ಅವಳಿ ಮಕ್ಕಳಿಗೆ ಅಮ್ಮನಾದ ಮುಖೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ

mukesh-ambani-daughter-blessed-with-twins

ಮುಂಬೈ: ಬಿಲಿಯನೇರ್ ಮುಖೇಶ್ ಅಂಬಾನಿ (Mukesh Ambani) ಅವರ ಪುತ್ರಿ ಇಶಾ ಅಂಬಾನಿ ಮತ್ತು ಆನಂದ್ ಪಿರಾಮಲ್ ದಂಪತಿಗೆ ಅವಳಿ ಮಕ್ಕಳು ಜನಿಸಿದ್ದಾರೆ. ಈ ಕುರಿತು ಪ್ರಕಟಣೆ ಹೊರಡಿಸಿರುವ ಅಂಬಾನಿ ಕುಟುಂಬ “ಆದಿಯಾ, ಕೃಷ್ಣ, ಇಶಾ ಮತ್ತು ಆನಂದ್ ಅವರ ಜೀವನದ ಈ ಪ್ರಮುಖ ಹಂತದಲ್ಲಿ ನಾವು ನಿಮ್ಮ ಆಶೀರ್ವಾದ ಮತ್ತು ಶುಭ ಹಾರೈಕೆಗಳನ್ನು ಬಯಸುತ್ತೇವೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಇಶಾ ಮತ್ತು ಆನಂದ್ ದಂಪತಿಗೆ ಒಂದು ಗಂಡು ಮತ್ತು ಹೆಣ್ಣು ಮಗು ಜನಿಸಿದ್ದು ಮಗುವಿಗೆ ಆದಿಯಾ ಮತ್ತು ಕೃಷ್ಣ ಎಂದು ಹೆಸರಿಡಲಾಗಿದೆ ಎಂದು ಕುಟುಂಬ ಭಾನುವಾರ ತಿಳಿಸಿದೆ. “ನಮ್ಮ ಮಕ್ಕಳಾದ ಇಶಾ ಮತ್ತು ಆನಂದ್ ಅವರು 19 ನವೆಂಬರ್ 2022 ರಂದು ಅವಳಿ ಮಕ್ಕಳೊಂದಿಗೆ ಭಗವಂತ ಆಶೀರ್ವದಿಸಿದ್ದಾರೆ ಎಂದು ಹಂಚಿಕೊಳ್ಳಲು ನಾವು ಸಂತೋಷಪಡುತ್ತೇವೆ” ಎಂದು ಕುಟುಂಬದ ಮಾಧ್ಯಮ ಹೇಳಿಕೆ ತಿಳಿಸಿದೆ.

ಇದನ್ನು ಓದಿರಿ: IND vs NZ: 2ನೇ ಟಿ-20 ಪಂದ್ಯದಲ್ಲಿ ಭಾರತಕ್ಕೆ 65 ರನ್ನುಗಳ ಭರ್ಜರಿ ಜಯ

LEAVE A REPLY

Please enter your comment!
Please enter your name here