ಬೆಂಗಳೂರು (ಜೂ.4): ಈ ವರ್ಷದ ಮಾನ್ಸೂನ್ (monsoon) ಕೇರಳಕ್ಕೆ ಎಂಟ್ರಿ ನೀಡಿದ್ದು, ಉತ್ತಮ ಮಳೆಯಾಗುತ್ತಿದೆ. ರಾಜ್ಯಕ್ಕೆ ಜೂನ್ 6 ಅಥವಾ 7 ರಂದು ಆಗಮಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಮೇ 31 ರಂದು ಮಾನ್ಸೂನ್ ಆಗಮನ ಆಗಲಿದೆ ಎಂದು ಹೇಳಲಾಗಿತ್ತು. ಆದರೆ ಮೂರೂ ದಿನ ತಡವಾಗಿ ಪ್ರವೇಶಿಸಿದೆ. ಮಾನ್ಸೂನ್ (monsoon) ಈಗಾಗಲೆ ಕೇರಳಕ್ಕೆ ಎಂಟ್ರಿ ಕೊಟ್ಟಿದ್ದು, ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿಯೂ ಮುಂಗಾರಿನ ಮಳೆಯ ಆರ್ಭಟ ಜೋರಾಗಲಿದೆ.
ಕೇರಳದ ಕೆಲವು ಜಿಲ್ಲೆಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ರಾಜ್ಯದಲ್ಲಿ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಪ್ರಬಲವಾದ ಗಾಳಿ ಬೀಸಲಿದೆಯೆಂದು ಹೇಳಲಾಗಿದೆ. ಈ ಕಾರಣಕ್ಕಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಕರ್ನಾಟಕಕ್ಕೆ ಮಾನ್ಸೂನ್ ಜೂನ್ 6 ಅಥವಾ 7 ರಂದು ಪ್ರವೇಶ ಮಾಡಲಿದ್ದು, ಈ ಬಾರಿ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇದನ್ನೂ ಓದಿರಿ: ದ್ವಿತೀಯ PUC ಪರೀಕ್ಷೆ ರದ್ದು, ಜುಲೈ ಅಥವಾ ಆಗಸ್ಟ್ ನಲ್ಲಿ SSLC ಪರೀಕ್ಷೆ – ಇಲ್ಲಿದೆ ಸಂಪೂರ್ಣ ಮಾಹಿತಿ