ಪಾಟ್ನಾ : ಈಗಿನ ಟ್ರೆಂಡನ್ನು ನೋಡಿದರೆ 2019 ರಲ್ಲಿಯೂ ಏನ್ ಡಿ ಎ ಮೈತ್ರಿಕೂಟವು ಬಹುಮತವನ್ನು ಸಾಧಿಸಲಿದೆ ಎಂದು ನಿತೀಶ್ ಕುಮಾರ್ ಅವರು ಹೇಳಿದ್ದಾರೆ. ಮತ್ತೊಮ್ಮೆ ನರೇಂದ್ರ ಮೋದಿಯವರು ಈ ದೇಶದ ಪ್ರಧಾನಿಯಾಗುವ ಎಲ್ಲ ಸೂಚನೆಗಳು ಗೋಚರಿಸುತ್ತಿವೆ ಎಂದಿದ್ದಾರೆ.

ನರೇಂದ್ರ ಮೋದಿಯವರು ಅಧಿಕಾರಕ್ಕೆ ಏರಿದಂದಿನಿಂದಲೂ ದೇಶದ ಪ್ರಗತಿಗಾಗಿ ಅನೇಕ ಯೋಜನೆಗಳನ್ನು ತಂದಿದ್ದಾರೆ. ಅನೇಕ ರಾಜತಾಂತ್ರಿಕ ಮಾತುಕತೆಗಳಿಂದಾಗಿ ದೇಶಕ್ಕೆ ಬಂಡವಾಳವನ್ನು ತರಿಸಿದ್ದಾರೆ. ಅವರ ಆಡಳಿತದಲ್ಲಿ ಭಾರತವು ವಿಶ್ವದ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಹೊರಹೊಮ್ಮಿದೆ. ವಿಶ್ವದ ದೃಷ್ಟಿಯಲ್ಲಿ ಭಾರತವನ್ನು ಒಂದು ಒಳ್ಳೆಯ ಸ್ಥಾನದಲ್ಲಿ ಇಡಲು ಪ್ರಯತ್ನಿಸಿ ಯಶಸ್ವಿಯಾಗಿದ್ದಾರೆ. ಮೋದಿಯವರ ಆಡಳಿತವನ್ನು ಬೆಂಬಲಿಸುವ ಜನಸಾಮಾನ್ಯರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಲೋಕ ಸಂವಾದದಲ್ಲಿ ಮಾತನಾಡುತ್ತ, ಇಂದಿನ ಸನ್ನಿವೇಶವನ್ನು ನೋಡಿದರೆ 2019 ರಲ್ಲಿ ಮತ್ತೊಮ್ಮೆ ನರೇಂದ್ರ ಮೋದಿಯವರು ಪ್ರಧಾನಿಯಾಗುವುದು ಖಚಿತ ಎನಿಸುತ್ತಿದೆ. ಆದರೆ ಪ್ರಜಾಪ್ರಭುತ್ವದಲ್ಲಿ ಜನರ ನಿರ್ಧಾರವೇ ಅಂತಿಮ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ. ಪಂಚ ರಾಜ್ಯ ಚುನಾವಣೆಯಲ್ಲಿನ ರಾಜಸ್ಥಾನ, ಮದ್ಯಪ್ರದೇಶ ಮತ್ತು ಚತ್ತೀಸ್ಗಡ ಈ ಮೂರೂ ರಾಜ್ಯಗಳ ಫಲಿತಾಂಶವನ್ನು ನೋಡಿದರೆ ಶೇಕಡಾವಾರು ಮತಗಳು ಕಾಂಗ್ರೆಸ್ ಗಿಂತಲೂ ಬಿಜೆಪಿಗೆ ಹೆಚ್ಚೇನು ವ್ಯಾತ್ಯಾಸವಾದಂತೆ ತೋರುತ್ತಿಲ್ಲ. ಇಲ್ಲಿ ಎರಡೂ ಪಕ್ಷಗಳು ಸಮಾನವಾದ ಮತಗಳನ್ನು ಪಡೆದಿರುವುದು ತೋರುತ್ತದೆ. ಈ ಎಲ್ಲ ವಿಷಯಗಳನ್ನು ತೆಗೆದುಕೊಂಡು ವಿಶ್ಲೇಶಿದಾಗ ಮತ್ತೊಮ್ಮೆ ಬಿಜೆಪಿ ಮೈತ್ರಿಕೂಟ ಅಧಿಕಾರ ಹಿಡಿಯುತ್ತದೆ ಎಂದು ಹೇಳಿದರು.

ಇದನ್ನು ಓದಿರಿ : ಬಡವರಿಗೆ ಮೋದಿಜಿ ಕೊಟ್ರು ಭರ್ಜರಿ ಆಪರ್…!

Image Copyright: google.com

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here