ಉತ್ತರ ಪ್ರದೇಶ: ದೀಪಾವಳಿ ದೀಪೋತ್ಸವದಲ್ಲಿ ಪಾಲ್ಗೊಳ್ಳಲು ಇದೇ ಮೊದಲಬಾರಿಗೆ ಪ್ರಧಾನಿ ನರೇಂದ್ರ ಮೋದಿಯವರು ಅಯೋಧ್ಯೆಗೆ ಬಂದಿಳಿದಿದ್ದಾರೆ. ನೇರವಾಗಿ ರಾಮಮಂದಿರಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಸರಯೂ ನದಿ ತೀರದಲ್ಲಿ ಆರತಿ, ದೀಪೋತ್ಸವ ಸೇರಿ ಹಲವು ಕಾರ್ಯಕ್ರಮಗಳಲ್ಲಿ ಮೋದಿ ಭಾಗಿಯಾಗಲಿದ್ದಾರೆ.
ಅಯೋಧ್ಯೆಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಾಗತಿಸಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜ್ಯಪಾಲೆ ಆನಂದಿಬೆನ್ ಪಟೇಲ್ ಸೇರಿ ಹಲವರು ಗಣ್ಯರು ಆಗಮಿಸಿದ್ದರು. ಅಲ್ಲಿಂದ ನೇರವಾಗಿ ರಾಮಮಂದಿರಕ್ಕೆ ತೆರಳಿ ಸಾಂಕೇತಿಕ ಪಟ್ಟಾಭಿಷೇಕ ನೆರವೇರಿಸಿದರು. ನಂತರ ಭವ್ಯವಾಗಿ ನಿರ್ಮಾಣವಾಗುತ್ತಿರುವ ಶ್ರೀ ರಾಮಮಂದಿರ ನಿರ್ಮಾಣ ಕಾರ್ಯವನ್ನು ವೀಕ್ಷಿಸಿದರು.
ಅಯೋಧ್ಯೆಯಲ್ಲಿ ಭಾನುವಾರ ಸಂಜೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಮೋದಿ, “ಅಯೋಧ್ಯೆಯನ್ನು ಸ್ವರ್ಗಕ್ಕೆ ಹೋಲಿಸುವ ಕಾಲವೂ ಇತ್ತು. ಆದರೆ, ಈಗ ಅಯೋಧ್ಯೆ ಅಭಿವೃದ್ಧಿಯ ವಿಚಾರದಲ್ಲಿ ಹೊಸ ಮಟ್ಟಕ್ಕೇರುತ್ತಿದೆ. ಹಿಂದೆ, ಭಗವಾನ್ ರಾಮನ ಅಸ್ತಿತ್ವದ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಗಿತ್ತು ಇಂದು ಅಯೋಧ್ಯೆಯ ಅಭಿವೃದ್ಧಿಗೆ ಸಾವಿರಾರು ಕೋಟಿಗಳನ್ನು ಖರ್ಚು ಮಾಡಲಾಗುತ್ತಿದೆ” ಎಂದು ಅವರು ಹೇಳಿದರು.
ಸರಯೂ ನದಿಯ ತಟದಲ್ಲಿ ನಡೆಯುವ ದೀಪೋತ್ಸವದಲ್ಲಿ ಪಾಲ್ಗೊಂಡು ಚಾಲನೆಯನ್ನೂ ನೀಡಲಿದ್ದಾರೆ. ಇದರೊಂದಿಗೆ ಹಲವು ಅಭಿವೃದ್ಧಿ ಕಾಮಘಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಹೇಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಆಘಮನದ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಇದನ್ನೂ ಓದಿರಿ: IND vs PAK: ಕೊಹ್ಲಿ, ಪಾಂಡ್ಯ ಜೊತೆಯಾಟಕ್ಕೆ ಗೆದ್ದು ಬೀಗಿದ ಭಾರತ