ನರೇಂದ್ರ ಮೋದಿಯವರು ಪ್ರಧಾನಿಯಾಗುವುದಕ್ಕೂ ಮೊದಲು ಜನರಲ್ಲಿ ಹೆಚ್ಚಿನ ನಿರೀಕ್ಷೆಗಳನ್ನು ಉಂಟುಮಾದಿದ್ದರು. ಗುಜರಾತಿನಲ್ಲಿನ ಅವರ ಕ್ರಿಯಾಶೀಲ ಮತ್ತು ಅಭಿವ್ರದ್ಧಿಪರ ಆಡಳಿತವನ್ನು ನೋಡಿದ್ದ ಜನತೆ ಇವರು ಪ್ರಧಾನಿಯಾದರೆ ಸೂಕ್ತ ಎಂಬ ನಿರ್ಧಾರಕ್ಕೆ ಬಂದಿದ್ದರು. ಅಂತೆಯೇ ಅವರನ್ನು ಅತಿ ಹೆಚ್ಚಿನ ಬಹುಮತದೊಂದಿಗೆ ಆಯ್ಕೆಮಾಡಿದರು. ನರೇಂದ್ರ ಮೋದಿ ಪ್ರಧಾನಿಯಾದ ನಂತರ ಅನೇಕ ಜನಪರ ಮತ್ತು ದೇಶದ ಅಭಿವ್ರದ್ಧಿಯ ದೃಷ್ಟಿಯಿಂದ ಅವಶ್ಯವಿರುವ ಅನೇಕ ಯೋಜನೆಗಳನ್ನು ಜಾರಿಗೆ ತಂದರು. ನೋಟ್ ಅಮಾನ್ಯಿಕರಣ ಮತ್ತು ಜಿಎಸ್ಟಿ ತೆರಿಗೆ ಪದ್ದತಿಗಳು ಅವರ ದೂರದ್ರುಷ್ಟಿ ಆಡಳಿತಕ್ಕೆ ಹಿಡಿದ ಕೈಗನ್ನಡಿಗಳಾಗಿವೆ. ದೇಶದ ಪ್ರತಿ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡುವ ಮಹತ್ವಾಕಾಂಕ್ಷೆಯ ಯೋಜನೆಯೊಂದನ್ನು ಘೋಷಿಸಿದ್ದರು.

ದೇಶದ ಪ್ರತಿ ಮನೆಯು ವಿದ್ಯುತ್ ಸಂಪರ್ಕವನ್ನು ಹೊಂದಬೇಕು, ಎಂಬ ಉದ್ದೇಶದಿಂದ ಮೋದಿಯವರು 2.3 ಶತಕೋಟಿ ಡಾಲರ್ ವೆಚ್ಚದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಯೋಜನೆ ಸಿದ್ದಪಡಿಸಿಕೊಂಡಿದ್ದರು. ಈ ಯೋಜನೆಯು ತೀವ್ರ ಪ್ರಗತಿಯಿಂದ ಸಾಗಿ ವಿವಿಧ 25 ರಾಜ್ಯಗಳಲ್ಲಿ ಸುಮಾರು 23.9 ಮಿಲಿಯನ್ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ನೀಡುವ ಮೂಲಕ ಮಹತ್ವದ ಸಾಧನೆಯನ್ನು ಮಾಡಿದೆ. ಸಂಪೂರ್ಣ ವಿದ್ಯುದೀಕರಣ ಎನ್ನುವುದು ಮೋದಿಯವರ ಪ್ರಮುಖ ಸುಧಾರಣೆಗಳಲ್ಲಿ ಒಂದಾಗಿದ್ದು, ಗ್ರಾಮೀಣ ಸಮುದಾಯಗಳಿಗೆ ಸರಕಾರದಿಂದ ಕೊಡುಗೆ ನೀಡಲು ಈ ಯೋಜನೆಯನ್ನು ಜಾರಿಗೊಳಿಸಲಾಗಿತ್ತು.

ಈ ಯೋಜನೆ ಅನೇಕರಿಗೆ ಪ್ರಯೋಜನ ಕಲ್ಪಿಸಿದರೂ ಇನ್ನೂ ಕೆಲವು ರಾಜ್ಯಗಳಲ್ಲಿ ಸಂಪೂರ್ಣ ಅನುಷ್ಟಾನಗೊಳ್ಳದಿರುವುದು ಬೇಸರದ ಸಂಗತಿಯಾಗಿದೆ. ಈ ಯೋಜನೆಯು 4 ರಾಜ್ಯಗಳಲ್ಲಿ ಸುಮಾರು 1.05 ಮಿಲಿಯನ್ ಮನೆಗಳಿಗೆ ಇನ್ನೂ ತಲುಪಿಲ್ಲ. ನವೆಂಬರ್ ನಲ್ಲಿ ಸರಕಾರ ನೀಡಿದ ಹೇಳಿಕೆಯಂತೆ ಡಿಸೆಂಬರ್ 31 ರ ಗುರಿಯನ್ನು ತಲುಪಲು ಇನ್ನೂ ಮೂರು ತಿಂಗಳು ಬೇಕಾಗಬಹುದು ಎಂದು ನಿರೀಕ್ಷಿಸಲಾಗಿದೆ. ಈ ಕುರಿತು ದೆಹಲಿಯ ಕೌನ್ಸಿಲ್ ಆನ್ ಎನರ್ಜಿ ಎನ್ವಿರಾನ್ಮೆಂಟಲ್ ಎಂಡ್ ವಾಟರ್ ಸಂಸ್ಥೆಯ ಅಭಿಷೇಕ್ ಜೈನ್ ಮಾತನಾಡಿ, ” ವಿದ್ಯುತ್ ಸಂಪರ್ಕ ಕಲ್ಪಿಸಬೇಕಾಗಿರುವ ಮನೆಗಳು ಹಾಗೂ ಗ್ರಾಮಗಳಲ್ಲಿ ಹೊಸ ಸಂಪರ್ಕ ಕಲ್ಪಿಸುವುದು ಅತ್ಯಂತ ಸವಾಲಿನ ವಿಷಯವಾಗಿದೆ. ಆದರೆ ಈ ಆಭೂತಪೂರ್ವ ಕೆಲಸದಿಂದ ಹಿಂದೆ ಸರಿಯುವ ಮಾತೆ ಇಲ್ಲಾ” ಎಂದು ಹೇಳಿದ್ದಾರೆ.

ಇದನ್ನೂ ಓದಿರಿ : ಲೋಕಸಭೆಯಲ್ಲಿ ಐತಿಹಾಸಿಕ ತ್ರಿವಳಿ ತಲಾಕ್ ನಿಷೇಧ ಮಸೂದೆ ಅಂಗೀಕಾರ

ಸದ್ಯದಲ್ಲಿಯೇ ಲೋಕಸಭಾ ಚುನಾವಣೆಯು ಬಂದಿದ್ದು, ಜನತೆಗೆ ಈ ಯೋಜನೆಯನ್ನು ತಲುಪಿಸುವುದು ಅವಶ್ಯವಾಗಿದೆ. ಅಲ್ಲದೇ ಈ ಯೋಜನೆಯ ಯಶಸ್ಸು ಮೋದಿ ಸರಕಾರಕ್ಕೆ ವರಧಾನವಾಗುವ ಎಲ್ಲ ಲಕ್ಷಣಗಳು ಕಂಡು ಬರುತ್ತಿವೆ.

ಇದನ್ನೂ ಓದಿರಿ : ಈ ಸೊಪ್ಪಿನಲ್ಲಿದೆ ಅಸ್ತಮಾ, ಹೊಟ್ಟೆಹುಣ್ಣು ಮುಂತಾದ ಸಮಸ್ಯೆಗಳನ್ನು ನಿವಾರಿಸುವ ಗುಣ..!

Image Copyright:google.com

LEAVE A REPLY

Please enter your comment!
Please enter your name here