ಸೊಳ್ಳೆಗಳಿಂದ ಕೊರೊನಾ ವೈರಸ್ ಸೋಂಕು ಹರಡುತ್ತದೆಯೇ ? ತಜ್ಞರು ಹೇಳೋದೇನು ?

mosquitoes-cannot-spread-coronavirus-says-experts

ಕೊರೊನಾ ಸೋಂಕು ವೇಗವಾಗಿ ಎಲ್ಲೆಡೆ ವ್ಯಾಪಿಸುತ್ತಿದೆ. ಈ ಸೋಂಕು ಇಷ್ಟೋಂದು ವೇಗವಾಗಿ ಹರಡಲು ಕಾರಣವೇನು ಎಂದು ಹಲವರು ತಲೆ ಕೆಡಿಸಿಕೊಂಡಿದ್ದಾರೆ. ಈ ನಡುವೆ ಒಂದು ವಿಚಾರ ಬಂದಿದ್ದು, ಅದೇನೆಂದರೆ ಕೊರೊನಾ ವೈರಸ್ ಸೋಂಕು ಸೊಳ್ಳೆಗಳ ಮೂಲಕ ಒಬ್ಬರಿಂದ ಒಬ್ಬರಿಗೆ ಹರಡುತ್ತಿರಬಹುದೇ ? ಎಂದು. ಇದಕ್ಕೆ ಸಂಬಂಧಿಸಿದಂತೆ ಹಲವಾರು ಪ್ರಯೋಗಗಳು ನಡೆದಿದ್ದು, ತಜ್ಞರು ಇದಕ್ಕೆ ಸರಿಯಾದ ಉತ್ತರವನ್ನು ಕಂಡುಕೊಂಡಿದ್ದಾರೆ.

ಈಗ ಮಳೆಗಾಲ ಆಗಿರುವುದರಿಂದ ಸೊಳ್ಳೆಗಳ ಕಾಟವೂ ಹೆಚ್ಚಾಗಿರುತ್ತದೆ. ಅವುಗಳಿಂದ ಡೆಂಗ್ಯು, ಮಲೇರಿಯಾ ಹರಡುವಂತೆ ಕೊರೊನಾ ಸೋಂಕು ಸಹ ಹರಡಬಹುದೇ ಎನ್ನುವ ಆಲೋಚನೆಯೂ ಹಲವರಲ್ಲಿ ಮೂಡಿದ್ದು, ಈ ಕುರಿತು ಹಲವಾರು ಸಂಶೋಧನೆಗಳು ಈಗಾಗಲೇ ನಡೆದಿವೆ. ಇದಕ್ಕೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆಯು ಮಾಹಿತಿಯನ್ನು ನೀಡಿದ್ದು, ಈ ರೀತಿಯಾಗಿ ಹರಡುವ ಸಾಧ್ಯತೆಗಳು ಇಲ್ಲ ಎಂದು ಹೇಳಿದೆ. ಈ ಕುರಿತಂತೆ ಅಮೇರಿಕಾದ ಕಾನ್ಸಾಸ್ ಸ್ಟೇಟ್ ಯೂನಿವರ್ಸಿಟಿಯ ತಜ್ಞರು ಸಂಶೋಧನೆ ನಡೆಸಿದ್ದಾರೆ. ಅವರ ಪ್ರಯೋಗಗಳು ಹೇಗಿತ್ತು ತಿಳಿಯಲು ಮುಂದೆ ಓದಿ..

ಇದನ್ನೂ ಓದಿರಿ: ಕೊರೋನಾ ಸೋಂಕಿಗೆ ಯಾವುದೇ ಚಿಕಿತ್ಸೆ ನೀಡುವ ಕುರಿತು ಡಾ.ಗಿರಿಧರ್ ಕಜೆ ಹೇಳಿದ್ದೇನು ಗೊತ್ತಾ?

ಈ ಸಂಶೋಧನೆಗಾಗಿ ಅವರು ವೈರಾನುಗಳನ್ನು ಹರಡಬಲ್ಲ ಸೊಳ್ಳೆಗಳ ಕೆಲವು ತಳಿಗಳನ್ನು ಆಯ್ದುಕೊಂಡರು. ಇವುಗಳಲ್ಲಿ ಮುಖ್ಯವಾಗಿ ಏಡೀಸ್ ಇಜಿಪ್ಟಿಯನ್, ಕ್ಯುಲೆಕ್ಸ್ ಕ್ಯುಂಕೆಫ್ಯಾಸಿಯಾಟಸ್, ಏಡೀಸ್ ಅಲ್ಬೋಪಿಕ್ಟಸ್ ಮುಂತಾದ ಸೊಳ್ಳೆಗಳ ಮೇಲೆ ಪ್ರಯೋಗವು ನಡೆದವು. ಈ ಪ್ರಯೋಗದಲ್ಲಿ ಕಾರೋನಾ ವೈರಸ್ ಸೊಳ್ಳೆಗಳ ಮೇಲೆ ಯಾವುದೇ ರೋಗಾ ಹರಡಲು ಸಾಧ್ಯವಾಗಲಿಲ್ಲ. ಇದಲ್ಲದೆ ಸೊಳ್ಳೆಗಳ ದೇಹದಲ್ಲಿ ತಮ್ಮ ಸಂತತಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಸಂಶೋಧನಾ ತಂಡದ ಸ್ಟೀಫನ್ ಹಿಗ್ಸ್ ಹೇಳಿದ್ದಾರೆ.

ಈ ಸಂಶೋಧನೆಯ ಮೂಲಕ ಸೊಳ್ಳೆಗಳಿಂದಾಗಿ ಒಬ್ಬರಿಂದ ಒಬ್ಬರಿಗೆ ಕೊರೊನಾ ಸೋಂಕು ಹರಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಸೋಂಕಿತ ವ್ಯಕ್ತಗೆ ಕಡಿದ ಸೊಳ್ಳೆಯೂ ಆರೋಗ್ಯವಂತನಿಗೆ ಕಡಿಯುವುದರಿಂದ ಕೊರೊನಾ ಸೋಂಕು ಹರಡಬಹುದೇ ಎನ್ನುವ ಶಂಕೆಗೆ ತೆರೆ ಬಿದ್ದಿದೆ. ಇದರಿಂದಾಗಿ ಡೆಂಗ್ಯು ಮಲೇರಿಯಾದಂತೆ ಸೊಳ್ಳೆಗಳಿಂದ ಈ ರೋಗ ಹರಡುವುದಿಲ್ಲ ಎಂದು ಸಂತಸ ಪಡಬಹುದಾಗಿದೆ.

ಇದನ್ನೂ ಓದಿರಿ: ಆಯುರ್ವೇದ ಈ ಕಷಾಯ ಶೀತ ಕೆಮ್ಮು ಜ್ವರಕ್ಕೆ ರಾಮಬಾಣ..!

LEAVE A REPLY

Please enter your comment!
Please enter your name here