ms-dhoni-ms-dhoni-life-and-cricket-history

ಭಾರತೀಯ ಕ್ರೀಕೆಟ್ ರಂಗದ ಶ್ರೇಷ್ಠ ನಾಯಕನೆನಿಸಿದ ಎಂ ಎಸ್ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ವಿದಾಯ ಹೇಳಿರುವುದು ಹಲವಾರು ಅಭಿಮಾನಿಗಳಿಗೆ ಬೇಸರ ಉಂಟುಮಾಡಿದೆ. ಅವರ ಚಾಣಾಕ್ಷ ಮತ್ತು ವೇಗದ ವಿಕೆಟ್ ಕೀಪಿಂಗ್ ಹಾಗೂ ಸುದೀರ್ಘ ಕಾಲದ ಕೂಲ್ ಕ್ಯಾಪ್ಟನ್ ಶಿಪ್ ಜನತೆಯ ಮನೆ ಮನದಲ್ಲಿ ಹೆಸರುವಾಸಿಯಾಗಿರುವುದು ಸುಳ್ಳಲ್ಲ.

ಎಂ ಎಸ್ ಧೋನಿ ಅವರು 7 ಜುಲೈ, 1981 ರಲ್ಲಿ ರಾಂಚಿಯಲ್ಲಿ, ಪಾನ್ ಸಿಂಗ್ ಮತ್ತು ದೇವಕಿದೇವಿಯವರ ಮಗನಾಗಿ ಜನಿಸಿದರು. ಸುಪರ್ ಸ್ಟಾರ್ ರಜನಿ ಕಾಂತ್, ಎಡಮ್ ಗಿಲಕ್ರಿಸ್ಟ್, ಸಚಿನ್ ತೆಂಡೂಲ್ಕರ್, ಬಾಲಿವುಡ್ ನಟ ಅಮಿತಾಬ್ ಬಚ್ಚನ್, ಗಾಯಕಿ ಲತಾ ಮಂಗೇಶ್ಕರ್ ಅವರ ಸಾಧನೆಗಳು ಧೋನಿಯವರಿಗೆ ಬಾಲ್ಯದಿಂದಲೇ ಸ್ಪೂರ್ತಿ ತುಂಬಿದ್ದವು. ರಾಚಿಯ ಸ್ಯಾಂಬ್ಲಿಯಲ್ಲಿರುವ ಟಿಎಬಿ ಜವಾಹರ ವಿದ್ಯಾಮಂದಿರದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದರು. ಚಿಕ್ಕಂದಿನಿಂದಲೂ ಪುಟ್ ಬಾಲ್ ಮೇಲೆ ಹೆಚ್ಚಿನ ಆಸಕ್ತಿ ಹೊಂದಿದ್ದ ಅವರು ಗೋಲ್ ಕೀಪರ್ ಆಗಬೇಕೆಂಬ ಕನಸು ಇಟ್ಟುಕೊಂಡಿದ್ದರು.

2004 ಡಿಸೆಂಬರ್ 24 ರಂದು ಬಾಂಗ್ಲಾದೇಶ ವಿರುದ್ಧ ಎಂ ಸ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು. ಟೀಮ್ ಇಂಡಿಯಾ ಸೇರಿಕೊಂಡ ಧೋನಿ ಅವರ ಆಕರ್ಷಕ ಬ್ಯಾಟಿಂಗ್ ನಿಂದಾಗಿ ಯುವಕರ ಪೇವರೆಟ್ ಆಟಗಾರನಾಗಿ ಗುರುತಿಸಿಕೊಂಡರು. ಯಶಸ್ವೀ ಆಟಗಾರನಾಗಿ ಗುರುತಿಸಿಕೊಳ್ಳುತ್ತಿದ್ದಂತೆ ನಾಯಕನ ಪಟ್ಟ ಅವರಿಗಾಗಿ ಒಲಿದು ಬಂದಿತ್ತು. ರಾಹುಲ್ ದ್ರಾವಿಡ್ ಅವರಿಂದ ತೆರವಾದ ನಾಯಕ ಸ್ಥಾನಕ್ಕೆ ಜೀವ ತುಂಬುವ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಹೊರಹೊಮ್ಮಿದರು. ಇವರ ಯಶಸ್ವಿ ನಾಯಕತ್ವದ ತಂಡದಲ್ಲಿ ಕ್ರಿಕೆಟ್ ದಿಗ್ಗಜ ಮತ್ತು ಹಿರಿಯರಾದ ರಾಹುಲ್ ದ್ರಾವಿಡ್, ಗಂಗೂಲಿ ಮತ್ತು ಸಚಿನ್ ತೆಂಡೂಲ್ಕರ್ ಅವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಯಶಸ್ವೀಯಾಗಿ ಮುನ್ನಡೆದ ಹೆಗ್ಗಳಿಕೆಯನ್ನು ಹೊಂದಿದ್ದಾರೆ.

2010ರಲ್ಲಿ ಸಾಕ್ಷಿ ಜೊತೆ ವಿವಾಹ ಜೀವನಕ್ಕೆ ಕಾಲಿಟ್ಟ ಇವರು ಮುದ್ದಾದ ಮಗಳನ್ನು ಹೊಂದಿದ್ದಾರೆ. ಇವರ ಯಶಸ್ವಿ ಜೀವನ ಸುಶಾಂತ್ ಸಿಂಗ್ ನಟಿಸಿರುವ ‘ಧೋನಿ ದಿ ಅಂಟೋಲ್ಡ್ ಸ್ಟೋರಿ’ ಎಂಬ ಚಲನಚಿತ್ರ ಸಹ ನಿರ್ಮಾಣವಾಗಿದೆ. ಮಹೇಂದ್ರ ಸಿಂಗ್‌ ಧೋನಿ ಅವರ ಕ್ರಿಕೆಟ್‌ನಲ್ಲಿನ ಸಾಧನೆ ಪರಿಗಣಿಸಿ ಭಾರತ ಸರ್ಕಾರ ರಾಜೀವ್‌ ಗಾಂಧಿ ಖೇಲ್‌ ರತ್ನ (2007), ಪದ್ಮ ಶ್ರೀ (2009) ಹಾಗೂ ಪದ್ಮ ಭೂಷಣ್‌ (2018) ನೀಡಿ ಗೌರವಿಸಿದೆ.

ಇದನ್ನೂ ಓದಿರಿ: 39ನೇ ವಸಂತಕ್ಕೆ ಕಾಲಿಟ್ಟ ಕ್ರಿಕೆಟ್ ದಿಗ್ಗಜ ಮಹೇಂದ್ರ ಸಿಂಗ್ ಧೋನಿ

M S Dhoni Childhood

ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಬದುಕಿನ ಸಾಧನೆ

 • 90 ಟೆಸ್ಟ್ ಗಳನ್ನು ಆಡಿ 38.09 ಸರಾಸರಿಯಲ್ಲಿ 4,876 ರನ್ನುಗಳನ್ನುಗಳಿಸಿದ್ದಾರೆ. ಇದರಲ್ಲಿ ಅವರ 6 ಶತಕ ಹಾಗೂ 33 ಅರ್ಧ ಶತಕ ಸಹ ಒಳಗೊಂಡಿದೆ.
 • 350 ಏಕದಿನ ಪಂದ್ಯಗನ್ನು ಆಡಿರುವ ಅವರು 10,773 ರನ್ನುಗಳನ್ನು ಕಲೆಹಾಕಿ, ಇದರಲ್ಲಿ 10 ಶತಕ 73 ಅರ್ಧ ಶತಕಗಳನ್ನು ಸೇರಿಸಿದ್ದಾರೆ.
 • ಇನ್ನು 98 ಟಿ-20 ಪಂದ್ಯಗಳಲ್ಲಿ 1,617 ರನ್ನುಗಳನ್ನು ಗಳಿಸಿರುವ ಇವರು, ಇದರಲ್ಲಿ ಎರಡು ಅರ್ಧ ಶತಕ ಸಿಡಿಸಿದ್ದಾರೆ.
 • 2007 ರಲ್ಲಿ ಟಿ-20 ವಿಶ್ವಕಪ್  ಸರಣಿಯನ್ನು ಭಾರತಕ್ಕೆ ಗೆಲ್ಲಿಸಿಕೊಟ್ಟಿದ್ದಾರೆ.
 • 2011 ರಲ್ಲಿ ವಿಶ್ವಕಪ್ ಸಚಿನ್ ತೆಂಡೂಲ್ಕರ್ ಅವರ ಕೊನೆಯ ಪಂದ್ಯ ಗೆಲ್ಲುವ ಮೂಲಕ ಅವರಿಗೆ ಅದ್ದೂರಿ ವಿದಾಯ ನೀಡಬೇಕಿತ್ತು ಹಾಗೂ ತವರಿನ ನೆಲದಲ್ಲಿ ಪಂದ್ಯ ನಡೆಯುತ್ತಿತ್ತು. ಅದರಂತೆಯೇ ಶ್ರೀಲಂಕಾ ತಂಡದ ವಿರುದ್ಧ 28 ವರ್ಷದ ಬಳಿಕ ಧೋನಿ ನಾಯಕತ್ವದಲ್ಲಿ ಭಾರತ ತಂಡ ವಿಶ್ವಕಪ್ ಗೆದ್ದಿತು.
 • 2013ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನೂ ತಮ್ಮ ನಾಯಕತ್ವದ ಖಾತೆಗೆ ಸೇರಿಸಿಕೊಂಡರು. ಆ ಮೂಲಕ ಟಿ-20 ವಿಶ್ವಕಪ್‌, ಏಕದಿನ ವಿಶ್ವಕಪ್‌ ಹಾಗೂ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತದ ಏಕೈಕ ನಾಯಕ ಎಂಬ ಹೆಗ್ಗಳಿಕೆಗೆ ಧೋನಿ ಭಾಜನರಾದರು.
 • 2016 ರ ಟಿ-20 ವಿಶ್ವಕಪ್ ಕ್ರಿಕೆಟ್ ಅಭಿಮಾನಿಗಳಿಗೆ ಮರೆಯದ ಪಂದ್ಯಗಳಲ್ಲಿ ಒಂದಾಗಿದೆ. ಬಾಂಗ್ಲಾದೇಶ ತಂಡಕ್ಕೆ ಒಂದು ಎಸೆತಕ್ಕೆ ಎರಡು ರನ್‌ ಅಗತ್ಯವಿತ್ತು. ಈ ವೇಳೆ ನಾನ್‌ ಸ್ಟ್ರೈಕರ್‌ ಮುಷ್ತಾಫಿಜರ್‌ ಅವರನ್ನು ರನೌಟ್‌ ಮಾಡಿದ ರೀತಿ ಅದ್ಭುತವಾಗಿತ್ತು. ಅಂದು ಭಾರತ ಕೇವಲ ಒಂದು ರನ್‌ನಿಂದ ಜಯ ಸಾಧಿಸಿತ್ತು.

ಇದನ್ನೂ ಓದಿರಿ: ಸುರೇಶ್ ರೈನಾ ಜೀವನ ಮತ್ತು ಕ್ರಿಕೆಟ್ ಕೆರಿಯರ್‌ನ ಕೆಲವು ಸಾಧನೆಗಳು

ms-dhoni-ms-dhoni-life-and-cricket-history

ಬ್ರಾಂಡ್ ಅಂಬಾಸಿಡರ್ ಆದ ಕಂಪನಿಗಳು

 • 2005 ರ ಎಪ್ರಿಲ್‌ನಲ್ಲಿ ಧೋನಿ ಕೋಲ್ಕತ್ತಾ ಮೂಲದ ಹೆಸರಾಂತ ಸಂಸ್ಥೆ ಗೇಮ್‌ಪ್ಲ್ಯಾನ್‌ ಸ್ಪೋರ್ಟ್ಸ್‌ನೊಂದಿಗೆ ಒಪ್ಪಂದ ಮಾಡಿಕೊಂಡರು. ಪ್ರಸ್ತುತ ಧೋನಿ 20 ಜಾಹಿರಾತು ಸಂಬಂಧಿಸಿದ ಕರಾರುಗಳಿಗೆ ಒಪ್ಪಿಕೊಂಡಿದ್ದಾರೆ.
 • 2005 ಪೆಪ್ಸಿಕೊ, ರೀಬೊಕ್, ಎಕ್ಸೈಡ್‌, TVS ಮೋಟರ್ಸ್‌ ನಂತಹ ದೊಡ್ಡ ದೊಡ್ಡ ಕಂಪನಿಗಳಿಗೆ ರಾಯಬಾರಿಯಾದರು.
 • 2006 ಮೈಸೂರ್ ಸ್ಯಾಂಡಲ್ ಸೋಪ್‌, ವೀಡಿಯೊಕಾನ್‌, ರಿಲಾಯನ್ಸ್ ಕಮ್ಯುನಿಕೇಷನ್, ರಿಲಾಯನ್ಸ್ ಎನರ್ಜಿ, ಒರಿಯಂಟ್ ಫ್ಯಾನ್‌, ಭಾರತ್ ಪೆಟ್ರೋಲಿಯಂ, ಟೈಟಾನ್ ಸೋನಾಟಾ, ಬ್ರೈಲ್‌ಕ್ರೀಮ್‌ ಮುಂತಾದವುಗಳಿಗೆ ರಾಯಬಾರಿಗೆ ಸಹಿ ಮಾಡಿದರು.
 • 2007 ಸಿಯಾರಾಮ್ ಕಂಪನಿಯ ಜಾಹಿರಾತಿನಲ್ಲಿ ಕಾಣಿಸಿಕೊಂಡರು.
 • 2008 ಬಿಗ್ ಬಜಾರ್ ಫ್ಯಾಶನ್‌, ಮಹಾ ಚೋಕೊ, ಬೂಸ್ಟ್‌ (ಆರೋಗ್ಯ ಪಾನೀಯ), ದೈನಿಕ್ ಭಾಸ್ಕರ್ ಸೇರಿದಂತೆ ಹಲವು ಕಂಪನಿಗಳು ಸೇರಿಕೊಂಡವು.
 • 2009 ಡಾಬರ್ ಹನಿ, ಕೋಲ್ಕತ್ತಾ ಫ್ಯಾಶನ್ ವೀಕ್‌, ಏರ್‌ಸೆಲ್ ಕಮ್ಯುನಿಕೇಷನ್ಸ್ ಮೊದಲಾದ ಕಂಪನಿಯ ಜಾಹಿರಾತಿನಲ್ಲಿ ಕೆಲಸ ಮಾಡಿದ್ದಾರೆ.

ಇದನ್ನೂ ಓದಿರಿ: ಎಂ ಎಸ್ ಧೋನಿ ಬೆನ್ನಲ್ಲೇ ಅಂತಾರಾಷ್ಟ್ರೀಯ ಕ್ರೀಕೆಟ್ ಗೆ ಗುಡ್ ಬೈ ಹೇಳಿದ ಮತ್ತೋರ್ವ ಕ್ರೀಕೆಟಿಗ..!

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here