ಖ್ಯಾತ ಬಹುಭಾಷಾ ನಟಿ ಕಾಜಲ್ ಅಗರ್ವಾಲ್ ತಮ್ಮ ಅಭಿಮಾನಿಗಳೊಂದಿಗೆ ತಮ್ಮ ವಿವಾಹದ ವಿಚಾರವನ್ನು ಹಂಚಿಕೊಂಡಿದ್ದು, ಗೌತಮ್ ಕಿಚ್ಲು ಎಂಬುವವರ ಜೊತೆಯಲ್ಲಿ ಅಕ್ಟೋಬರ್ 30 ರಂದು ಮದುವೆಯಾಗಲಿರುವುದಾಗಿ ಹೇಳಿಕೊಂಡಿದ್ದಾರೆ.
ತೆಲಗು, ತಮಿಳು ಚಿತ್ರರಂಗ ಸೇರಿದಂತೆ ಹಲವು ಭಾಷೆಯ ಚಿತ್ರಗಳಲ್ಲಿ ನಟಿಸಿರುವ ಬಹುಭಾಷಾ ತಾರೆ ಅಭಿಮಾನಿಗಳೊಂದಿಗೆ ತಾವು ಮದುವೆಯಾಗುತ್ತಿರುವ ವಿಚಾರವನ್ನು ಹಂಚಿಕೊಂಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು ಗೌತಮ್ ಕಿಚ್ಲು ಎಂಬುವವರ ಜೊತೆಯಲ್ಲಿ ಅಕ್ಟೋಬರ್ 30 ರಂದು ಮದುವೆಯಾಗಲಿದ್ದೇನೆ ಎಂದು ಹೇಳಿದ್ದಾರೆ.
ಸಾಂಕ್ರಾಮಿಕ ರೋಗದ ಈ ಸಮಯದಲ್ಲಿ ನಮ್ಮ ವಿವಾಹ ಸಮಾರಂಭವು ಕೇವಲ ನಮ್ಮ ಪರಿವಾರದ ಜೊತೆಯಲ್ಲಿ ನಡೆಯಲಿದೆ. ನಮ್ಮ ಈ ಹೊಸ ಜೀವನ ಪ್ರಾರಂಭಕ್ಕೆ ತಮ್ಮೆಲ್ಲರ ಆಶೀರ್ವಾದ ಇರಲೆಂದು ಕೇಳಿಕೊಳ್ಳುತ್ತೇನೆ. ಇನ್ನು ಮುಂದೆಯೂ ಸಹ ನನ್ನ ಈ ಮನರಂಜನಾ ಕಲೆಯೊಂದಿಗೆ ನಿಮ್ಮ ಮುಂದೆ ಬರುತ್ತೇನೆ, ನಿಮ್ಮ ಸಹಕಾರ ಹೀಗೆಯೇ ಮುಂದೆ ಸಾಗಲಿ ಎಂದು ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.
— Kajal Aggarwal (@MsKajalAggarwal) October 6, 2020