ದರೂ ಮತ್ತು ಪ್ರತಿಯೊಂದು ಸಮುದಾಯದವರೂ ಇದನ್ನು ತೊರೆಯಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿರಿ: ಭಾರತದ ಮತ್ತೊಂದು ಸಾಧನೆ: ಅಲ್ಪ ಶ್ರೇಣಿಯ ಬ್ಯಾಲೆಸ್ಟಿಕ್ ಕ್ಷಿಪಣಿ ಪರೀಕ್ಷೆ ಯಶಸ್ವಿ

LEAVE A REPLY

Please enter your comment!
Please enter your name here